‘ಕೆಜಿಎಫ್’ ಬಳಿಕ ಎಂಟು ಕೋಟಿ ಸಂಭಾವನೆ? ಶ್ರೀನಿಧಿ ಹೇಳಿದ್ದೇನು?

‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾನಲ್ಲಿ ಕೆಲಸ ಮಾಡಿದ ಹಲವರಿಗೆ ಅದ್ಭುತ ಭವಿಷ್ಯ ದೊರಕಿತು. ಆದರೆ ಆ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಶ್ರೀನಿಧಿ ಶೆಟ್ಟಿಗೆ ದೊಡ್ಡ ಅವಕಾಶಗಳು ‘ಕೆಜಿಎಫ್’ ಬಳಿಕ ಬರಲಿಲ್ಲ. ಅದಕ್ಕೆ ಹಲವು ಕಾರಣಗಳಿದ್ದವು. ವಿಶೇಷವೆಂದರೆ ‘ಕೆಜಿಎಫ್’ ಬಳಿಕ ಶ್ರೀನಿಧಿ ಶೆಟ್ಟಿ ಅವರು ದೊಡ್ಡ ಸಂಭಾವನೆ ಕೇಳಿದರು ಎಂಬುದು ಸಹ ಒಂದು. ಈ ಬಗ್ಗೆ ಖುದ್ದು ಶ್ರೀನಿಧಿ ಶೆಟ್ಟಿ ಅವರೇ ಮಾತನಾಡಿದ್ದಾರೆ.

‘ಕೆಜಿಎಫ್’ ಬಳಿಕ ಎಂಟು ಕೋಟಿ ಸಂಭಾವನೆ? ಶ್ರೀನಿಧಿ ಹೇಳಿದ್ದೇನು?
Srinidhi Shetty

Updated on: Oct 27, 2026 | 3:39 PM

ಮುಖ್ಯಾಂಶಗಳು

  • ‘ಕೆಜಿಎಫ್’ ಸಿನಿಮಾ ನಾಯಕಿ ಶ್ರೀನಿಧಿ ಶೆಟ್ಟಿ
  • ಶ್ರೀನಿಧಿ ಶೆಟ್ಟಿ ಸಂಭಾವನೆ ಬಗ್ಗೆ ಹರಡಿತ್ತು ವದಂತಿ
  • ಸಂಭಾವನೆ ಬಗ್ಗೆ ಸ್ಪಷ್ಟನೆ ನೀಡಿದ ಶ್ರೀನಿಧಿ ಶೆಟ್ಟಿ

‘ಕೆಜಿಎಫ್’ ಸಿನಿಮಾ ಮೂಲಕ ಯಶ್ ಸ್ಟಾರ್ ಆದರು. ಪ್ರಶಾಂತ್ ನೀಲ್​​ ಭಾರತದ ಸ್ಟಾರ್ ನಿರ್ದೇಶಕರಾದರು. ಹೊಂಬಾಳೆ ಫಿಲಮ್ಸ್ ಪ್ಯಾನ್ ಇಂಡಿಯಾ ನಿರ್ಮಾಣ ಸಂಸ್ಥೆಯಾಯ್ತು. ರವಿ ಬಸ್ರೂರು ಪ್ಯಾನ್ ಇಂಡಿಯಾ ಮ್ಯೂಸಿಕ್ ಡೈರೆಕ್ಟರ್ ಎನಿಸಿಕೊಂಡರು. ಆ ಸಿನಿಮಾನಲ್ಲಿ ಕೆಲಸ ಮಾಡಿದ ಹಲವರಿಗೆ ಅದ್ಭುತ ಭವಿಷ್ಯ ದೊರಕಿತು. ಆದರೆ ಆ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಶ್ರೀನಿಧಿ ಶೆಟ್ಟಿಗೆ ದೊಡ್ಡ ಅವಕಾಶಗಳು ‘ಕೆಜಿಎಫ್’ ಬಳಿಕ ಬರಲಿಲ್ಲ. ಅದಕ್ಕೆ ಹಲವು ಕಾರಣಗಳಿದ್ದವು. ವಿಶೇಷವೆಂದರೆ ‘ಕೆಜಿಎಫ್’ ಬಳಿಕ ಶ್ರೀನಿಧಿ ಶೆಟ್ಟಿ ಅವರು ದೊಡ್ಡ ಸಂಭಾವನೆ ಕೇಳಿದರು ಎಂಬುದು ಸಹ ಒಂದು. ಈ ಬಗ್ಗೆ ಖುದ್ದು ಶ್ರೀನಿಧಿ ಶೆಟ್ಟಿ ಅವರೇ ಮಾತನಾಡಿದ್ದಾರೆ.

ಶ್ರೀನಿಧಿ ಶೆಟ್ಟಿ ನಟನೆಯ ತೆಲುಗು ಸಿನಿಮಾ ‘ಆದರ್ಶ ಕುಟುಂಬಂ 47’ ಬಿಡುಗಡೆ ಆಗುತ್ತಿದ್ದು ಸಿನಿಮಾದ ಪ್ರಚಾರ ಕಾರ್ಯದಲ್ಲಿ ಶ್ರೀನಿಧಿ ಭಾಗಿ ಆಗಿದ್ದಾರೆ. ಈ ವೇಳೆ ಶ್ರೀನಿಧಿ ಅವರು ‘ಕೆಜಿಎಫ್’ ಬಳಿಕ ತಮ್ಮ ಸಂಭಾವನೆ ಬಗ್ಗೆ ಹರಿದಾಡಿದ್ದ ಸುಳ್ಳು ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಕೆಜಿಎಫ್’ ಬಳಿಕ ಶ್ರೀನಿಧಿ ಶೆಟ್ಟಿ ಅವರು ಪ್ರತಿ ಸಿನಿಮಾಕ್ಕೆ ಏಳು-ಎಂಟು ಕೋಟಿ ಸಂಭಾವನೆ ಕೇಳಿದ್ದರು ಎನ್ನಲಾಗಿತ್ತು. ಹಲವು ಚಿತ್ರಂಗಗಳಲ್ಲಿ ಈ ಬಗ್ಗೆ ಸುದ್ದಿ ಹರಿದಾಡಿತ್ತು.

ಆದರೆ ಆ ವದಂತಿಗಳನ್ನು ನಟಿ ಶ್ರೀನಿಧಿ ತಳ್ಳಿಹಾಕಿದ್ದು ‘ಕೇವಲ ಹಣಕ್ಕಾಗಿ ತಾನು ಯಾವುದೇ ಯೋಜನೆಗಳಿಗೆ ಸಹಿ ಹಾಕುವುದಿಲ್ಲ’ ಎಂದಿದ್ದಾರೆ. ‘’ಕೆಜಿಎಫ್’ ಚಿತ್ರಗಳ ಯಶಸ್ಸಿನ ನಂತರ, ನಾನು ₹7 ರಿಂದ ₹8 ಕೋಟಿ ಕೇಳುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ಇಲ್ಲಿಯವರೆಗೆ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಹಾಗಿರುವಾಗ, ನಾನು ಅಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ಹೇಗೆ ಕೇಳಲು ಸಾಧ್ಯ? ಆದ್ದರಿಂದ, ಇದು ಕೇವಲ ಒಂದು ವದಂತಿ ಅಷ್ಟೇ. ಹಣ ಸಂಪಾದಿಸುವುದೇ ನನ್ನ ಏಕೈಕ ಗುರಿಯಾಗಿದ್ದರೆ, ಕಳೆದ ಕೆಲವು ವರ್ಷಗಳಲ್ಲಿ ನಾನು 30 ರಿಂದ 40 ಸಿನಿಮಾಗಳಲ್ಲಿ ನಟಿಸಬಹುದಿತ್ತು. ಆದರೆ ನಾನು ಕೇವಲ ಹಣಕ್ಕಾಗಿ ಸಿನಿಮಾಗಳಿಗೆ ಸಹಿ ಹಾಕುವುದಿಲ್ಲ. ಉತ್ತಮ ಕಥೆಗಳು ಮತ್ತು ಗುಣಮಟ್ಟದ ಪಾತ್ರಗಳಿಗೆ ನಾನು ಮೊದಲ ಆದ್ಯತೆ ನೀಡುತ್ತೇನೆ” ಎಂದು ಅವರು ತಿಳಿಸಿದರು.

ಇದನ್ನೂ ಓದಿ:‘ಕೆಜಿಎಫ್‌ ಸ್ಟೈಲ್ ರಿಪೀಟ್ ಆಗಿದೆ’; ರಾಮಾಯಣದ ಯಶ್ ಗೆಟಪ್ ಬಗ್ಗೆ ಬಾಲಿವುಡ್ ನಟನ ಟೀಕೆ

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾದ ಬಳಿಕ ಶ್ರೀನಿಧಿ ಅವರು ‘ಕೋಬ್ರಾ’, ‘ಹಿಟ್’ ಮತ್ತು ‘ತೆಲುಸು ಕದಾ’ ಸಿನಿಮಾಗಳಲ್ಲಿ ಮಾತ್ರವೇ ನಟನೆ ಮಾಡಿದ್ದಾರೆ. ಶ್ರೀನಿಧಿ ಶೆಟ್ಟಿ ಅವರೇ ಹೇಳಿರುವಂತೆ ಅವರು ಅಳೆದು-ತೂಗಿ ಸಿನಿಮಾಗಳನ್ನು ಆಯ್ಕೆ ಮಾಡುತ್ತಾರಂತೆ. ಹಲವಾರು ಸಿನಿಮಾ ಅವಕಾಶಗಳನ್ನು ಅವರು ರಿಜೆಕ್ಟ್ ಸಹ ಮಾಡಿದ್ದಾರಂತೆ.

ಇದೀಗ ಅವರು ‘ಆದರ್ಶ ಕುಟುಂಬಂ 47’ ಸಿನಿಮಾನಲ್ಲಿ ನಟನೆ ಮಾಡಿದ್ದು, ತಮ್ಮ ನಿಜ ವಯಸ್ಸಿಗಿಂತಲೂ ಹಿರಿಯ ಪಾತ್ರದಲ್ಲಿ ಅವರು ನಟನೆ ಮಾಡಿದ್ದಾರೆ. ಹಿರಿಯ ನಟ ವೆಂಕಟೇಶ್ ಅವರ ಪತ್ನಿಯಾಗಿ ಶ್ರೀನಿಧಿ ನಟಿಸಿದ್ದು, ಹದಿ ವಯಸ್ಸಿನ ಮಕ್ಕಳ ತಾಯಿಯ ಪಾತ್ರ ಅದಾಗಿದೆ. ಸಿನಿಮಾ ಅನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us