ತಂದೆ ಹುಟ್ಟುಹಬ್ಬಕ್ಕೆ ಭಾವುಕ ಸಂದೇಶ ನೀಡಿದ ಕನ್ನಡದ ನಟಿ

ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್​ಡೌನ್​ ಮಾಡಲಾಗಿದೆ. ಇದರಿಂದ ಸೆಲೆಬ್ರಿಟಿಗಳು ಮನೆಯಲ್ಲೇ ಸಮಯ ಕಳೆಯುವಂತಾಗಿದೆ. ಹಾಗಾಗಿ ತಮ್ಮ ಜೀವನಕ್ರಮ, ಅಡುಗೆ ಮತ್ತು ಮನೆಕೆಲಸಗಳ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಕನ್ನಡತಿ ಅನುಷ್ಕಾ ಶೆಟ್ಟಿ ಸಹ ಅವರ ತಂದೆಗೆ ಪ್ರೀತಿಯ ಸಂದೇಶ ಹೇಳಿರುವ ಫ್ಯಾಮಿಲಿ ಫೋಟೋ ವೈರಲ್ ಆಗಿದೆ. ಅನುಷ್ಕಾ ಶೆಟ್ಟಿ ಅಮ್ಮನ ಹುಟ್ಟುಹಬ್ಬಕ್ಕೆ ಕನ್ನಡದಲ್ಲಿ ವಿಶ್ ಮಾಡುವ ಮೂಲಕ ನೆಟ್ಟಿಗರ ಮನ ಗೆದ್ದಿದರು. ಆದರೆ ಈ ಸಲ ತಂದೆ ವಿಠಲ್ ಶೆಟ್ಟಿ […]

ತಂದೆ ಹುಟ್ಟುಹಬ್ಬಕ್ಕೆ ಭಾವುಕ ಸಂದೇಶ ನೀಡಿದ ಕನ್ನಡದ ನಟಿ

Updated on: Apr 21, 2020 | 12:19 PM

ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್​ಡೌನ್​ ಮಾಡಲಾಗಿದೆ. ಇದರಿಂದ ಸೆಲೆಬ್ರಿಟಿಗಳು ಮನೆಯಲ್ಲೇ ಸಮಯ ಕಳೆಯುವಂತಾಗಿದೆ. ಹಾಗಾಗಿ ತಮ್ಮ ಜೀವನಕ್ರಮ, ಅಡುಗೆ ಮತ್ತು ಮನೆಕೆಲಸಗಳ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದೀಗ ಕನ್ನಡತಿ ಅನುಷ್ಕಾ ಶೆಟ್ಟಿ ಸಹ ಅವರ ತಂದೆಗೆ ಪ್ರೀತಿಯ ಸಂದೇಶ ಹೇಳಿರುವ ಫ್ಯಾಮಿಲಿ ಫೋಟೋ ವೈರಲ್ ಆಗಿದೆ. ಅನುಷ್ಕಾ ಶೆಟ್ಟಿ ಅಮ್ಮನ ಹುಟ್ಟುಹಬ್ಬಕ್ಕೆ ಕನ್ನಡದಲ್ಲಿ ವಿಶ್ ಮಾಡುವ ಮೂಲಕ ನೆಟ್ಟಿಗರ ಮನ ಗೆದ್ದಿದರು. ಆದರೆ ಈ ಸಲ ತಂದೆ ವಿಠಲ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಇಂಗ್ಲಿಷ್​ನಲ್ಲಿ ಭಾವುಕರಾಗಿ ವಿಶ್ ಮಾಡಿದ್ದಾರೆ.