‘ತಮಿಳು ಬಿಗ್​​ಬಾಸ್ ನಿರೂಪಣೆ ಮಾಡಿ’ ಸುದೀಪ್​​ಗೆ ತಮಿಳು ಪ್ರೇಕ್ಷಕರ ಬೇಡಿಕೆ

ಬಿಗ್​​ಬಾಸ್ ಸ್ಪರ್ಧಿಗಳಿಗೆ ತಮ್ಮ ಗಾಂಭೀರ್ಯತೆ, ಗತ್ತಿನಿಂದಲೇ ಸುದೀಪ್ ಬುದ್ಧಿಕಲಿಸುತ್ತಾರೆ. ಇದೇ ಕಾರಣಕ್ಕೆ ಸುದೀಪ್ ಅವರ ಬಿಗ್​​ಬಾಸ್ ನಿರೂಪಣೆಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಅಂದಹಾಗೆ ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆಗಳ ಬಿಗ್​​ಬಾಸ್​ ವೀಕ್ಷಕರಿಗೂ ಸಹ ಸುದೀಪ್ ನಿರೂಪಣೆ ಅಚ್ಚುಮೆಚ್ಚು. ಇದೀಗ ತಮಿಳು ಬಿಗ್​​ಬಾಸ್ ಅನ್ನು ನಿರೂಪಣೆ ಮಾಡುವಂತೆ ಸುದೀಪ್ ಅವರಿಗೆ ಮನವಿ ಮಾಡಿದ್ದಾರೆ ಕೆಲ ತಮಿಳು ಬಿಗ್​​ಬಾಸ್ ವೀಕ್ಷಕರು.

‘ತಮಿಳು ಬಿಗ್​​ಬಾಸ್ ನಿರೂಪಣೆ ಮಾಡಿ’ ಸುದೀಪ್​​ಗೆ ತಮಿಳು ಪ್ರೇಕ್ಷಕರ ಬೇಡಿಕೆ
Bigg Boss Sudeep

Updated on: Oct 27, 2026 | 6:34 PM

ಮುಖ್ಯಾಂಶಗಳು

  • ಸುದೀಪ್ ಅವರಿಗೆ ತಮಿಳು ಬಿಗ್​​ಬಾಸ್​ಗೆ ಬುಲಾವ್
  • ತಮಿಳು ಬಿಗ್​​ಬಾಸ್​ನಲ್ಲಿ ಜೇಸನ್ ಉದ್ಧಟತನ
  • ತಮಿಳು ಬಿಗ್​​ಬಾಸ್ ನಿರೂಪಣೆ ಮಾಡಿ ಎಂದು ಕಿಚ್ಚಗೆ ಮನವಿ

ಕನ್ನಡ ಬಿಗ್​​ಬಾಸ್ ಚಾಲ್ತಿಯಲ್ಲಿದೆ. ಈ ಬಾರಿ ವಿಶೇಷವೆಂದರೆ ಎಲ್ಲ ಪ್ರಮುಖ ಭಾಷೆಗಳ ಬಿಗ್​​ಬಾಸ್ ಶೋಗಳನ್ನು ಏಕಕಾಲಕ್ಕೆ ಪ್ರಾರಂಭ ಮಾಡಲಾಗಿದ್ದು, ತಮಿಳು, ತೆಲುಗು, ಹಿಂದಿ, ಮಲಯಾಳಂ ಬಿಗ್​​ಬಾಸ್ ಸಹ ಇದೇ ಸಮಯದಲ್ಲಿ ನಡೆಯುತ್ತಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ಕನ್ನಡ ಬಿಗ್​​ಬಾಸ್ ಅನ್ನು ಸುದೀಪ್ ಅವರು ನಿರೂಪಣೆ ಮಾಡುತ್ತಿದ್ದಾರೆ. ಕೆಲ ವಾರಗಳ ಹಿಂದಷ್ಟೆ ಮನೆಯಲ್ಲಿ ಮಾನವೀಯತೆಯ ಗಡಿ ಮೀರಿದ ಕೆಲ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಉದ್ಧಟತನ ತೋರಿದ್ದ ಮಂಜನನ್ನು ಹೊರಗೆ ಸಹ ಕಳಿಸಲಾಗಿತ್ತು. ಸ್ಪರ್ಧಿಗಳಿಗೆ ತಮ್ಮ ಗಾಂಭೀರ್ಯತೆ, ಗತ್ತಿನಿಂದಲೇ ಸುದೀಪ್ ಬುದ್ಧಿಕಲಿಸುತ್ತಾರೆ. ಇದೇ ಕಾರಣಕ್ಕೆ ಸುದೀಪ್ ಅವರ ಬಿಗ್​​ಬಾಸ್ ನಿರೂಪಣೆಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಅಂದಹಾಗೆ ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆಗಳ ಬಿಗ್​​ಬಾಸ್​ ವೀಕ್ಷಕರಿಗೂ ಸಹ ಸುದೀಪ್ ನಿರೂಪಣೆ ಅಚ್ಚುಮೆಚ್ಚು. ಇದೀಗ ತಮಿಳು ಬಿಗ್​​ಬಾಸ್ ಅನ್ನು ನಿರೂಪಣೆ ಮಾಡುವಂತೆ ಸುದೀಪ್ ಅವರಿಗೆ ಮನವಿ ಮಾಡಿದ್ದಾರೆ ಕೆಲ ತಮಿಳು ಬಿಗ್​​ಬಾಸ್ ವೀಕ್ಷಕರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ವಿಡಿಯೋನಲ್ಲಿ ತೆಲುಗಿನಲ್ಲಿ ಮಾತನಾಡುತ್ತಿರುವ ಯುವಕನೋರ್ವ, ಸುದೀಪ್ ಅವರಲ್ಲಿ ಮನವಿ ಮಾಡುತ್ತಿದ್ದು, ‘ದಯವಿಟ್ಟು ಬಂದು ತಮಿಳು ಬಿಗ್​​ಬಾಸ್ ನಿರೂಪಣೆ ಮಾಡಿ’ ಎಂದು ಸುದೀಪ್ ಅವರ ಬಳಿ ಮನವಿ ಮಾಡಿದ್ದಾನೆ. ಅದಕ್ಕೆ ಕಾರಣವೂ ಇದೆ. ತಮಿಳು ಬಿಗ್​​ಬಾಸ್ ಅನ್ನು ವಿಜಯ್ ಸೇತುಪತಿ ನಿರೂಪಣೆ ಮಾಡುತ್ತಾರೆ. ಆದರೆ ಕಳೆದ ವಾರ ರಮ್ಯಕೃಷ್ಣ ಅವರು ನಿರೂಪಣೆ ಮಾಡಿದ್ದರು. ಈ ವೇಳೆ ಸ್ಪರ್ಧಿ ಜೇಸನ್ ಎಂಬಾತ ರಮ್ಯಾಕೃಷ್ಣ ಅವರ ಎದುರು ಉದ್ಧಟತನ ಪ್ರದರ್ಶಿಸಿದ್ದ. ಅವನಿಗೆ ಬುದ್ಧಿಕಲಿಸಲಾದರೂ ಸುದೀಪ್ ಅವರು ಬಂದು ತಮಿಳು ಬಿಗ್​​ಬಾಸ್ ನಿರೂಪಣೆ ಮಾಡಬೇಕು ಎಂದು ಯುವಕ ಮನವಿ ಮಾಡಿದ್ದು, ವಿಡಿಯೋದ ಕಮೆಂಟ್​​ನಲ್ಲಿ ಹಲವರು ಇದನ್ನೇ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬಡ ಕುಟುಂಬಗಳಿಗೆ ದಿನಸಿ ದಾನ ಮಾಡಿದ ಬಿಗ್​ಬಾಸ್ ಜಾನ್ಹವಿ: ವಿಡಿಯೋ

ಜೇಸನ್ ಎಂಬ ಸ್ಪರ್ಧಿ ವೀಕೆಂಡ್ ಎಪಿಸೋಡ್ ನಿರೂಪಣೆ ಮಾಡಿದ್ದ ರಮ್ಯಾ ಕೃಷ್ಣ ಅವರೊಟ್ಟಿಗೆ ಉದ್ಧಟತನದಿಂದ ವರ್ತನೆ ಮಾಡಿದ್ದ. ‘ನಾನು ಯಾರಿಗೂ ಮರ್ಯಾದೆ ಕೊಡುವುದಿಲ್ಲ. ಬಿಗ್​​ಬಾಸ್, ರಮ್ಯಾ ಕೃಷ್ಣ, ಜನರಿಗೂ ಮರ್ಯಾದೆ ಕೊಡುವುದಿಲ್ಲ’ ಎಂದಿದ್ದ. ರಮ್ಯಾ ಕೃಷ್ಣ ಎದುರು ಸಹ ಬಹಳ ಉದ್ಧಟತನದಿಂದ ಮಾತನಾಡಿದ್ದ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ರಮ್ಯಾಕೃಷ್ಣ ಅವರ ನಿರೂಪಣೆ ಬಗ್ಗೆಯೂ ಪ್ರಶ್ನೆಗಳನ್ನು ಎಬ್ಬಿಸಿತ್ತು. ಆದರೆ ಅದರ ಮರು ಎಪಿಸೋಡಿನಲ್ಲಿ ಜೇಸನ್, ರಮ್ಯಾಕೃಷ್ಣ ಬಳಿ ಕ್ಷಮೆ ಕೇಳಿದ. ಜೊತೆಗೆ ಸಹ ಸ್ಪರ್ಧಿ ಮುನಿಯಮ್ಮ ಬಳಿಯೂ ಕ್ಷಮೆ ಕೇಳಿದ.

ಆದರೆ ಜೇಸನ್ ತೋರಿದ ವರ್ತನೆಯಿಂದ ಬೇಸರಗೊಂಡಿರುವ ಕೆಲವು ತಮಿಳು ಬಿಗ್​​ಬಾಸ್ ವೀಕ್ಷಕರು ಸುದೀಪ್ ಅವರು ತಮಿಳು ಬಿಗ್​​ಬಾಸ್ ನಿರೂಪಕರಾಗಬೇಕು ಎಂದಿದ್ದಾರೆ. ಏಕೆಂದರೆ ಸುದೀಪ್, ಎಲ್ಲರನ್ನೂ ಕಂಟ್ರೋಲ್​​ಗೆ ತೆಗೆದುಕೊಂಡು ಮಾತನಾಡುತ್ತಾರೆ. ಅವರು ನಿರೂಪಣೆ ಮಾಡುವ ವಿಧಾನ ಬಹಳ ಭಿನ್ನವಾಗಿರುತ್ತದೆ. ಸುದೀಪ್ ಎದುರು ಯಾವುದೇ ಸ್ಪರ್ಧಿ ಬಾಲ ಬಿಚ್ಚುವುದಿಲ್ಲ. ಹಾಗಾಗಿ ಸುದೀಪ್ ಅವರನ್ನು ತಮಿಳು ವೀಕ್ಷಕರು ಕರೆದಿರುವುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us