‘ಕಾಂತಾರ’ ಬೆಡಗಿ ಸಪ್ತಮಿಗೆ ತೆಲುಗಿನಲ್ಲಿ ಮತ್ತೊಂದು ಬಂಪರ್ ಆಫರ್

‘ಕಾಂತಾರ’ ಸಿನಿಮಾದ ಬಳಿಕ ಬಾಲಿವುಡ್​​ಗೆ ಸಹ ಹೋಗಿ ಬಂದರು ನಟಿ ಸಪ್ತಮಿ ಗೌಡ. ಆದರೆ ಅವರಿಗೆ ‘ಕಾಂತಾರ’ದಂಥಹ ಮತ್ತೊಂದು ಯಶಸ್ಸು ಸಿಕ್ಕಿಲ್ಲ. ಇದೀಗ ಸಪ್ತಮಿ ಗೌಡ ತೆಲುಗಿನ ಸಿನಿಮಾ ಒಂದರಲ್ಲಿ ನಟಿಸಲು ರೆಡಿಯಾಗಿದ್ದಾರೆ. ಈಗಾಗಲೇ ಒಂದು ತೆಲುಗು ಸಿನಿಮಾನಲ್ಲಿ ಸಪ್ತಮಿ ನಟಿಸಿದ್ದು, ಇದೀಗ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

‘ಕಾಂತಾರ’ ಬೆಡಗಿ ಸಪ್ತಮಿಗೆ ತೆಲುಗಿನಲ್ಲಿ ಮತ್ತೊಂದು ಬಂಪರ್ ಆಫರ್
Sapathami Gowda Sai Dharam

Updated on: Oct 27, 2026 | 11:05 AM

ಮುಖ್ಯಾಂಶಗಳು

  • ತೆಲುಗಿಗೆ ಹೋಗುತ್ತಿರುವ ನಟಿ ಸಪ್ತಮಿ ಗೌಡ
  • ಈ ಹಿಂದೆಯೇ ಒಂದು ತೆಲುಗು ಸಿನಿಮಾನಲ್ಲಿ ನಟಿಸಿದ್ದರು
  • ಈಗ ಸಾಯಿ ಧರಂ ತೇಜ್ ಜೊತೆ ನಟನೆ

ಸಪ್ತಮಿ ಗೌಡ, ‘ಕಾಂತಾರ’ ಸಿನಿಮಾ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಕಂಡುಕೊಂಡ ನಟಿ. ತಮ್ಮ ನಟನಾ ಶಕ್ತಿಯನ್ನು ‘ಕಾಂತಾರ’ ಸಿನಿಮಾನಲ್ಲಿ ಅವರು ಸಾಬೀತುಪಡಿಸಿದ್ದರು. ‘ಕಾಂತಾರ’ ಸಿನಿಮಾದ ಬಳಿಕ ಬಾಲಿವುಡ್​​ಗೆ ಸಹ ಹೋಗಿ ಬಂದರು ನಟಿ. ಆದರೆ ಅವರಿಗೆ ‘ಕಾಂತಾರ’ದಂಥಹ ಮತ್ತೊಂದು ಯಶಸ್ಸು ಸಿಕ್ಕಿಲ್ಲ. ಇದೀಗ ಸಪ್ತಮಿ ಗೌಡ ತೆಲುಗಿನ ಸಿನಿಮಾ ಒಂದರಲ್ಲಿ ನಟಿಸಲು ರೆಡಿಯಾಗಿದ್ದಾರೆ. ಈಗಾಗಲೇ ಒಂದು ತೆಲುಗು ಸಿನಿಮಾನಲ್ಲಿ ಸಪ್ತಮಿ ನಟಿಸಿದ್ದು, ಇದೀಗ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಮೆಗಾ ಫ್ಯಾಮಿಲಿಯ ಸದಸ್ಯ ಸಾಯಿ ಧರಂ ತೇಜ್ ನಟಿಸಲಿರುವ ಹೊಸ ತೆಲುಗು ಸಿನಿಮಾನಲ್ಲಿ ಸಪ್ತಮಿ ಗೌಡ ನಾಯಕಿ. ‘ಸಂಬರಾಲ ಏಟಿಗಟ್ಟು’ ಹೆಸರಿನ ಸಿನಿಮಾನಲ್ಲಿ ಸಪ್ತಮಿ ಮತ್ತು ಸಾಯಿ ಒಟ್ಟಿಗೆ ನಟಿಸುತ್ತಿದ್ದು, ಈ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿ ಸಮಯಕ್ಕೆ ಬಿಡುಗಡೆ ಆಗಲಿದೆ. ಇದು ಸಪ್ತಮಿ ಗೌಡ ನಟನೆ ಮಾಡಲಿರುವ ಎರಡನೇ ತೆಲುಗು ಸಿನಿಮಾ ಆಗಿರಲಿದೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದೆಯಂತೆ.

ಸಪ್ತಮಿ ಗೌಡ ನಟಿಸುತ್ತಿರುವುದು ಹಳ್ಳಿಗಾಡಿನ ಕತೆ ಹೊಂದಿರುವ ಕೌಟುಂಬಿಕ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಸಪ್ತಮಿ ಅವರದ್ದು ಹಳ್ಳಿ ಯುವತಿಯ ಪಾತ್ರ. ಸಿನಿಮಾದ ಹಲವು ಪ್ರಮುಖ ಭಾಗಗಳ ಚಿತ್ರೀಕರಣವನ್ನು ಕಾಡಿನ ಪರಿಸರದಲ್ಲಿ ಮಾಡಲಾಗುತ್ತದೆಯಂತೆ. ಸಿನಿಮಾನಲ್ಲಿ ವಿಎಫ್​​ಎಕ್ಸ್ ಬಳಕೆಯೂ ಹೆಚ್ಚಾಗಿ ಇರಲಿದ್ದು, ಸಾಯಿ ಧರಂ ತೇಜ್ ಅವರ ಈ ವರೆಗಿನ ದೊಡ್ಡ ಬಜೆಟ್​​ ಸಿನಿಮಾ ಇದಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ಅಬ್ಬಬ್ಬಾ ಸಪ್ತಮಿ ಗೌಡ ವ್ಯಾಯಾಮ ಮಾಡುವ ರೀತಿ ನೋಡಿ: ವಿಡಿಯೋ

ಈ ಹಿಂದೆ ಸಪ್ತಮಿ ಗೌಡ ಅವರು ತೆಲುಗಿನ ‘ತಮ್ಮುಡು’ ಸಿನಿಮಾನಲ್ಲಿ ನಟನೆ ಮಾಡಿದ್ದರು. ಆ ಸಿನಿಮಾನಲ್ಲಿ ನಿತಿನ್ ನಾಯಕ. ಸಿನಿಮಾನಲ್ಲಿ ಬುಡಕಟ್ಟು ಸಮುದಾಯವೊಂದರ ಯುವತಿಯ ಪಾತ್ರದಲ್ಲಿ ಸಪ್ತಮಿ ಗೌಡ ನಟಿಸಿದ್ದರು. ಆದರೆ ಆ ಸಿನಿಮಾ ದೊಡ್ಡ ಯಶಸ್ಸು ಕಾಣಲಿಲ್ಲ. ಆದರೂ ಸಹ ಸಪ್ತಮಿಯ ಪ್ರತಿಭೆ ಮೇಲೆ ನಂಬಿಕೆ ಇರಿಸಿ ಇದೀಗ ಮತ್ತೊಂದು ತೆಲುಗು ಸಿನಿಮಾದ ಆಫರ್ ಅನ್ನು ಅವರಿಗೆ ನೀಡಲಾಗಿದೆ.

ಸಪ್ತಮಿ ಗೌಡ ಪ್ರಸ್ತುತ ಕನ್ನಡದ ‘ಹಲಗಲಿ’ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ. ಅದಾದ ಬಳಿಕ ‘ಉಗ್ರಾಯುಧಂ’ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ. ಇದೀಗ ಅದರ ಜೊತೆಗೆ ‘ಸಂಬರಾಲ ಏಟಿಕಟ್ಟು’ ಸಹ ಸೇರಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:57 am, Tue, 27 October 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us