ಸೋನಿಕಾ, ಪ್ರಶಾಂತ್, ಜಗ್ಗ ಮಮ್ಮಿ: ಮೂವರಲ್ಲಿ ಹೊರ ಹೋಗಿದ್ದು ಯಾರು?

ಈ ವಾರವೂ ಸಹ ಮನೆಯಿಂದ ಸ್ಪರ್ಧಿಯೊಬ್ಬರು ಹೊರಗೆ ಹೋಗಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಸಹ ಹಲವರು ನಾಮಿನೇಟ್ ಆಗಿದ್ದರು. ಪ್ರಮುಖ ಸ್ಪರ್ಧಿಗಳಾದ ಆಸಿಯಾ, ಗಾನವಿ, ಧನುಶ್, ಸೋನಿಕಾ, ಜಗ್ಗ ಮಮ್ಮಿ, ಪ್ರಶಾಂತ್ ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಸುದೀಪ್ ಅವರು ಮೊದಲಿಗೆ ಆಸಿಯಾ, ಧನುಶ್, ಗಾನವಿ ಇನ್ನೂ ಕೆಲವರನ್ನು ಮೊದಲು ಸೇಫ್ ಮಾಡಿ ಧನ್ಯವಾದ ಹೇಳಿದರು.

ಸೋನಿಕಾ, ಪ್ರಶಾಂತ್, ಜಗ್ಗ ಮಮ್ಮಿ: ಮೂವರಲ್ಲಿ ಹೊರ ಹೋಗಿದ್ದು ಯಾರು?
Bigg Boss Kannada 13

Updated on: Nov 15, 2026 | 10:43 PM

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13 ಎವಿಕ್ಷನ್
  • ಮನೆಯಿಂದ ಎವಿಕ್ಟ್ ಆದ ಸ್ಪರ್ಧಿ
  • ಜಗದೀಶ್, ಪ್ರಶಾಂತ್, ಸೋನಿಕಾರಲ್ಲಿ ಹೊರಹೋಗಿದ್ದು ಯಾರು?

ಬಿಗ್​​ಬಾಸ್​ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಪ್ರತಿ ಭಾನುವಾರ ಒಬ್ಬರಲ್ಲ ಒಬ್ಬರು ಮನೆಯಿಂದ ಹೊರಗೆ ಹೋಗಲೇ ಬೇಕು. ಅಂತೆಯೇ ಈ ವಾರವೂ ಸಹ ಮನೆಯಿಂದ ಸ್ಪರ್ಧಿಯೊಬ್ಬರು ಹೊರಗೆ ಹೋಗಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಸಹ ಹಲವರು ನಾಮಿನೇಟ್ ಆಗಿದ್ದರು. ಪ್ರಮುಖ ಸ್ಪರ್ಧಿಗಳಾದ ಆಸಿಯಾ, ಗಾನವಿ, ಧನುಶ್, ಸೋನಿಕಾ, ಜಗ್ಗ ಮಮ್ಮಿ, ಪ್ರಶಾಂತ್ ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಸುದೀಪ್ ಅವರು ಮೊದಲಿಗೆ ಆಸಿಯಾ, ಧನುಶ್, ಗಾನವಿ ಇನ್ನೂ ಕೆಲವರನ್ನು ಮೊದಲು ಸೇಫ್ ಮಾಡಿ ಧನ್ಯವಾದ ಹೇಳಿದರು.

ಕೊನೆಗೆ ಸೋನಿಕಾ, ಜಗದೀಶ್ ಮತ್ತು ಪ್ರಶಾಂತ್ ಉಳಿದುಕೊಂಡರು. ಮೂವರನ್ನು ಬಿಗ್​​ಬಾಸ್ ಮನೆಯ ಮುಖ್ಯ ದ್ವಾರದ ಹಿಂದೆ ನಿಲ್ಲಿಸಲಾಯ್ತು. ಬಳಿಕ ದಟ್ಟ ಹೊಗೆ ಆವರಿಸಿತು. ಆ ಹೊಗೆಯ ನಡುವೆ ಸೋನಿಕಾ ಕಾಣೆ ಆದರು. ಪ್ರಶಾಂತ್ ಮತ್ತು ಜಗದೀಶ್ ಉಳಿದುಕೊಂಡರು. ವೈಲ್ಡ್ ಕಾರ್ಡ್ ಮೂಲಕ ಮನೆಯ ಒಳಗೆ ಬಂದ ಸೋನಿಕಾ ಬಲು ಬೇಗನೆ ಹೊರಗೆ ಹೋದರು. ಆರಂಭದಲ್ಲಿ ಬಲು ಗಮನ ಸೆಳೆದಿದ್ದ ಸೋನಿಕಾ, ಹೆಚ್ಚು ಮಾತನಾಡದೇ ಇದ್ದಿದ್ದೆ ಅವರು ಮನೆಯಿಂದ ಹೊರಗೆ ಹೋಗಲು ಕಾರಣವಾಯ್ತಾ? ಎಂದು ಖುದ್ದು ಅವರೇ ಬೇಸರ ವ್ಯಕ್ತಪಡಿಸಿದರು.

Loading...

ಸೋನಿಕಾ ಅವರು ಗಾನವಿ ಮತ್ತು ಪ್ರಶಾಂತ್ ಅವರೊಟ್ಟಿಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ನಾಲ್ಕು ವಾರದ ಬಳಿಕ ಬಂದ ಸೋನಿಕಾ, ಅವರೇ ಹೇಳಿದಂತೆ ಬರೋಬ್ಬರಿ 50 ದಿನಗಳ ಬಳಿಕ ಹೊರಗೆ ಹೋಗುತ್ತಿದ್ದಾರೆ. ವಿಶೇಷವೆಂದರೆ ಈ ವಾರ ಅವರು ತುಸು ಹೆಚ್ಚು ಮಾತನಾಡಿದ್ದರು. ಕೆಲವರೊಟ್ಟಿಗೆ ಜಗಳವನ್ನೂ ಮಾಡಿದ್ದರು. ಅಷ್ಟರಲ್ಲೇ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ. ಹೊರಗೆ ಹೋದ ಬಳಿಕ ಸುದೀಪ್ ಜೊತೆಗೆ ಮಾತನಾಡಿದ ಸೋನಿಕಾ, ‘ನಾನು ಹೆಚ್ಚು ಮಾತನಾಡದೇ ಇದ್ದಿದ್ದೆ ನನಗೆ ಮುಳುವಾಯ್ತು, ಕಳೆದ ಕೆಲ ದಿನಗಳಿಂದಲೂ ನನಗೆ ನನ್ನಂಥೆ ಇರಲು ಕಷ್ಟ ಆಗುತ್ತಿದೆ’ ಎಂದು ಒಪ್ಪಿಕೊಂಡರು.

ಇದನ್ನೂ ಓದಿ:ಬಿಗ್​​ಬಾಸ್​​ನ ಘಾಟಿ ಹುಡುಗರಿಗೆ ಖಡಕ್ ಆವಾಜ್ ಹೊಡೆದ ಆಸಿಯಾ

ಸೋನಿಕಾ ಮೂಲತಃ ಫ್ಯಾಷನ್ ಉದ್ಯಮದಲ್ಲಿದ್ದವರು. ಟಿವಿ ಹಾಗೂ ಸಿನಿಮಾ ಎಂಬುದು ಅವರ ಕನಸು. ಫ್ಯಾಷನ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕಾರಣ ಆ ಅವಕಾಶ ತಪ್ಪಿಸಿಕೊಂಡಿದ್ದರಂತೆ. ಹಾಗಾಗಿ ಮತ್ತೊಂದು ಪ್ರಯತ್ನ ಮಾಡೋಣವೆಂದು ಬಿಗ್​​ಬಾಸ್​​ಗೆ ಆಗಮಿಸಿದ್ದರು. ಆದರೆ ಅದು ಯಶಸ್ವಿ ಆಗಿಲ್ಲ. ಕೆಲ ವಾರಗಳಲ್ಲಿ ಅವರು ಹೊರಗೆ ಹೋಗಿದ್ದಾರೆ. ಆದರೆ ಇದ್ದಷ್ಟು ದಿನ ತಕ್ಕ ಮಟ್ಟಿಗಿನ ಮನರಂಜನೆಯನ್ನು ಸೋನಿಕಾ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:41 pm, Sun, 15 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us