
ಪ್ರತಿ ವಾರ ಬಿಗ್ಬಾಸ್ ಮನೆಯಲ್ಲಿ ನಡೆಯುವ ಟಾಸ್ಕ್ಗಳ ವೇಳೆ ಜಗಳು ನಡೆಯುವುದು ತೀರಾ ಸಾಮಾನ್ಯ. ಈ ಸೀಸನ್ನಲ್ಲೂ ಸಹ ಹಲವರ ನಡುವೆ ಪದೇ ಪದೇ ಜಗಳಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ವಾರ ನಡೆದ ಜಗಳ ಬಹಳ ಗಮನ ಸೆಳೆದಿದೆ. ಈ ವಾರ ತಾಂಡವ್ ಮತ್ತು ಗನನ್ ನಡುವೆ ಜಗಳ ನಡೆದಿದೆ. ಬಿಗ್ಬಾಸ್ ಆರಂಭವಾದ ದಿನದಿಂದಲೂ ಗಗನ್ ಮತ್ತು ತಾಂಡವ್ ಅತ್ಯಾಪ್ತ ಸ್ನೇಹಿತರಂತೆ ಇದ್ದರು. ಗಗನ್ ಅಂತೂ ತಾಂಡವ್ ಹೊರಗೆ ಹೋದಾಗ ಬಿಕ್ಕಿ-ಬಿಕ್ಕಿ ಅತ್ತಿದ್ದರು. ಒಬ್ಬರನ್ನು ಬಿಟ್ಟರೆ ಇನ್ನೊಬ್ಬರು ಇಲ್ಲ ಎಂಬಂತೆ ಇದ್ದರು. ಆದರೆ ಈ ವಾರ ಈ ಇಬ್ಬರು ಭೀಕರವಾಗಿ ಜಗಳ ಮಾಡಿದರು.
ಟಾಸ್ಕ್ ವೇಳೆ ಗಗನ್ ಹಾಗೂ ತಾಂಡವ್ ನಡುವೆ ಕಿರಿಕ್ ಆಯ್ತು. ಗಗನ್, ಒಮ್ಮೆಲೆ ತಾಂಡವ್ ಮೇಲೆ ಹರಿಹಾಯ್ದರು. ತಾಂಡವ್ ಅನ್ನು ‘ಕುನ್ನಿ’ ಎಂದರು. ತಾಂಡವ್, ಮೊದಲಿಗೆ ‘ಸುಮ್ಮನಿರು, ಸಮಾಧಾನವಾಗಿರು, ಮಾತನಾಡಬೇಡಿ, ರೇಗಿಸಬೇಡ’ ಎಂದೆಲ್ಲ ಗಗನ್ ಅವರನ್ನು ಸಮಾಧಾನದಿಂದ ಇರುವಂತೆ ಹೇಳುತ್ತಲೇ ಇದ್ದರು. ಆದರೆ ಗಗನ್ ಸುಮ್ಮನಾಗಲಿಲ್ಲ. ಕೊನೆಗೆ ತಾಂಡವ್ ಸಹ ತಾಳ್ಮೆ ಕಳೆದುಕೊಂಡು ಹೊಡೆಯುವ-ಬಡಿಯುವ ಮಾತುಗಳನ್ನಾಡಿದರು. ಅಲ್ಲಿಗೆ ಇಬ್ಬರ ನಡುವೆ ದೊಡ್ಡ ಜಗಳವೇ ಆಯ್ತು. ಅದಾದ ಕೆಲವೇ ದಿನಗಳ ಬಳಿಕ ಇಬ್ಬರೂ ಒಂದಾದರು. ಊಟದ ಟೇಬಲ್ನಲ್ಲಿ ಗಗನ್, ತಾಂಡವ್ಗೆ ತುತ್ತು ಮಾಡಿ ಊಟ ತಿನ್ನಿಸಿದರು.
ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಈ ಜಗಳದ ವಿಷಯ ಮಾತನಾಡಿದರು. ‘ಮಂಜ ಬಂದು ಹೊರಗಿನ ರಿಪೋರ್ಟ್ ಹೇಳಿದ್ದಕ್ಕೆ ನಿಮ್ಮಿಬ್ಬರ ನಡುವೆ ಜಗಳ ಆಯ್ತು’ ಎಂದರು. ಆದರೆ ಇಬ್ಬರೂ ಇದನ್ನು ಒಪ್ಪದೆ ಬೇರೆ ಬೇರೆ ಕಾರಣಗಳನ್ನು ಹೇಳಿದರು. ಸುದೀಪ್ ಅವರು ಕೆದಕಿ-ಕೆದಕಿ ಕೇಳಿದಾಗ ಬೇರೆ ಕೆಲವು ಆಂತರಿಕ ಕಾರಣಗಳನ್ನು ಸಹ ನೀಡಿದರು.
ಇದನ್ನೂ ಓದಿ:ಬಿಗ್ಬಾಸ್ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಕೊನೆಗೆ ಮಾತನಾಡಿದ ಸುದೀಪ್, ಗಗನ್ ಅವರನ್ನು ಉದ್ದೇಶಿಸಿ, ಒಂದು ಚೆಂಡಿಗೆ ನೀವು ತಾಂಡವ್ ವಿರುದ್ಧ ಅಷ್ಟು ರಾಂಗ್ ಆಗುವ ಅಗತ್ಯ ಇರಲಿಲ್ಲ ಎಂದರು. ತಾಂಡವ್ಗೆ ಸಹ ‘ಅಷ್ಟು ಹಿಂಸಾತ್ಮಕ ಬೆದರಿಕೆ ಹಾಕುವ ಅಗತ್ಯ ಇರಲಿಲ್ಲ’ ಎಂದರು. ಅಷ್ಟೆಲ್ಲ ಆದ ಮೇಲೆ ಅಂತಿಮವಾಗಿ ಒಬ್ಬರಿಗೊಬ್ಬರು ಊಟ ತಿನ್ನಿಸುವ ಅವಶ್ಯಕತೆ ಏನಿತ್ತು. ಅಷ್ಟೆಲ್ಲ ಜಗಳ ಮಾಡಿ ಈಗ ಪರಸ್ಪರ ಊಟ ತಿನ್ನಿಸಿದರೆ ಹೊರಗಡೆ ನೋಡುವವರಿಗೆ ಇದು ಫೇಕ್ ಜಗಳ, ಫೇಕ್ ಫ್ರೆಂಡ್ಶಿಪ್ ಅನಿಸುತ್ತದೆ ಎಂದರು. ನೀವು ಹೊರಗೆ ‘ಜೋಕರ್’ಗಳ ರೀತಿ ಕಾಣುತ್ತೀರಿ’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ