‘ಮಂಜು ಈ ವಾರ ಎಲಿಮಿನೇಟ್ ಫಿಕ್ಸ್’; ವಿಶೇಷ ಅಧಿಕಾರ ಬಳಸ್ತಾರಾ ಸುದೀಪ್?
ಬಿಗ್ ಬಾಸ್ ಕನ್ನಡ ಮನೆಯಲ್ಲಿ ನಡೆಯುತ್ತಿರುವ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್ ವೇಳೆ ಸ್ಪರ್ಧಿ ಮಂಜು ಅತಿಯಾದ ಅಸಭ್ಯ ಮತ್ತು ಅವಾಚ್ಯ ಶಬ್ದಗಳನ್ನು ಬಳಸಿ ತೀವ್ರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಶೋನ ಪ್ರಾಪರ್ಟಿ ಹಾನಿಗೊಳಿಸಿ ಇತರ ಸ್ಪರ್ಧಿ ನಿಂದಿಸಿದ ಅವರ ಈ ವರ್ತನೆಯಿಂದಾಗಿ, ಸುದೀಪ್ ತಮ್ಮ ವಿಶೇಷ ಅಧಿಕಾರ ಬಳಸಿ ಈ ವಾರವೇ ಅವರನ್ನು ಎಲಿಮಿನೇಟ್ ಮಾಡುತ್ತಾರಾ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರಗೊಂಡಿದೆ.

ಮುಖ್ಯಾಂಶಗಳು
- ರಾಕ್ಷಸರು-ಗಂಧರ್ವರ ಟಾಸ್ಕ್
- ಬಿಗ್ ಬಾಸ್ ಪ್ರಾಪರ್ಟಿ ಧ್ವಂಸ, ಸತತ ಬೀಪ್ ಶಬ್ದ
- ಮನೆಯಲ್ಲಿ ಮಂಜು ಹಂಗಾಮ
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈ ವಾರ ಮಂಜು ಎಲಿಮಿನೇಟ್ ಆಗ್ತಾರಾ? ಸುದೀಪ್ ವಿಶೇಷ ಅಧಿಕಾರ ಬಳಸಿ ಮಂಜುನ ಹೊರಕ್ಕೆ ಕಳುಹಿಸುತ್ತಾರಾ? ಈ ರೀತಿಯ ಪ್ರಶ್ನೆಗಳು ಅಭಿಮಾನಿಗಳಿಗೆ ಮೂಡುತ್ತಾ ಇವೆ. ಇದಕ್ಕೆ ಕಾರಣ ಆಗಿರೋದು ಅವರ ನಡೆ. ಬಿಗ್ ಬಾಸ್ ಮನೆಯಲ್ಲಿ ಅತಿಯಾದ ಅಶ್ಲೀಲ ಪದ ಬಳಸಿ ಅವರು ಚರ್ಚೆಗೆ ಕಾರಣರಾಗಿದ್ದಾರೆ. ಅವರ ಹೊರ ಹೋಗೋದು ಬಹುತೇಕ ಖಚಿತ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆದಿದೆ.
ರಾಕ್ಷಸರು ಹಾಗೂ ಗಂಧರ್ವರು ಎಂಬ ಟಾಸ್ಕ್ ನೀಡಲಾಗಿತ್ತು. ಮೊದಲು ಮಂಜು ರಾಕ್ಷಸರ ತಂಡದಲ್ಲಿ ಇದ್ದರೆ, ಯಶಸ್ ಅವರು ಗಂಧರ್ವರ ತಂಡದಲ್ಲಿ ಇದ್ದರು. ಈ ವೇಳೆ ಮಂಜು ಅವರಿಗೆ ಯಶಸ್ಗೆ ‘ಸ್ತ್ರೀ ವ್ಯಾಮೋಹ ಇರುವ ಕಳ್ಳನಾಯಿ’ ಎಂದು ಕರೆದಿದ್ದರು. ಇದನ್ನು ಯಶಸ್ ಸಹಿಸಿಕೊಂಡಿದ್ದರು. ಆ ಬಳಿಕ ಮಂಜು ತಂಡ ಗಂಧರ್ವರಾದಾಗ, ಯಶಸ್ ಅವರು ರಾಕ್ಷಸರ ತಂಡದಲ್ಲಿ ಇದ್ದರು. ಈ ವೇಳೆ ಯಶಸ್ ಅವರು ಪದೇ ಪದೇ ಮಂಜು ಅವರನ್ನು ನಾಯಿ ನಾಯಿ ಎಂದು ಹಂಗಿಸುತ್ತಿದ್ದರು.
ಮಂಜು ಒಂದು ಹಂತದವರೆಗೆ ಇದನ್ನು ಸಹಿಸಿಕೊಂಡರು. ಕೊನೆಗೆ ಟಾಸ್ಕ್ ವೇಳೆ ಸಿಡಿದೆದ್ದರು. ಅವರು ಬಿಗ್ ಬಾಸ್ ಪ್ರಾಪರ್ಟಿಗಳನ್ನು ನಾಶ ಮಾಡಿದರು. ಅಷ್ಟೇ ಅಲ್ಲ, ಯಶಸ್ ಅವರನ್ನು ಕಾಮುಕ ಎಂದರು. ಆ ಬಳಿಕ ಅತಿಯಾದ ಅವಾಚ್ಯ ಶಬ್ದಗಳ ಬಳಸಿದರು. ಇದ್ಯಾವ ಹಂತಕ್ಕೆ ಹೋಯಿತು ಎಂದರೆ ಕೆಲ ಹೊತ್ತು ಬಿಗ್ ಬಾಸ್ ಕೇವಲ ಬೀಪ್, ಬೀಪ್ ಹಾಕಬೇಕಾಯಿತು. ಟಾಸ್ಕ್ ಮುಗಿದ ಬಳಿಕವೂ ಮಂಜು ಇದನ್ನು ಮುಂದುವರಿಸಿಯೇ ಇದ್ದರು.
ಇದನ್ನೂ ಓದಿ: ಬಿಗ್ ಬಾಸ್: ಜನರು ಕೇಳಿಸಿಕೊಳ್ಳಲು ಸಾಧ್ಯವಾಗದಷ್ಟು ಅಶ್ಲೀಲವಾಗಿ ಮಾತನಾಡಿದ ಮಂಜ
ಈ ವಿಷಯ ಈಗ ಚರ್ಚೆಗೆ ಕಾರಣ ಆಗಿದೆ. ಬೇರೆಯವರ ಮೇಲೆ ಹಲ್ಲೆ ಮಾಡುವುದು ಎಷ್ಟು ದೊಡ್ಡ ತಪ್ಪೋ, ಅತಿಯಾಗಿ ಅಶ್ಲೀಲ ಪದ ಬಳಸಿದರು ಇತರ ಸ್ಪರ್ಧಿಗಳಿಗೆ ಹಾಗೂ ನೋಡುವ ವೀಕ್ಷಕರಿಗೆ ಅಸಹ್ಯ ಆಗುವಂತೆ ಮಾಡುವುದು ಕೂಡ ತಪ್ಪೇ. ಹೀಗಾಗಿ, ಈ ವಾರ ಸುದೀಪ್ ಅವರು ವಿಶೇಷ ಅಧಿಕಾರ ಬಳಸಿ ಮಂಜು ಅವರನ್ನು ಎಲಿಮಿನೇಟ್ ಮಾಡಲಿ ಎಂದು ಎಲ್ಲರೂ ಕೇಳಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




