ಕೊರಿಯಾದ ಖ್ಯಾತ ಸೀರಿಸ್ ‘ಸ್ಕ್ವಿಡ್ ಗೇಮ್’ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ನೆಟ್ಫ್ಲಿಕ್ಸ್ನಲ್ಲಿರೋ ಖ್ಯಾತ ಸೀರಿಸ್ಗಳಲ್ಲಿ ಇದು ಕೂಡ ಒಂದು. ಇದು 2021ರಲ್ಲಿ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಂಡಿತು. ಇದಕ್ಕೆ ಎರಡನೇ ಪಾರ್ಟ್ ಬರುತ್ತಿದೆ. ಈಗ ಈ ಸೀರಿಸ್ಗೆ ಕೃತಿ ಚೌರ್ಯದ ಆರೋಪ ಎದುರಾಗಿದೆ. ಅದು ಕೂಡ ಬಾಲಿವುಡ್ ನಿರ್ದೇಶಕನಿಂದ ಅನ್ನೋದು ಅಚ್ಚರಿಯ ವಿಚಾರ. ಆ ಬಗ್ಗೆ ಇಲ್ಲಿದೆ ಮಾಹಿತಿ.
2009ರಲ್ಲಿ ‘ಲಕ್’ ಹೆಸರಿನ ಸಿನಿಮಾ ಬಂದಿತ್ತು. ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಸಂಜಯ್ ದತ್, ಇಮ್ರಾನ್ ಖಾನ್, ಜಾವೇದ್ ಶೇಖ್, ಶ್ರುತಿ ಹಾಸನ್, ರವಿ ಕಿಶನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಬಜೆಟ್ 37 ಕೋಟಿ ರೂಪಾಯಿ. ಆದರೆ, ಸಿನಿಮಾ ಗೆಲುವು ಕಂಡಿಲ್ಲ. ಈಗ ಈ ಚಿತ್ರದ ನಿರ್ದೇಶಕ ಸೋಹಮ್ ಶಾ ಅವರು ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಚಿತ್ರವನ್ನು ನೋಡಿ ಅವರು ರಿಮೇಕ್ ಮಾಡಿದ್ದಾರೆ ಎಂದಿದ್ದಾರೆ ಅವರು.
ಇದಕ್ಕೆ ನೆಟ್ಫ್ಲಿಕ್ಸ್ ಪ್ರತಿಕ್ರಿಯೆ ನೀಡಿದೆ. ‘ಇದರಲ್ಲಿ ಯಾವುದೇ ಮೆರಿಟ್ ಇಲ್ಲ. ಈ ಸೀರಿಸ್ನ ಹ್ವಾಂಗ್ ಡಾಂಗ್ ಯುಕ್ ಅವರು ಬರೆದು, ನಿರ್ದೇಶನ ಮಾಡಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳು ಇಲ್ಲ’ ಎಂದು ನೆಟ್ಫ್ಲಿಕ್ಸ್ ಹೇಳಿದೆ. ‘ಸ್ಕ್ವಿಡ್ ಗೇಮ್’ ಸೀರಿಸ್ ನೆಟ್ಫ್ಲಿಕ್ಸ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಸೀರಿಸ್ ಆಗಿದೆ.
‘ಸ್ಕ್ವಿಡ್ ಗೇಮ್’ ಕಥೆ ಗೇಮ್ ರೀತಿಯಲ್ಲೇ ಇದೆ. ಇದರಲ್ಲಿ 456 ಪ್ಲೇಯರ್ಗಳು ಭಾಗಿ ಆಗುತ್ತಾರೆ. ಗೆದ್ದವರಿಗೆ ಸಾವಿರಾರು ಕೋಟಿ ಹಣ ಸಿಗುತ್ತದೆ. ಈ ಗೇಮ್ನಲ್ಲಿ ಗೆದ್ದವರಿಗೆ ಮಾತ್ರ ಈ ಹಣ ಸಿಗುತ್ತದೆ. ಇಲ್ಲಿ ಎಲಿಮಿನೇಷನ್ ಎಂದರೆ ಸಾವು ಮಾತ್ರ. ‘ಲಕ್’ ಚಿತ್ರದ ಕಥೆಯೂ ಇದೇ ರೀತಿ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಸೂಪರ್ ಹಿಟ್ ಕೊರಿಯನ್ ಸೀರಿಸ್ಗೆ ಸೀಕ್ವೆಲ್; ‘ಸ್ಕ್ವಿಡ್ ಗೇಮ್ 2’ ಪ್ರಸಾರ ದಿನಾಂಕ ರಿವೀಲ್
ಸೋಹಮ್ ಶಾ ಅವರ ಪ್ರಕಾರ ‘ಲಕ್ಕಿ’ ಸಿನಿಮಾದ ಕಥೆಯನ್ನು 2006ರಲ್ಲಿ. ಚಿತ್ರ ರಿಲೀಸ್ ಆಗಿದ್ದು 2009ರಲ್ಲಿ. ಹ್ವಾಂಗ್ ಅವರು ಈ ಚಿತ್ರದ ಕಥೆಯನ್ನು 2008ರಲ್ಲಿ ಸಿದ್ಧಪಡಿಸಿದ್ದಾಗಿ ಹೇಳಿದ್ದರು. ಈ ಚಿತ್ರಕ್ಕೆ ಶಿಘ್ರವೇ ಎರಡನೇ ಪಾರ್ಟ್ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:21 pm, Mon, 16 September 24