ಬಿಗ್​​ಬಾಸ್: ಸೌಂದರ್ಯಾ ಬಗ್ಗೆ ಬದಲಾಗುತ್ತಿದೆ ಮನೆಯವರ ಅಭಿಪ್ರಾಯ

ಬಿಗ್​​ಬಾಸ್​​ ಕನ್ನಡ ಸೀಸನ್ 13 ಶುರುವಾಗಿ 74 ದಿನಗಳಾಗಿವೆ. ಪ್ರಸ್ತುತ ಗಟ್ಟಿ ಸ್ಪರ್ಧಿಗಳು ಮಾತ್ರವೇ ಬಿಗ್​​ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಮನೆಯ ಸದಸ್ಯರ ಬಗ್ಗೆಯೂ ಸಹ ಮನೆಯ ಒಳಗೆ ಹಾಗೂ ಹೊರಗಡೆಯೂ ಅಭಿಪ್ರಾಯಗಳು ಬದಲಾವಣೆ ಆಗುತ್ತಲೇ ಇವೆ. ಇದೀಗ ಸೌಂದರ್ಯಾ ಬಗ್ಗೆ ಮನೆಯ ಸದಸ್ಯರಿಗೆ ಅಭಿಪ್ರಾಯ ಬದಲಾವಣೆ ಆಗುತ್ತಿದೆ. ಸೌಂದರ್ಯಾ ಅವರು ಇತ್ತೀಚೆಗಿನ ದಿನಗಳಲ್ಲಿ ಆಟ ಆಡುತ್ತಿರುವ ರೀತಿಯಿಂದಾಗಿಯೇ ಈ ಅಭಿಪ್ರಾಯ ಭೇದ, ಬದಲಾವಣೆ ಉಂಟಾಗುತ್ತಿದೆ.

ಬಿಗ್​​ಬಾಸ್: ಸೌಂದರ್ಯಾ ಬಗ್ಗೆ ಬದಲಾಗುತ್ತಿದೆ ಮನೆಯವರ ಅಭಿಪ್ರಾಯ
Soundarya

Updated on: Nov 20, 2026 | 7:59 AM

ಮುಖ್ಯಾಂಶಗಳು

  • ಬಿಗ್​​ಬಾಸ್ ಮನೆ ವಾರ್ತೆ
  • ಸೌಂದರ್ಯಾ ಶೆಟ್ಟಿ ಬಗ್ಗೆ ಬದಲಾಗುತ್ತಿದೆ ಅಭಿಪ್ರಾಯ
  • ಸೌಂದರ್ಯಾ ಬಗ್ಗೆ ಮನೆಯವರ ಅಭಿಪ್ರಾಯ ಏನು?

ಬಿಗ್​​ಬಾಸ್​​ ಕನ್ನಡ ಸೀಸನ್ 13 ಶುರುವಾಗಿ 74 ದಿನಗಳಾಗಿವೆ. ಪ್ರಸ್ತುತ ಗಟ್ಟಿ ಸ್ಪರ್ಧಿಗಳು ಮಾತ್ರವೇ ಬಿಗ್​​ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಮನೆಯ ಸದಸ್ಯರ ಬಗ್ಗೆಯೂ ಸಹ ಮನೆಯ ಒಳಗೆ ಹಾಗೂ ಹೊರಗಡೆಯೂ ಅಭಿಪ್ರಾಯಗಳು ಬದಲಾವಣೆ ಆಗುತ್ತಲೇ ಇವೆ. ಇದೀಗ ಸೌಂದರ್ಯಾ ಬಗ್ಗೆ ಮನೆಯ ಸದಸ್ಯರಿಗೆ ಅಭಿಪ್ರಾಯ ಬದಲಾವಣೆ ಆಗುತ್ತಿದೆ. ಸೌಂದರ್ಯಾ ಅವರು ಇತ್ತೀಚೆಗಿನ ದಿನಗಳಲ್ಲಿ ಆಟ ಆಡುತ್ತಿರುವ ರೀತಿಯಿಂದಾಗಿಯೇ ಈ ಅಭಿಪ್ರಾಯ ಭೇದ, ಬದಲಾವಣೆ ಉಂಟಾಗುತ್ತಿದೆ.

ನಿನ್ನೆ (ನವೆಂಬರ್ 19)ರ ಎಪಿಸೋಡಿನಲ್ಲಿ ಸೌಂದರ್ಯಾ, ತಮ್ಮ ಆಪ್ತ ಗೆಳತಿ ಆಸಿಯಾ ಜೊತೆಗೆ ಜಗಳ ಮಾಡಿದರು. ಒಂದು ಹಂತದಲ್ಲಂತೂ ಬಕೆಟ್ ಹಿಡಿದುಕೊಂಡು ಆಸಿಯಾ ಮೇಲೆ ಹಲ್ಲೆಗೆ ಮುಂದಾಗಿದ್ದರು. ನಾಮಿನೇಷನ್ ಟಾಸ್ಕ್ ಇನ್ನಿತರೆಗಳು ಮುಗಿದ ಬಳಿಕ ಮನೆಯ ಕೆಲ ಸದಸ್ಯರು ಸೌಂದರ್ಯಾ ವರ್ತನೆ ಬಗ್ಗೆ ಚರ್ಚೆ ಶುರು ಮಾಡಿದರು. ವಿಶೇಷವಾಗಿ ಪ್ರಶಾಂತ್, ಗಗನ್, ತಾಂಡವ್, ಜಗದೀಶ್ ಮತ್ತು ಶಾಸ್ತ್ರಿ ಅವರುಗಳು ಸೌಂದರ್ಯಾ ಅವರ ಬಗ್ಗೆಯೇ ವಿಶೇಷವಾಗಿ ಚರ್ಚೆ ಮಾಡಿದರು.

Loading...

ಪ್ರಶಾಂತ್ ಹೇಳಿದಂತೆ, ಸೌಂದರ್ಯಾ, ಬಿಗ್​​ಬಾಸ್ ಮನೆಯ ಒಳಗೆ ಮಾಡುತ್ತಿರುವುದೆಲ್ಲ ನಾಟಕ ಅಥವಾ ಪೂರ್ವ ಯೋಜಿತ. ಸೌಂದರ್ಯಾ ಈಗಾಗಲೇ ಒಂದು ಜನಪ್ರಿಯ ರಿಯಾಲಿಟಿ ಶೋ ಮಾಡಿಕೊಂಡು ಬಂದಿದ್ದಾರೆ. ಒಂದು ರಿಯಾಲಿಟಿ ಶೋನಲ್ಲಿ ಹೇಗೆ ಮಾತನಾಡಿದರೆ, ಹೇಗೆ ವರ್ತನೆ ಮಾಡಿದರೆ ಲೈಮ್ ಲೈಟ್ ಅವರ ಮೇಲೆ ಬೀಳುತ್ತದೆ ಎಂಬುದು ಸೌಂದರ್ಯಾಗೆ ಗೊತ್ತು. ಸೌಂದರ್ಯಾ ಆಡುವ ಮಾತು, ಮಾಡುವ ಕಾರ್ಯ ಎಲ್ಲವೂ ಶೋ ಕುರಿತಾಗಿಯೇ ಆಗಿರುತ್ತದೆ. ಹೇಗೆ ವರ್ತಿಸಿದರೆ ನನ್ನ ಶಾಟ್ ಪ್ರೋಮೊನಲ್ಲಿ ಬರುತ್ತದೆ. ಯಾವ ರೀತಿ ಮಾತನಾಡಿದರೆ ನನ್ನ ‘ಸೀನ್’ ಎಪಿಸೋಡಿನಲ್ಲಿ ಬರುತ್ತದೆ ಎಂಬುದು ಸೌಂದರ್ಯಾಗೆ ಗೊತ್ತು ಅವರು ಹಾಗೆಯೇ ವರ್ತನೆ ಮಾಡುತ್ತಾರೆ’ ಎಂದು ಪ್ರಶಾಂತ್ ಹೇಳಿದ. ಅದಕ್ಕೆ ಅಲ್ಲಿದ್ದ ಎಲ್ಲರೂ ಒಪ್ಪಿಗೆ ಸೂಚಿಸಿದರು.

ಇದನ್ನೂ ಓದಿ:ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್: ವಿಡಿಯೋ

ಗಗನ್ ಮಾತನಾಡಿ, ‘ಆಸಿಯಾ, ನನಗೆ ಹೊಡೆದಳು ಎಂದು ಜಗಳಕ್ಕೆ ಹೋಗಿದ್ದಾಳೆ. ಎಲ್ಲರಿಗೂ ಗೊತ್ತಿದೆ ಆಸಿಯಾ ಹೊಡೆದಿಲ್ಲ ಅದೇ ತಾಗಿದ್ದು ಎಂದು. ಅಲ್ಲದೆ ಆಸಿಯಾ ಯಾರನ್ನಾದರೂ ಹೊಡೆಯುವ ಹುಡುಗಿಯೂ ಅಲ್ಲ. ಆದರೆ ಸೌಂದರ್ಯಾ ಬೇಕೆಂದೇ ಜಗಳ ದೊಡ್ಡದು ಮಾಡಿದಳು’ ಎಂದರು. ಇನ್ನು ಟಾಸ್ಕ್ ವೇಳೆ ಧನುಶ್ ಸಹ ಸೌಂದರ್ಯಾ ಅನ್ನು ‘ಪೆದ್ದು ಗುಂಡಿ’ ಎಂದೆಲ್ಲ ರೇಗಿಸಿ, ಟೀಕೆ ಮಾಡಿದರು. ಮೊದಲೆಲ್ಲ ಸೌಂದರ್ಯಾ ಎಂದರೆ ಒಳ್ಳೆಯ ಫ್ರೆಂಡ್, ಜಾಲಿ ಹುಡುಗಿ ಎಂಬ ಅಭಿಪ್ರಾಯ ಮನೆಯಲ್ಲಿ ಇತ್ತು. ಆದರೆ ಇತ್ತೀಚೆಗೆ ಮನೆ ಮಂದಿಗೆ ಸೌಂದರ್ಯಾ ಮೇಲೆ ಅಭಿಪ್ರಾಯ ಬದಲಾಗಿದೆ. ಅದಕ್ಕೆ ನಿನ್ನೆ ಆದ ಚರ್ಚೆಯೇ ಉದಾಹರಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us