‘ರುದ್ರಾಭಿಷೇಕಂ’ ಟ್ರೈಲರ್ ರಿಲೀಸ್, ರಗಡ್ ಲುಕ್​​ನಲ್ಲಿ ವಿಜಯ್ ರಾಘವೇಂದ್ರ

ವಿಜಯ್ ರಾಘವೇಂದ್ರ ಅವರು ‘ರುದ್ರಾಭಿಷೇಕಂ’ ಹೆಸರಿನ ಹೊಸ ಸಿನಿಮಾನಲ್ಲಿ ನಟನೆ ಮಾಡಿದ್ದು, ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ (ಸೆಪ್ಟೆಂಬರ್ 16) ಬೆಂಗಳೂರಿನ ಜಿಟಿ ಮಾಲ್​​ನಲ್ಲಿ ರಿಲೀಸ್ ಆಗಿದೆ. ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟನೆ ಮಾಡಿರುವ ಈ ಸಿನಿಮಾ ಹಾರರ್, ಥ್ರಿಲ್ಲರ್ ಮತ್ತು ಆಕ್ಷನ್ ಜಾನರ್​​ನ ಸಿನಿಮಾ ಆಗಿರಲಿದೆ. ಸಿನಿಮಾ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ.

‘ರುದ್ರಾಭಿಷೇಕಂ’ ಟ್ರೈಲರ್ ರಿಲೀಸ್, ರಗಡ್ ಲುಕ್​​ನಲ್ಲಿ ವಿಜಯ್ ರಾಘವೇಂದ್ರ
Rudrabhishekam

Updated on: Sep 17, 2026 | 3:24 PM

ಮುಖ್ಯಾಂಶಗಳು

  • ವಿಜಯ್ ರಾಘವೇಂದ್ರ ನಟನೆಯ ‘ರುದ್ರಾಭಿಷೇಕಂ’ ಸಿನಿಮಾ
  • ‘ರುದ್ರಾಭಿಷೇಕಂ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.
  • ಸೆಪ್ಟೆಂಬರ್ 25ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

ವಿಜಯ್ ರಾಘವೇಂದ್ರ ನಟಿಸಿರುವ ‘ರುದ್ರಾಭಿಷೇಕಂ’ ಸಿನಿಮಾ ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ಈ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ (ಸೆಪ್ಟೆಂಬರ್ 16) ಬೆಂಗಳೂರಿನ ಜಿಟಿ ಮಾಲ್​​ನಲ್ಲಿ ರಿಲೀಸ್ ಆಗಿದೆ. ಒಂಬತ್ತು ಮಂದು ನಿರ್ಮಾಪಕರನ್ನು ಒಳಗೊಂಡ ಈ ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.

ನಿನ್ನೆ ಬಿಡುಗಡೆ ಆದ ಟ್ರೈಲರ್​​ನಲ್ಲಿ ವಿಜಯ್ ರಾಘವೇಂದ್ರ ಅವರ ಹಲವು ಲುಕ್ಕುಗಳನ್ನು ತೋರಿಸಲಾಗಿದೆ. ‘ರುದ್ರಾಭಿಷೇಕಂ’ ಸಿನಿಮಾವು ಹಾರರ್, ಥ್ರಿಲ್ಲರ್, ಆಕ್ಷನ್ ಜೊತೆಗೆ ಧಾರ್ಮಿಕ ಎಲಿಮೆಂಟುಗಳನ್ನು ಸಹ ಕತೆಯಲ್ಲಿ ಒಳಗೊಂಡಿದ್ದು, ಎಲ್ಲ ಅಂಶಗಳ ಝಲಕ್​​ ಅನ್ನು ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಲಾಗಿದೆ. ವಿಶೇಷವಾಗಿ ವಿಜಯ್ ರಾಘವೇಂದ್ರ ಅವರು ನಾಲ್ಕು ವಿಭಿನ್ನ ಲುಕ್​​​ನಲ್ಲಿ ಟ್ರೈಲರ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ವೀರಗಾಸೆ ವೇಷದಲ್ಲಿ, ಗಿರಿಜಾ ಮೀಸೆ ಬಿಟ್ಟು ಮಾಸ್ ಅವತಾರದಲ್ಲಿ, ಶಿವನ ಭಕ್ತನ ಪಾತ್ರದಲ್ಲಿ ಹಾಗೂ ರುದ್ರನ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟ್ರೈಲರ್​​ ಸೂಚಿಸುತ್ತಿರುಂತೆ ‘ರುದ್ರಾಭಿಷೇಕಂ’ ಗ್ರಾಮೀಣ ಭಾಗದ ಕತೆಯಾಗಿದ್ದು, ಸಿನಿಮಾನಲ್ಲಿ ಆಕ್ಷನ್ ಜೊತೆಗೆ ಹಾರರ್ ಅಂಶಗಳು ಸಹ ಇವೆ. ಜೊತೆಗೆ ಸಿನಿಮಾನಲ್ಲಿ ವೀರಭದ್ರ ಸ್ವಾಮಿಯ ಮಹಿಮೆಯನ್ನು ಸಹ ತೋರಿಸಲಾಗಿದೆ. ಸಿನಿಮಾದ ಟ್ರೈಲರ್​​ನಲ್ಲಿ ಸಂಗೀತ ನಿರ್ದೇಶಕ ವಿ ಮನೋಹರ್, ರಾಜು ಬಾಲವಾಡಿ ಸೇರಿದಂತೆ ಇನ್ನೂ ಕೆಲವು ಪ್ರಮುಖ ನಟ-ನಟಿಯರು ಸಹ ಕಾಣಿಸಿಕೊಂಡಿದ್ದಾರೆ.

‘ರುದ್ರಾಭಿಷೇಕಂ’ ಸಿನಿಮಾ ಟ್ರೈಲರ್

#Rudrabhishekam Official trailer | Vijay Raghavendra,Priyanka Thimmesh | Vasanth KumarK | VManohar|

‘ರುದ್ರಾಭಿಷೇಕಂ’ ಸಿನಿಮಾವನ್ನು ಒಂಬತ್ತು ಮಂದಿ ರೈತರು ಒಟ್ಟಿಗೆ ಸೇರಿ ನಿರ್ಮಾಣ ಮಾಡಿದ್ದು, ವಸಂತ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ವಿಜಯ್ ರಾಘವೇಂದ್ರ, ಪ್ರಿಯಾಂಕಾ ತಿಮ್ಮೇಶ್ ಜೊತೆಗೆ ರಾಜು ಬಾಲವಾಡಿ, ಶಂಕರ್ ನಾರಾಯಣ್ ಮಮತಾ ತುರುವೇಕೆರೆ ನವನೀತ ಶೆಟ್ಟಿ ಮನು ಬುಲೆಟ್ ವಿನು ವಿನಯ್ ರಾಜ್ ಸನತ್ ಕುಮಾರ್ ವಸಂತ್ ಕುಮಾರ್, ಶಿವಕುಮಾರ್ ಇನ್ನೂ ಕೆಲವರು ನಟನೆ ಮಾಡಿದ್ದಾರೆ. ಸಿನಿಮಾ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us