ಪ್ರಶಾಂತ್-ಗಾನವಿ ನಡುವೆ ನಡೆದಿದ್ದೇನು? ತಪ್ಪು ಯಾರದ್ದು? ಕಿಚ್ಚ ತೀರ್ಪೇನು?

ಗಾನವಿ ಮತ್ತು ಪ್ರಶಾಂತ್ ನಡುವಿನ ಜಗಳದ ಕುರಿತಾಗಿ ಸುದೀಪ್ ವಿಚಾರಣೆ ನಡೆಸಿದರು. ಮೊದಲಿಗೆ ಪ್ರಶಾಂತ್, ತಾವು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದರು. ಸುದೀಪ್ ಅವರು ಕೆಲವು ಬಾರಿ ಆ ವಿಡಿಯೋ ಅನ್ನು ಪ್ಲೇ ಮಾಡಿದರು. ಸ್ಲೋ ಮೋಷನ್​​ನಲ್ಲಿ ಪ್ಲೇ ಮಾಡಿದರು. ಆಗ ಪ್ರಶಾಂತ್ ಉದ್ದೇಶಪೂರ್ವಕವಾಗಿ ಗಾನವಿಯ ಕೊರಳಿನ ಮೇಲೆ ಕಾಲಿಟ್ಟು, ಪ್ರಶರ್ ಹಾಕಿ ಏಳುತ್ತಿದ್ದಾರೆಯೇ ಎನಿಸಿತು. ಯಶಸ್, ಗಗನ್​​ ಹಾಗೂ ಇನ್ನೂ ಕೆಲವರು, ಪ್ರಶಾಂತ್ ಬೇಕೆಂದೇ ಗಾನವಿಯ ಕತ್ತಿನ ಮೇಲೆ ಮೊಣಕಾಲು ಇರಿಸಿದ್ದಾರೆ ಎಂದು ಹೇಳಿದರು.

ಪ್ರಶಾಂತ್-ಗಾನವಿ ನಡುವೆ ನಡೆದಿದ್ದೇನು? ತಪ್ಪು ಯಾರದ್ದು? ಕಿಚ್ಚ ತೀರ್ಪೇನು?
Bigg Boss Kannada

Updated on: Nov 15, 2026 | 7:00 AM

ಮುಖ್ಯಾಂಶಗಳು

  • ಬಿಗ್​ಬಾಸ್ ಕನ್ನಡ ಸೀಸನ್ 13
  • ಗಾನವಿ vs ಪ್ರಶಾಂತ್ ಭಾರಿ ಜಗಳ
  • ಜಗಳದ ಬಗ್ಗೆ ಸುದೀಪ್ ಕೊಟ್ಟ ತೀರ್ಪೇನು?

ಕಳೆದ ವಾರ ರಾಜಕೀಯದ ಟಾಸ್ಕ್ ಒಂದು ಬಿಗ್​​ಬಾಸ್ ಮನೆಯಲ್ಲಿ ನಡೆಯಿತು. ಟಾಸ್ಕ್​​ನಲ್ಲಿ ಯಶಸ್ ಮತ್ತು ಮಂಜ ಎರಡು ತಂಡಗಳು ಮಾಡಿಕೊಂಡು ಪರಸ್ಪರ ಎದುರಾಳಿಗಳಾಗಿ ಸ್ಪರ್ಧೆ ಮಾಡಿದರು. ಟಾಸ್ಕ್ ಏನೋ ಚೆನ್ನಾಗಿತ್ತು. ಆದರೆ ಆ ಟಾಸ್ಕ್​​ನ ಭಾಗವಾಗಿ ಒಂದು ಜಗಳ ಆಡುವ ಟಾಸ್ಕ್ ಅನ್ನು ಬಿಗ್​​ಬಾಸ್ ನೀಡಿದರು. ಮಂಜ ಮತ್ತು ಯಶಸ್​​​ನ ಪೋಸ್ಟರ್​​ಗಳನ್ನು ನಿಲ್ಲಿಸಿ ಆಟಗಾರರು ತಮ್ಮ ಎದುರಾಳಿ ತಂಡದ ನಾಯಕನ ಪೋಸ್ಟರ್​​ಗೆ ಕೆಂಪು ಬಣ್ಣ ಬಳಿಯಬೇಕಿತ್ತು. ಸ್ಪರ್ಧಿಗಳು ತಮ್ಮ ನಾಯಕನ ಪೋಸ್ಟರ್​​ಗೆ ಬಣ್ಣ ಬಳಿಯದಂತೆ ತಡೆಯಬೇಕಿತ್ತು.

ಈ ಟಾಸ್ಕ್​​ನಲ್ಲಿ ಪ್ರಶಾಂತ್, ಯಶಸ್​​ ತಂಡದಲ್ಲಿದ್ದರೆ ಗಾನವಿ ಮಂಜನ ತಂಡದ ಸದಸ್ಯೆ ಆಗಿದ್ದರು. ಗಾನವಿ, ಯಶಸ್​​ ಪೋಸ್ಟರ್​​ಗೆ ಬಣ್ಣ ಬಳಿಯಲು ಬಂದಾಗ ತಾಂಡವ್ ಮತ್ತು ಪ್ರಶಾಂತ್ ಅವರನ್ನು ತಡೆದಿದ್ದರು. ತಾಂಡವ್, ಗಾನವಿಯನ್ನು ತಡೆದು ಕೆಳಗೆ ಮಲಗಿಸಿದ್ದರು. ಅದೇ ಸಮಯದಲ್ಲಿ ಧನುಶ್ ಸಹ ಬಣ್ಣ ಬಳಿಯಲು ಬಂದರು. ಅದನ್ನು ತಡೆಯಲು ಹೋದ ಪ್ರಶಾಂತ್, ಗಾನವಿಯ ಕತ್ತಿನ ಮೇಲೆ ಮೊಣಕಾಲು ಊರಿಬಿಟ್ಟರು. ಅದಾದ ಬಳಿಕ ಮೊಣಕಾಲು ಊರಿಕೊಂಡೆ ಎದ್ದರು. ಗಾನವಿಗೆ ಅದರಿಂದ ಬಹಳ ನೋವಾಯ್ತು. ದೊಡ್ಡ ರಂಪವೂ ಆಗಿ ಹೋಯ್ತು. ಬಳಿಕ ಗಾನವಿಯಂತೂ ‘ನಾನೆಲ್ಲಿದ್ದೀನಿ’ ಎಂದೆಲ್ಲ ಜ್ಞಾಪಕ ಶಕ್ತಿಯೇ ಕಳೆದು ಹೋದವರಂತೆ ಆಡಲು ಶುರು ಮಾಡಿದರು.

Loading...

ಆ ಘಟನೆ ಕುರಿತಾಗಿ ಶನಿವಾರ, ಸುದೀಪ್ ಅವರು ವಿಚಾರಣೆ ನಡೆಸಿದರು. ಮೊದಲಿಗೆ ಪ್ರಶಾಂತ್, ತಾವು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದರು. ಸುದೀಪ್ ಅವರು ಕೆಲವು ಬಾರಿ ಆ ವಿಡಿಯೋ ಅನ್ನು ಪ್ಲೇ ಮಾಡಿದರು. ಸ್ಲೋ ಮೋಷನ್​​ನಲ್ಲಿ ಪ್ಲೇ ಮಾಡಿದರು. ಆಗ ಪ್ರಶಾಂತ್ ಉದ್ದೇಶಪೂರ್ವಕವಾಗಿ ಗಾನವಿಯ ಕೊರಳಿನ ಮೇಲೆ ಕಾಲಿಟ್ಟು, ಪ್ರಶರ್ ಹಾಕಿ ಏಳುತ್ತಿದ್ದಾರೆಯೇ ಎನಿಸಿತು. ಯಶಸ್, ಗಗನ್​​ ಹಾಗೂ ಇನ್ನೂ ಕೆಲವರು, ಪ್ರಶಾಂತ್ ಬೇಕೆಂದೇ ಗಾನವಿಯ ಕತ್ತಿನ ಮೇಲೆ ಮೊಣಕಾಲು ಇರಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ

ಆದರೆ ಆ ಬಳಿಕ ಸುದೀಪ್ ಪ್ಲೇ ಮಾಡಿದ ವಿಡಿಯೋನಲ್ಲಿ, ಗಾನವಿ, ಪ್ರಶಾಂತ್ ಕಾಲನ್ನು ಎಳೆದಿದ್ದರಿಂದಲೇ ಅವರು ಮುಂದೆ ಬಿದ್ದಂತೆ, ಬಿದ್ದ ಮೇಲೂ ಗಾನವಿ ಕಾಲು ಬಿಡದೇ ಇದ್ದ ಕಾರಣಕ್ಕೆ ಪ್ರಶಾಂತ್​​ಗೆ ಕೂಡಲೇ ಏಳಲು ಆಗಲಿಲ್ಲ ಎಂಬಂತೆಯೂ ಕಾಣಿಸಿತು. ಪ್ರಶಾಂತ್ ಸಹ ಇದನ್ನೇ ಹೇಳಿದರು.

ಸುದೀಪ್ ಸಹ ಪ್ರಶಾಂತ್, ಬೇಕೆಂದು ಬಿದ್ದಿಲ್ಲವೆಂದೂ, ಗಾನವಿ ಹಿಡಿದುಕೊಂಡಿದ್ದರಿಂದಲೇ ಪ್ರಶಾಂತ್​​ಗೆ ಬೇಗ ಏಳಲು ಸಾಧ್ಯವಾಗಲಿಲ್ಲ ಎಂದರು. ತಮ್ಮ ಮಾತು ಪ್ರೂವ್ ಮಾಡಲು ಧನುಶ್ ಹಾಗೂ ಪ್ರಶಾಂತ್ ಇಬ್ಬರನ್ನೂ ಮೊಣಕಾಲ ಮೇಲೆ ಕೂರಿಸಿ ಇಬ್ಬರಲ್ಲಿ ಪ್ರಶಾಂತ್ ತಡವಾಗಿ ಏಳುತ್ತಾರೆ ಏಕೆಂದರೆ ಅವರ ದೇಹದ ತೂಕದ ಕಾರಣಕ್ಕೆ ಎಂದರು. ಹಾಗೆಯೇ ಪ್ರಶಾಂತ್ ಉದ್ದೇಶಪೂರ್ವಕವಾಗಿ ಗಾನವಿಯ ಕೊರಳ ಮೇಲೆ ಭಾರ ಹಾಕಲಿಲ್ಲ ಎಂದರು. ಕೊನೆಗೆ ಪ್ರಶಾಂತ್ ಅಲ್ಲಿಯೇ ಗಾನವಿಯ ಕ್ಷಮೆ ಕೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us