ಬಿಗ್ ಬಾಸ್ ಮನೆಯಲ್ಲೇ ಸೌಂದರ್ಯಾಗೆ ಪ್ರಪೋಸ್ ಮಾಡಿದ ಯಶಸ್; ಫಿದಾ ಆದ ಶೆಟ್ಟಿ ಡಾನ್

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್ ಟಾಸ್ಕ್ ವೇಳೆ ಯಶಸ್ ಗಾರ್ಡನ್ ಏರಿಯಾದಲ್ಲಿ ಟಾಯ್ಲೆಟ್ ಪೇಪರ್ ಬಳಸಿ ಲವ್ ಯೂ ಎಂದು ಪ್ರಪೋಸ್ ಮಾಡಿದ್ದು ಸೌಂದರ್ಯಾ ಶೆಟ್ಟಿ ಮನಗೆದ್ದಿದೆ. ಮತ್ತೊಂದೆಡೆ ಗಗನ್ ಚಪಾತಿಯಲ್ಲಿ ಐ ಲವ್ ಯು ಎಂದು ಬರೆದು ವಿಶೇಷವಾಗಿ ಮನಸೋಲಿಸುವ ಪ್ರಯತ್ನ ನಡೆಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲೇ ಸೌಂದರ್ಯಾಗೆ ಪ್ರಪೋಸ್ ಮಾಡಿದ ಯಶಸ್; ಫಿದಾ ಆದ ಶೆಟ್ಟಿ ಡಾನ್
ಬಿಗ್ ಬಾಸ್

Updated on: Oct 28, 2026 | 7:06 AM

ಮುಖ್ಯಾಂಶಗಳು

  • ಗಾರ್ಡನ್ ಏರಿಯಾದಲ್ಲಿ ಟಾಯ್ಲೆಟ್ ಪೇಪರ್ ಸಾಹಸ
  • ಯಶಸ್ ಪ್ರಪೋಸಲ್ ಕಂಡು ಫಿದಾ ಆದ ಶೆಟ್ಟಿ ಡಾನ್
  • ಚಪಾತಿಯಲ್ಲಿ ಪ್ರೀತಿಯ ಸಂದೇಶ ಸಾರಿದ ಗಗನ್

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ದಿನಕ್ಕೊಂದು ರೋಚಕ ತಿರುವುಗಳು ಸಿಗುತ್ತಿದ್ದು, ಈ ವಾರ ಮನೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ನಟಿ ಸೌಂದರ್ಯಾ ಶೆಟ್ಟಿ ಅವರ ಮದುವೆ ಸಂಭ್ರಮ ಕಳೆಗಟ್ಟಿದೆ. ಪ್ರತಿ ವಾರ ಕೊಡುವ ಟಾಸ್ಕ್​​ಗಿಂತ ಈ ವಾರದ ಟಾಸ್ಕ್ ಭಿನ್ನವಾಗಿತ್ತು.

ಕ್ಯಾಪ್ಟನ್ಸಿ ರೇಸ್‌ಗಾಗಿ ಬಿಗ್ ಬಾಸ್ ನೀಡಿದ ವಿಶೇಷ ಟಾಸ್ಕ್ ಒಂದರಲ್ಲಿ ಯಶಸ್ ಹಾಗೂ ಗಗನ್ ಪರಸ್ಪರ ಎದುರಾಳಿ ಆಗಿದ್ದಾರೆ. ಈ ಟಾಸ್ಕ್ ಪ್ರಕಾರ, ಯಶಸ್ ಮತ್ತು ಗಗನ್ ತಮ್ಮದೇ ಆದ ಎರಡು ವಿಭಿನ್ನ ತಂಡಗಳನ್ನು ಮುನ್ನಡೆಸಿ, ಸೌಂದರ್ಯಾ ಅವರ ಮನ ಒಲಿಸಬೇಕು. ಸೌಂದರ್ಯಾಗೆ ವಿಭಿನ್ನ ಹಾಗೂ ಕ್ರಿಯೇಟಿವ್ ಶೈಲಿಯಲ್ಲಿ ನಡೆದುಕೊಳ್ಳುವ ತಂಡಕ್ಕೆ ಕ್ಯಾಪ್ಟನ್ಸಿ ರೇಸ್ ಪಡೆಯುವ ಅವಕಾಶ ದೊರೆಯಲಿದೆ.

ವಿಭಿನ್ನ ಪ್ರಪೋಸಲ್ ತಂದ ಟ್ವಿಸ್ಟ್

ಟಾಸ್ಕ್ ಆರಂಭವಾಗುತ್ತಿದ್ದಂತೆ ಯಶಸ್ ತಮ್ಮ ವಿಭಿನ್ನ ಆಲೋಚನೆಯಿಂದ ಗಮನಸೆಳೆದರು. ಗಾರ್ಡನ್ ಏರಿಯಾದಲ್ಲಿ ಟಾಯ್ಲೆಟ್ ಪೇಪರ್ ಬಳಸಿ ‘ಐ ಲವ್ ಯೂ’ ಎಂದು ಬರೆದು ಸೌಂದರ್ಯಾಗೆ ಪ್ರಪೋಸ್ ಮಾಡಿದರು. ಯಶಸ್ ಅವರ ಈ ಕ್ರಿಯೇಟಿವ್ ಐಡಿಯಾಗೆ ‘ಶೆಟ್ಟಿ ಡಾನ್’ ಸೌಂದರ್ಯಾ ಸಂಪೂರ್ಣವಾಗಿ ಫಿದಾ ಆದರು.

ಇನ್ನೊಂದೆಡೆ, ಗಗನ್ ಕೂಡ ಕಡಿಮೆ ಇಲ್ಲ ಎಂಬಂತೆ ಅಡುಗೆ ಮನೆಯಲ್ಲಿ ಚಪಾತಿಯಿಂದ ‘ಐ ಲವ್ ಯೂ’ ಎಂದು ವಿನ್ಯಾಸಗೊಳಿಸಿ ತಂದು ಸೌಂದರ್ಯಾಗೆ ನೀಡಿ ಮನ ಒಲಿಸುವ ಯತ್ನ ಮಾಡಿದರು. ಗಗನ್ ಅವರ ಈ ಮುದ್ದಾದ ಪ್ರಪೋಸಲ್ ಕೂಡ ಸೌಂದರ್ಯಾಗೆ ಬಹಳವಾಗಿ ಇಷ್ಟವಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಗಗನ್, ಧನುಷ್ ಸೇರಿ 7 ಸ್ಪರ್ಧಿಗಳು ಈ ವಾರ ನಾಮಿನೇಟ್

ಪ್ರಪೋಸಲ್ ಸುತ್ತ ಸಾಗುತ್ತಿರುವ ಈ ಸ್ವಾರಸ್ಯಕರ ಟಾಸ್ಕ್‌ನಲ್ಲಿ ಅಂತಿಮವಾಗಿ ಸೌಂದರ್ಯಾ ಯಾರ ಮನವೊಲಿಕೆಗೆ ಮನಸೋತು ಕ್ಯಾಪ್ಟನ್ಸಿ ರೇಸ್‌ಗೆ ಆಯ್ಕೆ ಮಾಡಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ಈ ವಾರದ ಟಾಸ್ಕ್​ ಸಾಕಷ್ಟು ಮನರಂಜನೆ ನೀಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us