ರಾಜಿಯಾದ ಸೌಂದರ್ಯಾ-ಯಶಸ್; ಅದೇ ರಾಗ, ಅದೇ ಹಾಡು

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಯಶಸ್ ಹಾಗೂ ಸೌಂದರ್ಯಾ ನಡುವೆ ಉಂಟಾಗಿದ್ದ ಬಿರುಕು ಕೊನೆಗೂ ಶಮನಗೊಂಡಿದೆ. ಮಂಜು ಅವರು ಯಶಸ್ ವಿರುದ್ಧ 'ಸ್ತ್ರೀ ವ್ಯಾಮೋಹಿ' ಎಂಬ ಪದ ಬಳಸಿ ಬೇಸರಗೊಳಿಸಿದಾಗ ಸೌಂದರ್ಯಾ ತೆರಳಿ ಸಮಾಧಾನಪಡಿಸಿದ್ದು, ಇಬ್ಬರೂ ಮತ್ತೆ ಅಪ್ಪುಗೆಯೊಂದಿಗೆ ಒಂದಾಗಿರುವುದು ಮನೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ರಾಜಿಯಾದ ಸೌಂದರ್ಯಾ-ಯಶಸ್; ಅದೇ ರಾಗ, ಅದೇ ಹಾಡು
ಬಿಗ್ ಬಾಸ್

Updated on: Oct 08, 2026 | 11:16 AM

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಲ್ಲಿ ಮತ್ತೆ ಒಂದಾದ ಯಶಸ್-ಸೌಂದರ್ಯಾ
  • ಹಳೆಯ ಮನಸ್ತಾಪಕ್ಕೆ ಬಿತ್ತು ಫುಲ್ ಸ್ಟಾಪ್
  • 'ಸ್ತ್ರೀ ವ್ಯಾಮೋಹಿ' ಪದ ಕೇಳಿ ಕಣ್ಣೀರು ಹಾಕಿದ ಯಶಸ್

‘ಬಿಗ್ ಬಾಸ್’ ಮನೆಯಲ್ಲಿ ಯಾವಾಗ ಯಾರು ಒಂದಾಗುತ್ತಾರೆ, ಯಾರು ದೂರವಾಗುತ್ತಾರೆ ಎಂದು ಊಹಿಸುವುದು ಕಷ್ಟ. ಈಗ ಇದೇ ರೀತಿಯ ಘಟನೆ ನಡೆದಿದೆ. ಯಶಸ್ ಹಾಗೂ ಸೌಂದರ್ಯಾ ಅವರ ಮಧ್ಯೆಯೂ ಹಾಗೆಯೇ ಆಗಿದೆ. ಇಬ್ಬರೂ ಕೆಲವು ದಿನ ದೂರ ಆಗಿದ್ದರು. ಆದರೆ, ಈಗ ಮತ್ತೆ ಇಬ್ಬರ ಮಧ್ಯೆ ರಾಜಿಯಾಗಿದೆ. ‘ಅದೇ ರಾಗ, ಅದೇ ಹಾಡು ಕೇಳಬೇಕಿದೆ’ ಎಂದು ಸೌಂದರ್ಯಾ ಹಾಗೂ ಯಶಸ್ ಹೇಳಿದ್ದಾರೆ.

ಈ ಬಾರಿ ಯಶಸ್ ಅವರು ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದಾರೆ. ಅವರು ಎಲ್ಲರಿಂದ ಟೀಕೆಗೆ ಒಳಗಾಗುತ್ತಾ ಇದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ನಡೆ. ಸದಾ ಮಹಿಳಾ ಸ್ಪರ್ಧಿಗಳ ಜೊತೆ ಇರೋದು, ಅವರ ಜೊತೆ ಫ್ಲರ್ಟ್ ಮಾಡೋದು ಮಾತ್ರ ತಮ್ಮ ಕೆಲಸ ಎಂಬಂತೆ ಯಶಸ್ ನಡೆದುಕೊಳ್ಳುತ್ತಿದ್ದಾರೆ. ಸೌಂದರ್ಯಾ ಹಾಗೂ ಆಸಿಯಾ ಇಬ್ಬರ ಜೊತೆಯೂ ಅವರು ಕ್ಲೋಸ್ ಆಗಿದ್ದರು. ಒಂದು ಹಂತದಲ್ಲಿ ಸೌಂದರ್ಯಾ ಅವರು ಯಶಸ್​​ನಿಂದ ದೂರ ಆದರು.

ಕಾರಣ ಏನು?

ಕಾವ್ಯಾ ಗೌಡ ಅವರು ಇದಕ್ಕೆ ತಮ್ಮ ಥಿಯರಿಯನ್ನು ಪಿಚ್ ಮಾಡಿದ್ದಾರೆ. ‘ಯಶಸ್ ಅವರು ಆಸಿಯಾಗೆ ರಾಖಿ ಕಟ್ಟುತ್ತೇನೆ ಎಂದು ಹೇಳಿಲ್ಲ. ಇದು ಅವರಿಗೆ ಬೇಸರ ಮೂಡಿಸಿದೆ. ಇದಕ್ಕೆ ಅವರು ಯಶಸ್​​ನಿಂದ ದೂರ ಆಗಿರಬಹುದು ಎಂದರು. ಈ ಥಿಯರಿಯನ್ನು ಕೆಲವರು ಒಪ್ಪಿದ್ದಾರೆ.

ಇದನ್ನೂ ಓದಿ: ಸ್ಪರ್ಧಿಗಳ ನಡೆಗೆ ತಾಳ್ಮೆ ಕಳೆದುಕೊಂಡು ಬಿಗ್ ಬಾಸ್; ಮಿತಿಮೀರಿದ ಸಿಟ್ಟು

ಮತ್ತೆ ಒಂದಾದರು

ಕಳೆದ ವಾರದ ವೀಕೆಂಡ್ ಎಪಿಸೋಡ್ ಬಳಿಕ ಯಶಸ್​ ಮುಖವನ್ನು ನೋಡಲು ಕಾವ್ಯಾ ಇಷ್ಟಪಡುತ್ತಾ ಇರಲಿಲ್ಲ. ಆ ಬಳಿಕ ಅವರು ಬದಲಾದರು. ಅಕ್ಟೋಬರ್ 7ರ ಎಪಿಸೋಡ್​ನಲ್ಲಿ ಮಂಜು ಅವರು ಯಶಸ್ ವಿರುದ್ಧ ‘ಸ್ತ್ರೀ ವ್ಯಾಮೋಹಿ’ ಎಂಬ ಪದ ಬಳಕೆ ಮಾಡಿದ್ದರು. ಇದರಿಂದ ಯಶಸ್​ಗೆ ಸಾಕಷ್ಟು ಬೇಸರ ಆಗಿತ್ತು. ಹೀಗಾಗಿ, ಅಳುತ್ತಾ ಕೂತಿದ್ದರು. ಆಗ ಸೌಂದರ್ಯಾ ಅವರು ತೆರಳಿ ಸಮಾಧಾನ ಮಾಡಿದ್ದಾರೆ. ಇಬ್ಬರೂ ಅಪ್ಪುಗೆ ಕೊಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us