‘ಬಿಗ್ ಬಾಸ್ ಕನ್ನಡ ಸೀಸನ್ 10’ ಈಗಾಗಲೇ 80 ದಿನಗಳನ್ನು ಪೂರೈಸಿದೆ. ದೊಡ್ಮನೆ ಆಟ ಇನ್ನು ಕೇವಲ 20 ದಿನ ಉಳಿದಿರೋದು ಅನ್ನೋದು ಅನೇಕರ ಭಾವನೆ. ಮನೆಯಲ್ಲಿ ಇರುವ ಸ್ಪರ್ಧಿಗಳು ಕೂಡ ಇದನ್ನೇ ಅಂದುಕೊಂಡಿದ್ದಾರೆ. ಆದರೆ, ಬಿಗ್ ಬಾಸ್ (Bigg Boss) ಈ ಬಾರಿ 100 ದಿನಕ್ಕೆ ಪೂರ್ಣಗೊಳ್ಳುತ್ತಿಲ್ಲ ಎನ್ನುತ್ತಿವೆ ಮೂಲಗಳು. ಈ ವಿಚಾರ ಕೇಳಿ ವೀಕ್ಷಕರು ಖುಷಿಪಟ್ಟಿದ್ದಾರೆ.
ಬಿಗ್ ಬಾಸ್ ಎಂದಾಗ ತಕ್ಷಣಕ್ಕೆ ನೆನಪಿಗೆ ಬರೋದು ನೂರು ದಿನಗಳ ಆಟ ಎಂಬುದು. ಕೆಲವು ಸೀಸನ್ಗಳು ಕೇವಲ 98ನೇ ದಿನಕ್ಕೆ ಪೂರ್ಣಗೊಂಡ ಉದಾಹರಣೆ ಇದೆ. ಎಂಟನೇ ಸೀಸನ್ 117 ದಿನಗಳ ಕಾಲ ಇತ್ತು. ಏಳನೇ ಸೀಸನ್ 112 ದಿನ ನಡೆದಿತ್ತು. ಟಿಆರ್ಪಿ ಉತ್ತಮವಾಗಿದ್ದಾಗ ಹೆಚ್ಚುವರಿಯಾಗಿ ಎರಡು ವಾರ ಬಿಗ್ ಬಾಸ್ ಶೋನ ನಡೆಸಲಾಗುತ್ತದೆ. ಈ ಸೀಸನ್ನಲ್ಲೂ ಎರಡು ವಾರ ಹೆಚ್ಚುವರಿಯಾಗಿ ನಡೆಸಲು ವಾಹಿನಿ ನಿರ್ಧರಿಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಬಿಗ್ ಬಾಸ್ ಬಾಗಿಲು ತೆಗೆಯಿರಿ’; ತಂದೆ-ತಾಯಿ ನೋಡಿ ಗಳಗಳನೆ ಅತ್ತ ಪ್ರತಾಪ್
ಈ ಬಾರಿ ಬಿಗ್ ಬಾಸ್ ಟಿಆರ್ಪಿ ಉತ್ತಮವಾಗಿ ಬರುತ್ತಿದೆ. ಕಳೆದ ವಾರ ಬಂದ ಟಿಆರ್ಪಿ ಪ್ರಕಾರ ವೀಕೆಂಡ್ ಎಪಿಸೋಡ್ನಲ್ಲಿ ಬಿಗ್ ಬಾಸ್ 9 ಟಿವಿಆರ್ ಪಡೆದಿದೆ. ಇದು ವಾಹಿನಿಯವರ ಖುಷಿ ಹೆಚ್ಚಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬಿಗ್ ಬಾಸ್ಗೆ ಈ ಮಟ್ಟದ ಟಿಆರ್ಪಿ ಸಿಕ್ಕಿರಲಿಲ್ಲ. ಈ ಕಾರಣದಿಂದ 14 ದಿನ ಹೆಚ್ಚುವರಿಯಾಗಿ ಶೋ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Bigg Boss Kannada: ‘ಬಿಗ್ ಬಾಸ್’ ಕೊಡ್ತಿರೋ ಕಾಟಕ್ಕೆ ಸ್ಪರ್ಧಿಗಳು ಸುಸ್ತೋ ಸುಸ್ತು
ಈ ಬಾರಿಯ ಬಿಗ್ ಬಾಸ್ನಲ್ಲಿ ವಿವಾದಗಳು ಸಾಕಷ್ಟಿದ್ದವು. ವಿನಯ್ ಗೌಡ ಅವರು ಸಾಕಷ್ಟು ಕೂಗಾಟ ನಡೆಸಿದ್ದರು. ಕೆಲವರ ಕಣ್ಣಿಗೆ ಹಾನಿ ಆಯಿತು. ಬಳೆಯ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈ ಎಲ್ಲಾ ಕಾರಣದಿಂದ ಬಿಗ್ ಬಾಸ್ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಈ ಬಾರಿಯ ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೊಡುವ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ