
ಕಿರುತೆರೆ ನಟಿ ಸ್ಪಂದನಾ ಸೋಮಣ್ಣ ಅವರ ವಿವಾಹದ ದಿನಗಳು ಸಮೀಪಿಸುತ್ತಿವೆ. ಹಲವು ವರ್ಷಗಳ ಗೆಳೆಯ ವರುಣ್ ಮುನಿರಾಜು ಜೊತೆ ಹಸೆಮಣೆ ಏರುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ವರುಣ್ ಅವರನ್ನು ಸ್ವಾಗತಿಸಿದ ಸುಂದರ ಕ್ಷಣಗಳ ವಿಡಿಯೋವನ್ನು ಸ್ಪಂದನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ರೊಮ್ಯಾಂಟಿಕ್ ವಿಡಿಯೋ ಈಗ ಅಭಿಮಾನಿಗಳ ಗಮನ ಸೆಳೆದಿದೆ.
ದೂರದ ವಾಸ ಎಷ್ಟು ಕಷ್ಟಕರ ಎಂಬ ಬಗ್ಗೆ ಸ್ಪಂದನಾ ಭಾವುಕರಾಗಿ ಬರೆದುಕೊಂಡಿದ್ದಾರೆ. ‘ಅಂತಿಮವಾಗಿ ವಿಮಾನ ನಿಲ್ದಾಣದ ಬೀಳ್ಕೊಡುಗೆಗಳು ಮುಗಿಯುತ್ತಿವೆ ಮತ್ತು ಶಾಶ್ವತತೆಯ ಆರಂಭವು ಇಲ್ಲಿದೆ’ ಎಂದು ಬರೆದಿದ್ದಾರೆ. ಕಣ್ಣೀರು, ದಿನಗಳ ಕೌಂಟ್‌ಡೌನ್, ತಪ್ಪಿದ ಅಪ್ಪುಗೆಗಳು ಮತ್ತು ಮುಗಿಯದ ಏರ್‌ಪೋರ್ಟ್ ವಿದಾಯಗಳನ್ನು ವರ್ಷಗಟ್ಟಲೆ ಅನುಭವಿಸಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.
ಕೊನೆಗೂ ಪ್ರೀತಿಯೇ ಗೆದ್ದಿದೆ ಎಂದು ಸ್ಪಂದನಾ ಖುಷಿ ಹಂಚಿಕೊಂಡಿದ್ದಾರೆ. ‘ಇನ್ನು ಮುಂದೆ ಯಾವುದೇ ವಿದಾಯಗಳಿಲ್ಲ, ದಿನಗಳನ್ನು ಎಣಿಸುವುದಿಲ್ಲ, ಬದಲಿಗೆ ಒಟ್ಟಾಗಿ ಇಡಿಯಾದ ಜೀವನವಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಇನ್ನು ಮುಂದೆ ದೂರವಿರುವುದಿಲ್ಲ ಎಂಬ ತಮ್ಮ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೆಲವರ ನೆಗೆಟಿವ್ ಕಮೆಂಟ್‌ಗಳಿಗೂ ಸ್ಪಂದನಾ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ‘ಕೆಲವರು ಕಮೆಂಟ್‌ಗಳಲ್ಲಿ ಅನಗತ್ಯವಾಗಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾನು ಹೇಳುವುದೊಂದೇ – ಹೀಗೆಯೇ ತಲೆಕೆಡಿಸಿಕೊಳ್ಳುತ್ತಿರಿ, ನಾವು ಮಾತ್ರ ಸದಾ ಖುಷಿಯಾಗಿರುತ್ತೇವೆ’ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ವರುಣ್ ಮುನಿರಾಜು ಜೊತೆಗಿನ ಲವ್ ಸ್ಟೋರಿ ರಿವೀಲ್ ಮಾಡಿದ ಸ್ಪಂದನಾ ಸೋಮಣ್ಣ
ಸದ್ಯ ಸ್ಪಂದನಾ ಸೋಮಣ್ಣ ಮತ್ತು ವರುಣ್ ಮುನಿರಾಜು ಅವರ ಈ ವಿಡಿಯೋ ಹಾಗೂ ಪ್ರೀತಿಯ ಸಂದೇಶ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ನಟಿಯ ಮದುವೆ ಸಮಾರಂಭಕ್ಕಾಗಿ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದು, ನವಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.