‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್; ವಿಲನ್ ಪಾತ್ರದ ಗುಣದಲ್ಲಿ ಬದಲಾವಣೆ?

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಾಯಾ ಪಾತ್ರಕ್ಕೆ ದೊಡ್ಡ ತಿರುವು ಸಿಕ್ಕಿದೆ. ಅಂಬಿಕಾ ಸಾವಿಗೆ ಮಾಳವಿಕಾಳೇ ಕಾರಣವೆಂದು ಮಾಯಾಳಿಗೆ ಗೊತ್ತಾಗಿದೆ. ತಾನು ಕೇವಲ ಮಾಳವಿಕಾಳ ಅಸ್ತ್ರವಾಗಿದ್ದೆ ಎಂದು ಅರಿತ ಮಾಯಾ, ಈಗ ಅಂಬಿಕಾಳಿಗೇ ಸಹಾಯ ಮಾಡಬೇಕೋ ಅಥವಾ ಮಾಳವಿಕಾ ಪರ ನಿಲ್ಲಬೇಕೋ ಎಂಬ ಗೊಂದಲದಲ್ಲಿದ್ದಾಳೆ. ಮಾಯಾಳ ಪಾತ್ರದಲ್ಲಿ ದೊಡ್ಡ ಬದಲಾವಣೆ ಬರಲಿದ್ದು, ಆಕೆ ಮಾಳವಿಕಾಳ ಕುತಂತ್ರಕ್ಕೆ ಮತ್ತೊಮ್ಮೆ ಅಸ್ತ್ರವಾಗುವ ಸಾಧ್ಯತೆಯೂ ಇದೆ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್; ವಿಲನ್ ಪಾತ್ರದ ಗುಣದಲ್ಲಿ ಬದಲಾವಣೆ?
ನಾ ನಿನ್ನ ಬಿಡಲಾರೆ
Edited By:

Updated on: Mar 11, 2026 | 7:55 AM

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಸಾಕಷ್ಟು ತಿರವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈಗ ಧಾರಾವಾಹಿಗೆ ಹೊಸ ಟ್ವಿಸ್ಟ್ ಒಂದು ಸಿಗುತ್ತಿದೆ. ಹಾಗಾದರೆ ಏನು ಆ ಟ್ವಿಸ್ಟ್? ಆ ಬಗ್ಗೆ ನಾವು ಹೇಳುತ್ತಿದ್ದೇವೆ. ಈ ಧಾರಾವಾಹಿಯಲ್ಲಿ ವಿಲನ್ ಪಾತ್ರದ ಗುಣದಲ್ಲಿ ಬದಲಾವಣೆ ಬರುವ ಸೂಚನೆ ಸಿಕ್ಕಿದೆ. ಹಾಗಾದ್ರೆ ಧಾರಾವಾಹಿಗೆ ವಿಲನ್ ಇರೋದೆ ಇಲ್ವಾ? ಆ ಬಗ್ಗೆ ಇಲ್ಲಿದೆ ವಿವರ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ದೊಡ್ಡ ಬದಲಾವಣೆ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಮಾಳವಿಕಾ ಎಷ್ಟು ಕೆಟ್ಟವಳು ಎಂಬುದು ಮಾಯಾಗೆ ಗೊತ್ತಾಗಿ ಹೋಗಿದೆ. ಈ ಕಾರಣಕ್ಕೆ ಆಕೆಗೆ ತಲೆಬಿಸಿ ಶುರುವಾಗಿದೆ. ಅಂಬಿಕಾನ ಸಾವಿಗೆ ನಾನೇ ಕಾರಣ ಎಂದು ಆಕೆಗೆ ಅನಿಸಿತ್ತು. ಆದರೆ, ಇದರ ಹಿಂದೆ ಮಾಳವಿಕಾ ಕೈವಾಡ ಇದೆ ಎಂಬ ಅನುಮಾನ ಅವಳಿಗೆ ಬಂದಿದೆ.

ಈ ವಿಷಯವನ್ನು ಮಾಯಾ, ಅಂಬಿಕಾ ಆತ್ಮದ ಬಳಿ ಪ್ರಶ್ನೆ ಮಾಡಿದ್ದಾಳೆ. ‘ನಿನ್ನ ಕೊಲೆಯಲ್ಲಿ ಮಾಳವಿಕಾ ಕೈವಾಡ ಇದೆ ಅಲ್ಲವೆ? ನಾನು ಕೇವಲ ಅಸ್ತ್ರ ಮಾತ್ರ ಆಗಿದ್ದೆ ಅಲ್ಲವೇ’ ಎಂದು ಮಾಯಾ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಅಂಬಿಕಾ ಹೌದು ಎಂಬ ಉತ್ತರ ನೀಡಿದ್ದಾಳೆ. ಇದರಿಂದ ಅವಳಿಗೆ ಎಲ್ಲವೂ ಸ್ಪಷ್ಟವಾಗಿದೆ. ಮುಂದೇನು ಮಾಡಬೇಕು ಎಂಬ ಚಿಂತೆ ಬಹುವಾಗಿ ಕಾಡುತ್ತಿದೆ.

ಆಕೆಯ ಮುಂದೆ ಈಗ ಎರಡು ಆಯ್ಕೆ ಇದೆ. ಒಂದು ಆಕೆ ನೇರವಾಗಿ ಅಂಬಿಕಾಗೆ ಸಹಾಯ ಮಾಡಬೇಕು ಅಥವಾ ಮಾಳವಿಕಾ ಪರವಾಗಿ ನಿಂತು ತಾನೂ ಕಷ್ಟ ಅನುಭವಿಸಬೇಕು. ಹೀಗಾಗಿ, ಆಕೆಯ ಗುಣದಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಕೆಲವು ದಿನ ಧಾರಾವಾಹಿಯಿಂದ ದೂರ ಉಳಿಯಲಿದ್ದಾರೆ ‘ನಾ ನಿನ್ನ ಬಿಡಲಾರೆ’ ನಟಿ ನೀತಾ ಅಶೋಕ್

ಈಗ ಸದ್ಯ ಅವಳು ಅಂಬಿಕಾಳನ್ನು ದ್ವೇಷಿಸೋದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾಳೆ. ಆದರೆ, ದಿನ ಕಳೆದಂತೆ ಮಾಯಾ ಪಾತ್ರದಲ್ಲಿ ಬದಲಾವಣೆ ಕಾಣಬಹುದು. ಅವುಳು ಕೂಡ ಮಾಳವಿಕಾಳ ಅಸ್ತ್ರ ಆಗಬಹುದು ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us