AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪರ್ಧಿಗಳ ನಡೆಗೆ ತಾಳ್ಮೆ ಕಳೆದುಕೊಂಡು ಬಿಗ್ ಬಾಸ್; ಮಿತಿಮೀರಿದ ಸಿಟ್ಟು

ಬಿಗ್ ಬಾಸ್ ಕನ್ನಡ 13ನೇ ಆವೃತ್ತಿಯ ರಾಕ್ಷಸರು ಮತ್ತು ಗಂಧರ್ವರ ನಡುವಿನ ಟಾಸ್ಕ್‌ನಲ್ಲಿ ಸೌಂದರ್ಯಾ ಹಾಗೂ ಪ್ರಶಾಂತ್ ಮೈಕ್ ಧರಿಸಿಯೇ ಸ್ವಿಮ್ಮಿಂಗ್ ಪೂಲ್‌ಗೆ ಹಾರಿದ್ದಾರೆ. ಸ್ಪರ್ಧಿಗಳ ಈ ಬೇಜವಾಬ್ದಾರಿ ನಡೆ ಮತ್ತು ನಿಯಮ ಉಲ್ಲಂಘನೆಯಿಂದ ಬಿಗ್ ಬಾಸ್ ತೀವ್ರ ತಾಳ್ಮೆ ಕಳೆದುಕೊಂಡು, ಕಠೋರ ಧ್ವನಿಯಲ್ಲಿ ಅವರಿಗೆ ಅಂತಿಮ ಎಚ್ಚರಿಕೆ ನೀಡಿದ್ದು ಮನೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಸ್ಪರ್ಧಿಗಳ ನಡೆಗೆ ತಾಳ್ಮೆ ಕಳೆದುಕೊಂಡು ಬಿಗ್ ಬಾಸ್; ಮಿತಿಮೀರಿದ ಸಿಟ್ಟು
ಬಿಗ್ ಬಾಸ್
ರಾಜೇಶ್ ಹೆಗಡೆ ದುಗ್ಗುಮನೆ
|

Updated on:Oct 08, 2026 | 7:36 AM

Share

ಮುಖ್ಯಾಂಶಗಳು

  • ನಿಯಮಗಳನ್ನೆಲ್ಲ ಗಾಳಿಗೆ ತೂರಿದ ಸ್ಪರ್ಧಿಗಳು
  • ಸಿಡಿದೆದ್ದ ಬಿಗ್ ಬಾಸ್
  • ಪ್ರಶಾಂತ್ ಹಾಗೂ ಧನುಷ್ ನಡುವೆ ಶುರುವಾಯ್ತು ಬಿಗ್ ಫೈಟ್

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಸ್ಪರ್ಧಿಗಳ ಆಟವನ್ನು ನೋಡಿ ಬಿಗ್ ಬಾಸ್ ಹಾಗೂ ವೀಕ್ಷಕರು ಇಬ್ಬರಿಗೂ ಅಚ್ಚರಿ ಆಗುತ್ತಿದೆ. ಈ ಆಟವನ್ನು ನೋಡಿ ನಗಬೇಕೋ ಅಥವಾ ಅಳಬೇಕೋ ಎಂಬುದು ವೀಕ್ಷಕರಿಗೆ ಅರ್ಥವಾಗುತ್ತಿಲ್ಲ. ಆ ರೀತಿಯಲ್ಲಿ ಇವರ ಆಟ ಇದೆ. ಟಾಸ್ಕ್​ ವೇಳೆ ಸ್ಪರ್ಧಿಗಳು ನಡೆದುಕೊಳ್ಳುತ್ತಿರುವ ರೀತಿ ನೋಡಿ ಬಿಗ್ ಬಾಸ್ ತಾಳ್ಮೆ ಕಳೆದುಕೊಂಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.

‘ಬಿಗ್ ಬಾಸ್’ ಮನೆಗೆ ಬರೋ ಎಲ್ಲಾ ಸ್ಪರ್ಧಿಗಳು ಒಂದೇ ರೀತಿ ಇರೋದಿಲ್ಲ. ಕೆಲವರು ಬಿಗ್ ಬಾಸ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದರೆ, ಇನ್ನೂ ಕೆಲವು ಸ್ಪರ್ಧಿಗಳು ನಿಯಮ ಮೀರಿ ಆಡುತ್ತಾರೆ. ಆದರೆ, ಈ ಬಾರಿ ಬಂದ ಎಲ್ಲಾ ಸ್ಪರ್ಧಿಗಳಿಗೆ ಬಿಗ್ ಬಾಸ್ ಮೇಲೆ ಯಾವುದೇ ಗೌರವ ಇಲ್ಲ. ನಿಯಮಗಳನ್ನು ಲೆಕ್ಕಿಸದೆ ಇವರು ಆಟ ಆಡುತ್ತಿದ್ದಾರೆ. ಅಕ್ಟೋಬರ್ 7ರ ಎಪಿಸೋಡ್​​ನಲ್ಲೂ ಹೀಗೆಯೇ ಆಗಿದ್ದು, ಬಿಗ್ ಬಾಸ್ ತಾಳ್ಮೆ ಕಳೆದುಕೊಂಡಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್ ನೀಡಲಾಗಿತ್ತು. ಇದರ ಅನುಸಾರ ಒಂದಷ್ಟು ಮಂದಿ, ಗಂಧರ್ವರಾದರೆ, ಇನ್ನೂ ಕೆಲವರು ರಾಕ್ಷಸರಾಗಿದ್ದರು. ರಾಕ್ಷಸ ತಂಡದವರು ಅಟ್ಟಹಾಸ ಮೆರೆಯಬೇಕು. ಗಂಧರ್ವರು ಅವರು ಹೇಳಿದಂತೆ ಕೇಳಬೇಕು. ಆಗ ನೀಡಿದ ಟಾಸ್ಕ್​ ಅಲ್ಲಿ ಮೊದಲು ಸೌಂದರ್ಯಾ ಅವರು ಸ್ವಿಮಿಂಗ್​ಪೂಲ್​ಗೆ ಹಾರಿದರು. ಆಗ ಅವರು ಮೈಕ್ ಧರಿಸಿಯೇ ಇದ್ದರು.

ಇದನ್ನೂ ಓದಿ:  ಬಿಗ್ ಬಾಸ್ ಕನ್ನಡ 13: ರಾಕ್ಷಸನಾಗಿ ಬಾಯಿ ಬಂದಂತೆ ಮಾತನಾಡುತ್ತಿರುವ ಮಂಜ

ನೀರಿಗೆ ಹಾರಿದ ಬಳಿಕ ಅವರು ಮೈಕ್ ತೆಗೆದು ಇಟ್ಟರು. ಆ ಬಳಿಕ ಪ್ರಶಾಂತ್ ಅವರು ಕೂಡ ಮೈಕ್ ಧರಿಸಿಯೇ ನೀರಿಗೆ ಬಿದ್ದರು. ಇದರಿಂದ ಬಿಗ್ ಬಾಸ್ ತಾಳ್ಮೆ ಕಳೆದುಕೊಂಡರು. ‘ನಿಮ್ಮ ಮೈಕ್ ಬಗ್ಗೆ ಗಮನ ಇರಲಿ’ ಎಂದು ಕಠೋರ ಧ್ವನಿಯಲ್ಲಿ ಎಚ್ಚರಿಕೆ ನೀಡಿದರು. ಆ ಬಳಿಕ ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ ಹೊರಿಸಲು ಪ್ರಾರಂಭಿಸಿದರು. ಪ್ರಶಾಂತ್ ತಾವು ಬೀಳಲು ಧನುಷ್ ಕಾರಣ ಎಂದರೆ, ಧನುಷ್ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:36 am, Thu, 8 October 26

Follow Us
ರಾಜೇಶ್ ಹೆಗಡೆ ದುಗ್ಗುಮನೆ
ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ