ಬಿಗ್ ಬಾಸ್: ಯಶಸ್ ಪರ​​ ವಹಿಸಿಕೊಂಡು ಮಾತನಾಡಲು ಹೋಗಿ ಪೇಚಿಗೆ ಸಿಲುಕಿದ ಆಸಿಯಾ

ಬಿಗ್ ಬಾಸ್ ಮನೆಯಲ್ಲಿ ಆಸಿಯಾ ಫಿರ್ದೋಸ್ ಆಟ ದಾರಿ ತಪ್ಪುತ್ತಿದೆಯೇ ಎಂಬ ಚರ್ಚೆ ಶುರುವಾಗಿದೆ. ಯಶಸ್ ಪರ ವಹಿಸಿ ಗಾನವಿ ಜೊತೆ ಜಗಳ ಮಾಡಿಕೊಂಡ ಆಸಿಯಾ, ‘ಮೌತ್‌ಪೀಸ್’ ಎಂಬ ತಿರುಗೇಟು ತಿಂದಿದ್ದಾರೆ. ಅಷ್ಟೇ ಅಲ್ಲದೆ ಗಾನವಿಯಿಂದ ನಾಮಿನೇಟ್ ಆಗಿ ಮನೆಯಲ್ಲಿ ಕಣ್ಣೀರಿಡುವ ಹಂತಕ್ಕೆ ಹೋದರು. ಇದು ಅವರ ಆಟದ ಶೈಲಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಬಿಗ್ ಬಾಸ್: ಯಶಸ್ ಪರ​​ ವಹಿಸಿಕೊಂಡು ಮಾತನಾಡಲು ಹೋಗಿ ಪೇಚಿಗೆ ಸಿಲುಕಿದ ಆಸಿಯಾ
ಆಸಿಯಾ
Image Credit source: Colors Kannada

Updated on: Oct 27, 2026 | 7:30 AM

ಮುಖ್ಯಾಂಶಗಳು

  • ಯಶಸ್ ಪರ ವಹಿಸಿ ಗಾನವಿ ವಿರುದ್ಧ ಕಿರಿಕ್ ಮಾಡಿಕೊಂಡ ಆಸಿಯಾ
  • ‘ನೀವು ಯಶಸ್ ಮೌತ್‌ಪೀಸ್’ ಎಂದು ನೇರ ತಿರುಗೇಟು ನೀಡಿದ ಗಾನವಿ
  • ಬದಲಾಗಬೇಕಿದೆಯೇ ಆಟದ ಶೈಲಿ

ಬಿಗ್ ಬಾಸ್ ಮನೆಯಲ್ಲಿರುವ ಆಸಿಯಾ ಫಿರ್ದೋಸ್ ಅವರು ಆರಂಭದ ದಿನದಲ್ಲಿ ಉತ್ತಮ ರೀತಿಯಲ್ಲಿ ಆಟ ಆಡಿದ್ದರು. ಆದರೆ, ದಿನ ಕಳೆದಂತೆ ಅವರ ಆಟ ದಾರಿ ತಪ್ಪಿರುವುದು ಸ್ಪಷ್ಟವಾಗುತ್ತಿದೆ. ಯಶಸ್ ಗೌಡ ಜೊತೆ ಅವರಿಗೆ ಒಳ್ಳೆಯ ಬಾಂಡ್ ಬೆಳೆದಿದ್ದು, ಅವರ ಪರವಾಗಿ ಮಾತನಾಡಲು ತಮ್ಮ ಶ್ರಮವನ್ನು ಅವರು ವ್ಯರ್ಥ ಮಾಡುತ್ತಿರುವುದು ಸ್ಪಷ್ಟವಾಗಿದೆ. ಇದು ಚರ್ಚೆಗೆ ಕಾರಣ ಆಗಿದೆ.

ಆಸಿಯಾ ಫಿರ್ದೋಸ್ ಅವರು ಬಿಗ್ ಬಾಸ್ ಮನೆಯಲ್ಲಿ ಹಲವು ಪರಿಸ್ಥಿತಿಗಳಲ್ಲಿ ಕಣ್ಣೀರು ಹಾಕಿದ್ದಾರೆ. ಅವರು ಕೆಲವು ಕಠಿಣ ಸಮಯದಲ್ಲಿ ಕಣ್ಣೀರು ಹಾಕುತ್ತಾ ಕುಳಿತಿರುತ್ತಾರೆ. ಈಗ ಅವರು ಯಶಸ್ ಪರ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ. ಆ ಬಳಿಕ ನಾಮಿನೇಟ್ ಆದ ವಿಷಯಕ್ಕೆ ಕಣ್ಣೀರು ಹಾಕಿದ್ದಾರೆ.

ಗಾನವಿ ಹಾಗೂ ಯಶಸ್ ಮಧ್ಯೆ ಕಿರಕ್ ಆಗಿದೆ. ಇದಕ್ಕೂ ಆಸಿಯಾಗೂ ಯಾವುದೇ ಸಂಬಂಧ ಇಲ್ಲ. ಆದಾಗ್ಯೂ ಇದನ್ನು ಸರಿ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರಿಂದ ಕಿರಿಕ್ ಆಗಿದೆ. ಆ ಬಳಿಕ ಯಶಸ್ ಹಾಗೂ ಗಾನವಿ ಕೂಗಾಡಿಕೊಂಡಿದ್ದಾರೆ. ಆ ಬಳಿಕ ಗಾನವಿ ಹಾಗೂ ಆಸಿಯಾ ಮಧ್ಯೆ ಇದೇ ವಿಷಯಕ್ಕೆ ಕಿರಿಕ್ ಆಗಿದೆ. ‘ನೀವು ಯಶಸ್​​ನ ಮೌತ್​ಪೀಸ್’ ಎಂದು ಗಾನವಿ ಅವರು ಆಸಿಯಾಗೆ ತಿರುಗೇಟು ಕೊಟ್ಟಿದ್ದಾರೆ.

ಈ ಕಿರಿಕ್ ಇಷ್ಟಕ್ಕೆ ನಿಂತಿಲ್ಲ. ನಾಮಿನೇಷನ್​ವರೆಗೂ ಹೋಗಿದೆ. ನಾಮಿನೇಷನ್ ವೇಳೆ ಗಾನವಿ ಅವರಿಗೆ ನಾಮಿನೇಷನ್ ಮಾಡುವ ಅವಕಾಶ ಸಿಕ್ಕಿತು. ಆಗ ಆಸಿಯಾ ಅವರನ್ನು ಗಾನವಿ ನಾಮಿನೇಟ್ ಮಾಡಿದರು. ಇದರಿಂದ ಸಿಟ್ಟಾದ ಆಸಿಯಾ ಒಂದೇ ಸಮನೆ ಕೂಗಲು ಆರಂಭಿಸಿದರು. ಕೊನೆಗೆ ಅದು ಕಣ್ಣೀರು ಹಾಕುವ ಹಂತಕ್ಕೂ ಹೋಯಿತು.

ಇದನ್ನೂ ಓದಿ: ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ

ಆಸಿಯಾ ಅವರು ಆಟದ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಅವರು ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸೋದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರುತ್ತಾ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us