
ರಾಕಿಂಗ್ ಸ್ಟಾರ್ ಯಶ್ ಅವರು (ಯಶ್) ಕೇವಲ ಹೀರೋ ಆಗಿ ಮಾತ್ರವಲ್ಲ, ಮಾನವೀಯತೆ ತೋರುವ ವ್ಯಕ್ತಿಯಾಗಿಯೂ ಇಷ್ಟ ಆಗುತ್ತಾರೆ. ಅಭಿಮಾನಿಗಳು ಕೊಟ್ಟಷ್ಟೇ ಪ್ರೀತಿಯನ್ನು ಇವರು ಕೊಡುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಈಗಾಗಲೇ ಸಿಕ್ಕಿವೆ. ಇತ್ತೀಚೆಗೆ ಕ್ಯಾನ್ಸರ್ ಪೀಡಿತ ಅಭಿಮಾನಿ ಜೊತೆ ಯಶ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಅಭಿಮಾನಿಗೆ ಅವರು ಧೈರ್ಯ ತುಂಬಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಪ್ರಶಂಸೆಗೆ ಕಾರಣವಾಗಿದೆ.
ಯಶ್ ಅವರು ‘ಕೆಜಿಎಫ್’, ‘ಕೆಜಿಎಫ್ 2’ ಬಳಿಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆರಳಿದ್ದಾರೆ. ‘ಟಾಕ್ಸಿಕ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ವಿಶ್ವದರ್ಜೆ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಯೋಜನೆ ಅವರಿಗೆ ಇದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಈ ಸಿನಿಮಾ ರಿಲೀಸ್ ಆದರೆ ಹಬ್ಬ ಮಾಡಬೇಕು ಎಂದು ಕಾದು ಕುಳಿತ ಅಭಿಮಾನಿಯೊಬ್ಬರ ಆರೋಗ್ಯ ಹದಗೆಟ್ಟಿದೆ. ಕ್ಯಾನ್ಸರ್ ಇರುವ ವಿಷಯ ಗೊತ್ತಾಗಿದೆ.
ಇದನ್ನೂ ಓದಿ: ಅಲಿಬಾಗ್ನಲ್ಲಿ 24 ಕೋಟಿ ರೂಪಾಯಿ ಆಸ್ತಿ ಖರೀದಿಸಿದ ಯಶ್, ರಾಧಿಕಾ ಪಂಡಿತ್
ಅಭಿಮಾನಿಗೆ ಕ್ಯಾನ್ಸರ್ ಇರುವ ವಿಷಯ ಗೊತ್ತಾಗುತ್ತಿದ್ದಂತೆ ರಾಕಿಂಗ್ ಸ್ಟಾರ್ ಯಶ್ ಅವರು ವಿಡಿಯೋ ಕಾಲ್ ಮೂಲಕ 10 ನಿಮಿಷಕ್ಕೂ ಹೆಚ್ಚು ಸಮಯ ಮಾತನಾಡಿದ್ದಾರೆ. ಮೊದಲು ಏನಾಯಿತು? ಕ್ಯಾನ್ಸರ್ ಇದೆ ಎಂಬುದು ಏಕೆ ಗೊತ್ತಾಗಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಆ ಬಳಿಕ ಯಶ್ ಅವರು ಒಂದು ಪ್ರಮುಖವಾದ ಕಿವಿಮಾತು ಹೇಳಿದ್ದಾರೆ.
Life is unpredictable 😥
Elli Yavaga yarige enagutte gottagalla
If it is possible 3 months once health check up madskoli
Health is wealth & don’t ever lose hope pic.twitter.com/9DEZ1TZI8w
— 𝗬𝗮𝘀𝗵𝗶𝗸𝗮🪷Toxic (@iamyashikarsy) June 2, 2026
‘ನಿಮ್ಮ ಸಿನಿಮಾ ಟಾಕ್ಸಿಕ್ನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದೆವು’ ಎಂದು ಕ್ಯಾನ್ಸರ್ ಪೀಡಿತ ಅಭಿಮಾನಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಯಶ್, ‘ನಿಮ್ಮ ಲೈಫ್ ನೋಡಿಕೊಳ್ಳಿ. ಸಿನಿಮಾ ಬರುತ್ತೆ, ಹೋಗುತ್ತೆ. ನಿಮ್ಮ ಆರೋಗ್ಯವನ್ನು ಮೊದಲು ನೋಡಿಕೊಳ್ಳಬೇಕು’ ಎಂದು ಯಶ್ ಕಿವಿಮಾತು ಹೇಳಿದ್ದಾರೆ. ‘ಏನ್ ಮಾತನಾಡಬೇಕು ಎಂದು ಗೊತ್ತಾಗುತ್ತಿಲ್ಲ ಚಿನ್ನ. ಮಿರಾಕಲ್ಗಳು ಆಗುತ್ತೆ. ಹೋಪ್ ಇರಲಿ’ ಎಂದು ಯಶ್ ಹೇಳಿದ್ದಾರೆ. ಕೊನೆಯಲ್ಲಿ ಅಭಿಮಾನಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.