
ಬಿಗ್‌ಬಾಸ್ ಮನೆಯಲ್ಲಿ ಒಂದು ನಿಯಮ ಸ್ಪಷ್ಟವಾಗಿದೆ. ಯಾವುದೇ ಸ್ಪರ್ಧಿ ಮತ್ತೊಬ್ಬ ಸ್ಪರ್ಧಿಯ ಮೇಲೆ ಕೈ ಎತ್ತಿದರೆ ಆ ವ್ಯಕ್ತಿಯನ್ನು ಕೂಡಲೇ ಆ ವ್ಯಕ್ತಿಯನ್ನು ಮನೆಯಿಂದ ಹೊರಗೆ ಕಳಿಸಲಾಗುತ್ತದೆ. ಇದೀಗ ಬಿಗ್‌ಬಾಸ್ ಸೀಸನ್ 13ರ ಎರಡನೇ ವಾರದಲ್ಲಿ ಜಗಳಗಳು ರಂಗೇರಿದ್ದು, ಬಿಗ್‌ಬಾಸ್ ನೀಡಿದ್ದ ಟಾಸ್ಕ್ ಒಂದರಲ್ಲಿ ಸ್ಪರ್ಧಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಜಗಳ ಯಾವ ಮಟ್ಟಿಗೆ ಹೋಗಿದೆಯೆಂದರೆ ಒಬ್ಬ ಸ್ಪರ್ಧಿ ಮತ್ತೊಬ್ಬ ಸ್ಪರ್ಧಿಯನ್ನು ಕೈಯಿಂದ ಹೊಡೆದು, ಕಾಲಿಂದ ಒದ್ದೆದಿದ್ದಾರೆ ಸಹ ಆದರೂ ಸಹ ಬಿಗ್‌ಬಾಸ್ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಹಾಕಿಲ್ಲ. ಬದಲಿಗೆ ಸಮಜಾಯಿಷಿ ನೀಡಿದ್ದಾರೆ.
ಬಿಗ್‌ಬಾಸ್ ನೀಡಿದ್ದ ವಸ್ತುಗಳನ್ನು ಆಯ್ದುಕೊಳ್ಳುವ ಹಾಗೂ ಅದನ್ನು ಕಾಯ್ದುಕೊಳ್ಳುವ ಆಟದಲ್ಲಿ ಮಹಾಕವಿ ಮಂಜ, ಸೌಂದರ್ಯಾ ಶೆಟ್ಟಿ ಸಂಗ್ರಹಿಸಿದ್ದ ವಸ್ತುಗಳನ್ನು ಬಲವಂತದಿಂದ ಕದಿಯಲು ಯತ್ನಿಸಿದಾಗ ತಮ್ಮ ವಸ್ತುಗಳನ್ನು ಉಳಿಸಿಕೊಳ್ಳುವ ಹಾಗೂ ಮಂಜನ ಬೆದರಿಕೆಗೆ ಉತ್ತರವಾಗಿ ಸೌಂದರ್ಯಾ ಮಂಜನ ಮೇಲೆ ಹಲ್ಲೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಮಂಜನೂ ಸಹ ರೌಡಿ ರೀತಿ ವರ್ತನೆ ಮಾಡಿದ, ‘ನಿನ್ನನ್ನು ಎತ್ತಿ ಕುಕ್ಕಿ ಹಾಕ್ತೀನಿ, ಬಡಿದು ಹಾಕ್ತೀನಿ, ಲಟ-ಲಟ ಎಂದು ಮುರಿದು ಹಾಕ್ತೀನಿ, ಮುಖ ಜಜ್ಜಿ ಹಾಕ್ತೀನಿ’ ಎಂದೆಲ್ಲ ಅಬ್ಬರಿಸಿದ.
ಈ ಘಟನೆಯನ್ನು ಗಮಿಸಿದ್ದ ಬಿಗ್‌ಬಾಸ್, ಮಂಜನನ್ನು ಕರೆದು ಪ್ರತ್ಯೇಕವಾಗಿ ಮಾತನಾಡಿದ್ದರು. ಏನು ಮಾಡಬೇಕೆಂದು ಕೇಳಿದರು. ಮಂಜನನ್ನು ಮಾತ್ರವೇ ಅಲ್ಲದೆ ಮನೆಯ ಇತರೆ ಆಟಗಾರರನ್ನು ಸಹ ಈ ಬಗ್ಗೆ ಅಭಿಪ್ರಾಯ ಕೇಳಿದರು. ಹಾಗೂ ಉಸ್ತುವಾರಿಯನ್ನೂ ಸಹ ಈ ಘಟನೆ ಬಗ್ಗೆ ಅಭಿಪ್ರಾಯಗಳನ್ನು ಕೇಳಿದರು. ಉಸ್ತುವಾರಿಗಳು, ಆಟದ ಭರದಲ್ಲಿ ಘಟನೆ ನಡೆದಿದೆ ಎಂದು ಹೇಳಿದರು. ಇನ್ನು ಮಂಜನ ಮೇಲೆ ಕೈ ಮಾಡಿದ ಸೌಂದರ್ಯ, ಬಹಿರಂಗವಾಗಿ ಕ್ಷಮೆ ಕೇಳಿದರು.
ಇದನ್ನೂ ಓದಿ:ಬಿಗ್‌ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ಗಲಾಟೆ: ‘ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕಿಲ್ಲ’ ಎಂದ ಸ್ಪರ್ಧಿ
ಬಳಿಕ ಎಲ್ಲ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿದ ಬಿಗ್‌ಬಾಸ್, ‘ಮನೆಯ ಮೂಲ ನಿಯಮ, ಯಾರೇ ಯಾರ ಮೇಲೇ ಹಿಂಸೆ ಮಾಡಿದರೂ ಅವರನ್ನು ಹೊರಗೆ ಕಳಿಸಬೇಕು. ಆದರೆ ಬಿಗ್‌ಬಾಸ್ ಈ ವಿಚಾರದಲ್ಲಿ ಪ್ರತಿಯೊಂದು ಕೋನದಿಂದಲೂ ಅಳೆದು-ತೂಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಲ್ಲಿ ಕೈ ಮಾಡಿದ್ದು ಮಾತ್ರವೇ ಅಲ್ಲದೆ, ಅದಕ್ಕೆ ಪ್ರೇರೇಪಣೆ ಒದಗಿದ್ದನ್ನು ಸಹ ಬಿಗ್‌ಬಾಸ್ ಪರಿಗಣಿಸುತ್ತಾರೆ. ಬಿಗ್‌ಬಾಸ್ ಮನೆಯಲ್ಲಿ ಕೈ ಮಾಡುವುದು ಹಾಗೂ ಸಹ ಸ್ಪರ್ಧಿಗೆ ಧಮ್ಕಿ ಹಾಕುವುದು ಎರಡೂ ಸಹ ಒಂದೇ. ಈ ಘಟನೆ ಆಟದ ಭರದಲ್ಲಿ ನಡೆದಿದೆ ಎಂಬ ಕಾರಣಕ್ಕೆ ಈ ವಿಷಯವನ್ನು ಇಲ್ಲಿಗೆ ಬಿಡುತ್ತಿದ್ದೇನೆ. ಆದರೆ ಇದರ ತೀರ್ಪು ಪಂಚಾಯಿತಿಯಲ್ಲಿ ಹೊರಬೀಳಲಿದೆ’ ಎಂದರು.
ಮಾರನೇ ದಿನ, ಮಂಜ ಮತ್ತು ಸೌಂದರ್ಯ ಪರಸ್ಪರ ಕೈ ಕುಲುಕಿ ಸಂಧಾನ ಮಾಡಿಕೊಂಡಿದ್ದಾರೆ. ಪರಸ್ಪರರಿಗೆ ಕ್ಷಮೆಗಳನ್ನು ಕೇಳಿಕೊಂಡರಾದರೂ ಕಿಚ್ಚನ ಪಂಚಾಯಿತಿಯಲ್ಲಿ ಈ ವಿಷಯದ ಇತ್ಯರ್ಥ ಆಗಲಿದೆ. ಸುದೀಪ್ ಅವರು ಈ ವಿಷಯವನ್ನು ವಿಶ್ಲೇಷಣೆ ಮಾಡಿ ತೀರ್ಪು ನೀಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ