ಸೂಪರ್ ಫಿಟ್ನೆಸ್​ಗಾಗಿ ‘ಪೂಜಾ’ ಮಂದಿರದಲ್ಲಿ ಇವೆಲ್ಲಾ ನಡೆಯುತ್ತವೆ!

ಬಹುಭಾಷಾ ನಟಿ ಪೂಜಾ ಹೆಗ್ಡೆ ಬಾಲಿವುಡ್ ಸಿನಿಮಾ ಮೊಹೆಂಜೋದಾರೊ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯಗೊಂಡ ತಾರೆ. ರೂಪದರ್ಶಿ ಪೂಜಾ ಅವರ ನಟನೆ ನೋಡಿ ಮೆಚ್ಚಿದ ಪ್ರೇಕ್ಷಕ ಇವರ ಪರ್ಫೆಕ್ಟ್​ ಫಿಟ್ನೆಸ್​ಗೂ ಫಿದಾ ಆಗಿದ್ದಾರೆ. ಹಾಗಾದ್ರೆ ನಟಿ ಪೂಜಾ ಹೆಗ್ಡೆ ಆಕರ್ಷಕ ಮೈಕಟ್ಟಿನ ಫಿಟ್ನೆಸ್​ ಗುಟ್ಟು ನಿತ್ಯದ ಜಿಮ್ ವರ್ಕೌಟ್ ಅಂತೆ. ಇವರು ವರ್ಕೌಟ್​ ವಿಷಯದಲ್ಲಿ ತುಂಬಾನೇ ಪರ್ಟಿಕ್ಯುಲರ್ ಅಂತೆ. ಹಾಗಾಗಿ ವಾರದಲ್ಲಿ ನಾಲ್ಕು ದಿನ ತಪ್ಪದೇ […]

ಸೂಪರ್ ಫಿಟ್ನೆಸ್​ಗಾಗಿ ‘ಪೂಜಾ’ ಮಂದಿರದಲ್ಲಿ ಇವೆಲ್ಲಾ ನಡೆಯುತ್ತವೆ!
ಸಾಧು ಶ್ರೀನಾಥ್​

Updated on: Oct 22, 2019 | 6:49 PM

ಬಹುಭಾಷಾ ನಟಿ ಪೂಜಾ ಹೆಗ್ಡೆ ಬಾಲಿವುಡ್ ಸಿನಿಮಾ ಮೊಹೆಂಜೋದಾರೊ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯಗೊಂಡ ತಾರೆ.

ರೂಪದರ್ಶಿ ಪೂಜಾ ಅವರ ನಟನೆ ನೋಡಿ ಮೆಚ್ಚಿದ ಪ್ರೇಕ್ಷಕ ಇವರ ಪರ್ಫೆಕ್ಟ್​ ಫಿಟ್ನೆಸ್​ಗೂ ಫಿದಾ ಆಗಿದ್ದಾರೆ. ಹಾಗಾದ್ರೆ ನಟಿ ಪೂಜಾ ಹೆಗ್ಡೆ ಆಕರ್ಷಕ ಮೈಕಟ್ಟಿನ ಫಿಟ್ನೆಸ್​ ಗುಟ್ಟು ನಿತ್ಯದ ಜಿಮ್ ವರ್ಕೌಟ್ ಅಂತೆ. ಇವರು ವರ್ಕೌಟ್​ ವಿಷಯದಲ್ಲಿ ತುಂಬಾನೇ ಪರ್ಟಿಕ್ಯುಲರ್ ಅಂತೆ. ಹಾಗಾಗಿ ವಾರದಲ್ಲಿ ನಾಲ್ಕು ದಿನ ತಪ್ಪದೇ ಜಿಮ್ ವರ್ಕೌಟ್ ಮಾಡ್ತಾರೆ. ಈ ವರ್ಕೌಟ್​ಗಳು ಇವರ ಟೋನ್ಡ್ ಬಾಡಿಗೆ ಸಹಕಾರಿಯಾಗಿದೆಯಂತೆ.

ವರ್ಕೌಟ್ ಅಂತ ಬಂದಾಗ ಇವರು ತುಂಬ ಕಾನ್ಷಿಯಸ್ ಆಗಿರುರುವುದರಿಂದ ಜಿಮ್​ನಲ್ಲಿ ತ್ರೆಡ್​ಮಿಲ್​ ವಾಲ್ಕ್, ವೇಟ್​ ಲಿಫ್ಟಿಂಗ್ ಮತ್ತು ಕಾರ್ಡಿಯೋ ಎಕ್ಸಸೈಸ್​ ಮಾಡ್ತಾರಂತೆ. ವೇಟ್​ ಟ್ರೇನಿಂಗ್ ಮತ್ತು ಫಂಕ್ಷನಲ್​ ಎಕ್ಸಸೈಜ್​ಗಳ ಕಡೆ ಹೆಚ್ಚಿನ ಗಮನ ಹರಿಸ್ತಾರಂತೆ ಫಿಟ್ನೆಸ್ ಪ್ರೀಕ್ ಪೂಜಾ.  ಈ ಎಲ್ಲಾ ವ್ಯಾಯಾಮಗಳು ಫಿಸಿಕಲೀ ಸ್ಟ್ರಾಂಗ್ ಮಾಡಿ ಫಿಟ್ನೆಸ್​ ಕಾಯ್ದುಕೊಳ್ಳೋಕೆ ಸಹಾಯ ಆಗುತ್ತೆ ಅನ್ನೋದು ಪೂಜಾ ಮಾತು. ಇಂಟ್ರೆಸ್ಟಿಂಗ್ ಅಂದ್ರೆ ಇವರು ಯಾವುದೇ ರೀತಿಯ ಪುಷ್ ಅಪ್ಸ್​ ಎಕ್ಸಸೈಸ್​ ಅಳವಡಿಸಿಕೊಳ್ಳಲ್ವಂತೆ.

ಇನ್ನು ಪೂಜಾ ಅವರ ಫಿಟ್ನೆಸ್ ಹಿಂದಿನ ಮತ್ತೊಂದು ಗುಟ್ಟು ನಿತ್ಯ ಯೋಗವಂತೆ. ನಿತ್ಯ ಯೋಗ ಇವರನ್ನು ದೈಹಿಕ ಮತ್ತು ಮಾನಸಿಕವಾಗಿ ಫಿಟ್ ಆಗುವಂತೆ ಮಾಡಿದೆ. ಇದ್ರಿಂದ ದಿನವಿಡೀ ಚೈತನ್ಯದಿಂದ ಇರಲು ಸಹಕಾರಿಯಾಗುತ್ತೆ ಅಂತಾರೆ ಈ ಚೆಲುವೆ.

 

Published On - 4:39 pm, Tue, 22 October 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us