
‘ಬಿಗ್ ಬಾಸ್’ ಮನೆ ನಿರ್ಮಾಣಕ್ಕೆ ಸಾಕಷ್ಟು ಶ್ರಮ ಹಾಗೂ ಹಣ ಎರಡೂ ಖರ್ಚಾಗುತ್ತದೆ. ಮೂರು ತಿಂಗಳ ಕಾಲ ಸ್ಪರ್ಧಿಗಳಿಗೆ ಇದುವೇ ಮನೆ. ಮನೆ ಎಂದಮೇಲೆ ಅದನ್ನು ಉತ್ತಮವಾಗಿ ನೋಡಿಕೊಳ್ಳುವುದು ಸ್ಪರ್ಧಿಗಳ ಜವಾಬ್ದಾರಿ ಆಗಿರುತ್ತದೆ. ಆದರೆ, ಇದನ್ನು ಸ್ಪರ್ಧಿಗಳು ಮರೆತಿದ್ದಾರೆ. ಟಾಸ್ಕ್ ನೆಪದಲ್ಲಿ ಇಡೀ ಮನೆಯನ್ನು ಕೊಚ್ಚೆಗುಂಡಿ ಮಾಡಿದ್ದಾರೆ. ಈ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಮೂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಗೆ ಬಂದ ಸ್ಪರ್ಧಿಗಳನ್ನು ನೋಡಿ ವೀಕ್ಷಕರಿಗೆ ಅಸಮಾಧಾನ ಉಂಟಾಗಿದೆ. ಸ್ಪರ್ಧಿಗಳು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ಈ ವಿಷಯ ಚರ್ಚೆಗೆ ಕಾರಣ ಆಗಿದೆ. ಬಿಗ್ ಬಾಸ್ ಮನೆಯನ್ನು ಹಾಳು ಮಾಡಿದ ರೀತಿ ನೋಡಿ ವೀಕ್ಷಕರಿಗೆ ಬೇಸರ ಆಗಿದೆ.
ಈ ಬಾರಿಯ ಬಿಗ್ ಬಾಸ್ ಮನೆ ತುಂಬಾನೇ ಅದ್ಭುತವಾಗಿದೆ. ಅತ್ಯಂತ ಅದ್ದೂರಿಯಾಗಿ ಈ ಮನೆ ನಿರ್ಮಾಣ ಮಾಡಲಾಗಿದೆ. ಮನೆಯ ಫ್ಲೋರ್ ಕೂಡ ಉತ್ತಮವಾಗಿದೆ. ಆದರೆ, ಗಂಧರ್ವರು ಹಾಗೂ ರಾಕ್ಷಸರು ಟಾಸ್ಕ್ ವೇಳೆ ಟೊಮ್ಯಾಟೋ ಜ್ಯೂಸ್, ಅನ್ನವನ್ನು ಎದುರಾಳಿಯ ಮೇಲೆ ಹಾಕಿದ್ದಾರೆ. ಇದು ನೆಲಕ್ಕೆ ಬಿದ್ದಿದೆ. ಇನ್ನು, ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಇಡೀ ಮನೆಯ ಅಂದವನ್ನು ಸ್ಪರ್ಧಿಗಳು ಕೆಡಿಸಿದ್ದಾರೆ.
ಇನ್ನು ಬಾತ್ರೂಂ ಭಾಗದಲ್ಲಿ ಶ್ಯಾಂಪೂ, ಬಾಡಿ ಲೋಷನ್ ಸೇರಿದಂತೆ ಎಲ್ಲವನ್ನೂ ನೆಲಕ್ಕೆ ಚೆಲ್ಲಲಾಗಿದೆ. ಡಸ್ಟ್ಬಿನ್ ಕಸವನ್ನು ನೆಲದ ಮೇಲೆ ಎಸೆಯಲಾಗಿದೆ. ಇವು ಬಿಗ್ ಬಾಸ್ ಮನೆಯ ಪ್ರಾಪರ್ಟಿ ನಾಶದ ಭಾಗವೇ ಆಗಿದೆ. ಈ ವಿಷಯವನ್ನು ವೀಕೆಂಡ್ನಲ್ಲಿ ಗಂಭೀರವಾಗಿ ಪರಿಗಣಿಸಿ ಚರ್ಚಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ‘ಮಂಜು ಈ ವಾರ ಎಲಿಮಿನೇಟ್ ಫಿಕ್ಸ್’; ವಿಶೇಷ ಅಧಿಕಾರ ಬಳಸ್ತಾರಾ ಸುದೀಪ್?
ಬಿಗ್ ಬಾಸ್ ಮನೆಯ ಪ್ರಾಪರ್ಟಿ ಹಾಗೂ ಆಹಾರ ಪದಾರ್ಥಗಳನ್ನು ಈ ರೀತಿ ಪೋಲು ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆಹಾರ ಮತ್ತು ಸ್ವಚ್ಛತೆಗೆ ಕನಿಷ್ಠ ಗೌರವ ನೀಡದ ಸ್ಪರ್ಧಿಗಳಿಗೆ ಸುದೀಪ್ ಅವರು ಈ ವಾರಾಂತ್ಯದ ಸಂಚಿಕೆಯಲ್ಲಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಮನೆ ಹಾಳು ಮಾಡಿದ ಸ್ಪರ್ಧಿಗಳಿಗೆ ಸೂಕ್ತ ಶಿಕ್ಷೆ ನೀಡುವ ಮೂಲಕ ಬಿಗ್ ಬಾಸ್ ಆಸ್ತಿಯನ್ನು ಗೌರವಿಸುವುದನ್ನು ಕಲಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.