ಮಾರ್ಚ್​​9ರಿಂದ ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ರಾಣಿ’

ಕಲರ್ಸ್‌ ಕನ್ನಡದಲ್ಲಿ ಮಾರ್ಚ್ 9ರಿಂದ ಸಂಜೆ 6 ಗಂಟೆಗೆ ಪ್ರಸಾರವಾಗಲಿರುವ ಹೊಸ ಧಾರಾವಾಹಿ 'ರಾಣಿ'. ಅಮ್ಮ-ಮಗಳ ನಿಷ್ಕಲ್ಮಶ ಪ್ರೀತಿ, ಜೈಲಿನಿಂದ ಹೊರಬಂದ ಮುಗ್ಧ ರಾಣಿಯ ಹೊರಜಗತ್ತಿನ ಸಮಸ್ಯೆಗಳ ಕಥೆ ಇದು. ಬಾಲ ನಟಿ ಧನ್ವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಮಾಜದ ದೃಷ್ಟಿಕೋನ ಮತ್ತು ಪ್ರೀತಿಯ ಶಕ್ತಿಯನ್ನು ಸಾರುವ ಈ ಭಿನ್ನ ಕಥೆಯ ಧಾರಾವಾಹಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಮಾರ್ಚ್​​9ರಿಂದ ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ರಾಣಿ’
ರಾಣಿ ಧಾರಾವಾಹಿ
Edited By:

Updated on: Mar 06, 2026 | 10:47 AM

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಾ ಇವೆ. ಎಲ್ಲ ಧಾರಾವಾಹಿಗಳು ಭಿನ್ನ ಕಥೆಗಳನ್ನು ಹೊಂದಿರುತ್ತವೆ. ಈಗ ಕಲರ್ಸ್‌ ಕನ್ನಡ ವಾಹಿನಿ ‘ರಾಣಿ’ ಹೆಸರಿನ ಧಾರಾವಾಹಿ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದೆ. ಅಮ್ಮ-ಮಗಳ ನಿಷ್ಕಲ್ಮಶ ಪ್ರೀತಿಯನ್ನು ಹೇಳಲಾಗುತ್ತಿದೆ. ಮಾರ್ಚ್ 9ರಿಂದ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಾಣಲಿದೆ.

ʻರಾಣಿʼ ಕಥೆ ಜೈಲಿನಿಂದ ಆರಂಭ ಆಗುತ್ತದೆ. ಅಮ್ಮ ಹಾಗೂ ಮಗಳ ಜೈಲಿನಲ್ಲಿರುತ್ತಾರೆ. ನಿಯಮದ ಪ್ರಕಾರ ಮಗಳು ಹೊರ ಹೋಗುತ್ತಾಳೆ. ಇಷ್ಟು ದಿನ ಹೊರಗಿನ ಜಗತ್ತನ್ನೇ ಕಾಣದ ಮುಗ್ಧ ಮಗು ರಾಣಿ ಹೊರಗೆ ಏನೆಲ್ಲ ಸಮಸ್ಯೆ ಎದುರಿಸುತ್ತಾಳೆ ಎಂಬುದನ್ನು ಧಾರಾವಾಹಿಯಲ್ಲಿ ಹೇಳಲಾಗುತ್ತಿದೆ. ಇನ್ನು ಮಗಳು ಇದ್ದೂ ಇಲ್ಲದಂತೆ ತಾಯಿ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಬರುತ್ತದೆ. , ಕಾನೂನು ಮತ್ತು ವಿಧಿ ಇಬ್ಬರನ್ನೂ ಬೇರ್ಪಡಿಸುತ್ತದೆ.

‘ರಾಣಿ’ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಕನ್ನಡದಲ್ಲಿ ಕೃಷ್ಣ ಸುಂದರಿ, ‘ಮುದ್ದು ಮಣಿಗಳು’ ಧಾರಾವಾಹಿಯಲ್ಲಿ ನಟಿಸಿರೋ ಅನುಭವ ಇರುವ ಐಶ್ವರ್ಯಾ ಅವರ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧನ್ವಿ ಅವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ತಾಂತ್ರಿಕವಾಗಿ ಮತ್ತು ಕಲಾತ್ಮಕವಾಗಿ ‘ರಾಣಿ’ ಬಹಳ ಶ್ರೀಮಂತವಾಗಿದೆ. ಸ್ವಪ್ನ ಕೃಷ್ಣ ಅವರು ಈ ಧಾರಾವಾಹಿಯನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ರಾಣಿಯಾಗಿ ಬಾಲ ನಟಿ ಧನ್ವಿ ತನ್ನ ಮುಗ್ಧ ಅಭಿನಯದ ಮೂಲಕ ಈಗಾಗಲೇ ಪ್ರೋಮೋಗಳ ಮೂಲಕ ಮನೆಮಾತಾಗಿದ್ದಾಳೆ. ನಾಯಕನಾಗಿ ಆರವ್ ಸೂರ್ಯ ಇದ್ದಾರೆ.

ಇದನ್ನೂ ಓದಿ: ‘ಯಜಮಾನ’ ಧಾರಾವಾಹಿಗೆ ಯಮುನಾ ಶ್ರೀನಿಧಿ ಎಂಟ್ರಿ

ಸಮಾಜವು ಜೈಲನ್ನು ಮತ್ತು ಅಲ್ಲಿನವರನ್ನು ನೋಡುವ ದೃಷ್ಟಿಕೋನಕ್ಕೂ, ರಾಣಿಯ ಮುಗ್ಧ ಕಣ್ಣುಗಳು ಕಾಣುವ ಪ್ರಪಂಚಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಜೈಲಿನ ಕಂಬಿಗಳಿಗಿಂತಲೂ ಪ್ರೀತಿಯೇ ಶಕ್ತಿಶಾಲಿ ಎಂಬುದನ್ನು ಈ ಧಾರಾವಾಹಿ ಸಾರುತ್ತದೆ. ಮಾರ್ಚ್ 9ರಿಂದ ಸಂಜೆ 6 ಗಂಟೆಗೆ ಪ್ರಾರಂಭವಾಗಲಿರುವ ಈ ಧಾರಾವಾಹಿ ಮೊದಲೇ ನಿರೀಕ್ಷೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us