ಗಗನ್ ಮೋಸಗಾರ, ಕುಮಾರಿ ವೇಸ್ಟ್ ಪೀಸ್: ಮುಲಾಜಿಲ್ಲದೇ ಹೇಳಿದ ಸೌಂದರ್ಯಾ ಶೆಟ್ಟಿ

ಕ್ಯಾಪ್ಟನ್ ಆಗಿರುವ ಸೌಂದರ್ಯಾ ಶೆಟ್ಟಿ ಅವರು ನೇರವಾಗಿ ಈ ಮಾತುಗಳನ್ನು ಹೇಳಿದ್ದಾರೆ. ಗಗನ್ ಮೋಸಗಾರ, ಕುಮಾರಿ ವೇಸ್ಟ್ ಪೀಸ್, ಧನುಷ್ ಬಕೆಟ್, ಪ್ರಶಾಂತ್ ಊಸರವಳ್ಳಿ ಎಂದು ಅವರು ಟ್ಯಾಗ್ ನೀಡಿದ್ದಾರೆ. ತಮ್ಮನ್ನು ವೇಸ್ಟ್ ಪೀಸ್ ಎಂದು ಕರೆದಿದ್ದಕ್ಕೆ ಕುಮಾರಿ ಬೇಸರ ಮಾಡಿಕೊಂಡು ಕೂಗಾಡಿದ್ದಾರೆ.

ಗಗನ್ ಮೋಸಗಾರ, ಕುಮಾರಿ ವೇಸ್ಟ್ ಪೀಸ್: ಮುಲಾಜಿಲ್ಲದೇ ಹೇಳಿದ ಸೌಂದರ್ಯಾ ಶೆಟ್ಟಿ
Gagan Chinnappa, Kumari, Soundarya Shetty
Image Credit source: Colors Kannada

Updated on: Oct 26, 2026 | 10:42 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ 50 ದಿನಗಳು ಕಳೆದಿವೆ. ಇನ್ಮುಂದೆ ಆಟದ ತೀವ್ರತೆ ಹೆಚ್ಚಲಿದೆ. ಈ ವಾರದ ಆರಂಭದಲ್ಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಕೆಲವು ನಿಷ್ಠುರವಾದ ಟ್ಯಾಗ್​ಗಳ ಮೂಲಕ ಸ್ಪರ್ಧಿಗಳನ್ನು ಗುರುತಿಸುವಂತೆ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ ಅವರಿಗೆ ಸೂಚನೆ ನೀಡಲಾಯಿತು. ಆಗ ವೇಸ್ಟ್ ಪೀಸ್ ಟ್ಯಾಗನ್ನು ಕುಮಾರಿಗೆ ಹಾಗೂ ಮೋಸಗಾರ ಎಂಬ ಟ್ಯಾಗನ್ನು ಗಗನ್ ಚಿನ್ನಪ್ಪ ಅವರಿಗೆ ಸೌಂದರ್ಯಾ ಶೆಟ್ಟಿ ನೀಡಿದರು.

‘ಬಿಗ್ ಬಾಸ್ ಮನೆಯಲ್ಲಿ ವೇಸ್ಟ್ ಪೀಸ್ ಕುಮಾರಿ. ನಾನು ನೋಡಿದ 2 ವಾರದಲ್ಲಿ ಮನೆಯಲ್ಲಿ ಅವರ ಕೊಡುಗೆ ಏನೂ ಇಲ್ಲ. ನಾನು ಈ ವಾರ ಕ್ಯಾಪ್ಟನ್ ಆಗಿದ್ದು, ಕುಮಾರಿ ಆ್ಯಕ್ಟೀವ್ ಆಗಿರುವುದನ್ನು ನೋಡಲು ಇಷ್ಟಪಡುತ್ತೇನೆ’ ಎಂದು ಸೌಂದರ್ಯಾ ಶೆಟ್ಟಿ ಅವರು ಹೇಳಿದರು. ಅದನ್ನು ಒಪ್ಪಿಕೊಳ್ಳಲು ಕುಮಾರಿ ಸಿದ್ಧವಿರಲಿಲ್ಲ. ಆಗ ಸೌಂದರ್ಯಾ ಅವರು ತಮ್ಮ ಕಾರಣವನ್ನು ಸ್ಪಷ್ಟಪಡಿಸಿದರು.

‘ಕುಮಾರಿ ಕೊಡುಗೆ ಏನೂ ಇಲ್ಲ ಎಂಬುದನ್ನು ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ. ನನಗೆ ನಿನ್ನ ಜೊತೆ ಫೈಟ್ ಮಾಡೋಕೆ ಆಗಲ್ಲ. ನಿನಗೆ ವೇಸ್ಟ್ ಪೀಸ್ ಅಂತ ಕೊಟ್ಟಿದ್ದೇವೆ. ಒಂದು ವಾರದಲ್ಲಿ ನೀನು ನಿನ್ನ ಸಾಮರ್ಥ್ಯ ತೋರಿಸಬೇಕು. ವೇಸ್ಟ್ ಪೀಸ್ ಎಂಬ ಟ್ಯಾಗ್ ಕೊಟ್ಟಿದ್ದು ಒಳ್ಳೆಯದೇ ಆಯಿತು. ಈಗಲಾದರೂ ಎದ್ದಿದ್ದೀಯ’ ಎಂದು ಸೌಂದರ್ಯಾ ಅವರು ಹೇಳಿದರು.

‘ಆಟ ಶುರುವಾದ ಮೊದಲ ದಿನದಿಂದಲೇ ನಾನು ಎಲ್ಲರನ್ನೂ ನನ್ನ ಕಡೆಗೆ ನೋಡುವಂತೆ ಮಾಡಿದ್ದೇನೆ. ಆದರೆ ನಿಮ್ಮ ಕೊಡುಗೆ ಏನು ಇರುತ್ತೆ ಎಂಬುದನ್ನು ನಾನು ನೋಡುತ್ತೇನೆ’ ಎಂದು ಕುಮಾರಿ ಅವರು ಸೌಂದರ್ಯಾ ಶೆಟ್ಟಿ ಮೇಲೆ ತಿರುಗಿಬಿದ್ದರು. ‘ಈ ರೀತಿ ಮಾಡುವುದು ನಿನ್ನ ವ್ಯಕ್ತಿತ್ವ ಕಾಣಿಸುತ್ತದೆ. ಸಿಂಪಥಿ ಕಾರ್ಡ್ ಇಟ್ಟುಕೊಂಡು ಆಟ ಆಡುತ್ತಿದ್ದೀಯ. ಅದು ವರ್ಕ್ ಆಗುತ್ತಿಲ್ಲವಾ? ಅದಕ್ಕೆ ಈಗ ವೇಸ್ಟ್ ಪೀಸ್ ಆಗಿರುವುದು’ ಎಂದು ಸೌಂದರ್ಯಾ ಶೆಟ್ಟಿ ಖಡಕ್ ಆಗಿ ತಿರುಗೇಟು ನೀಡಿದರು.

ಇದನ್ನೂ ಓದಿ: ಬಿಗ್ ಬಾಸ್: ಸ್ನೇಹಿತ ಎಂಬುದನ್ನೂ ಮರೆತು ತಾಂಡವ್​ಗೆ ಶಿಕ್ಷೆ ನೀಡಿದ ಗಗನ್ ಚಿನ್ನಪ್ಪ

ಗಗನ್ ಅವರಿಗೆ ಮೋಸಗಾರ ಎಂಬ ಟ್ಯಾಗ್ ನೀಡಿದ ಬಳಿಕ ಅದಕ್ಕೆ ಸೌಂದರ್ಯಾ ಶೆಟ್ಟಿ ಕಾರಣ ನೀಡಿದರು. ‘ಅವರು ಆಟದ ವಿಚಾರದಲ್ಲಿ ನನಗೆ ಮೋಸ ಮಾಡಿದ್ದಾರೆ ಎನಿಸುತ್ತದೆ. ನಾನು ಗಗನ್ ಅವರನ್ನು ನಂಬಲ್ಲ. ಹಾಗಾಗಿ ಅವರಿಗೆ ಮೋಸಗಾರ ಟ್ಯಾಗ್ ನೀಡುತ್ತೇನೆ’ ಎಂದು ಅವರು ಹೇಳಿದರು. ಅದೇ ರೀತಿ ಧನುಷ್ ಅವರಿಗೆ ಬಕೆಟ್ ಹಾಗೂ ಪ್ರಶಾಂತ್ ಅವರಿಗೆ ಊಸರವಳ್ಳಿ ಎಂಬ ಟ್ಯಾಗ್ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us