‘ರುದ್ರಾಭಿಷೇಕಂ’ ವಿಜಯ್ ರಾಘವೇಂದ್ರ ಹೊಸ ಸಿನಿಮಾ ರಿಲೀಸ್ಗೆ ಮುಹೂರ್ತ ನಿಗದಿ
Rudrabhishekam movie release: ವಿಜಯ್ ರಾಘವೇಂದ್ರ ನಟಿಸಿರುವ ಇತ್ತೀಚೆಗಿನ ಕೆಲ ಥಿರಲ್ಲರ್ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇದೀಗ ವಿಜಯ್ ರಾಘವೇಂದ್ರ ಅವರು ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ‘ರುದ್ರಾಭಿಷೇಕಂ’ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ವಿಜಯ್ ಅವರು ದ್ವಿಪಾತ್ರದಲ್ಲಿ ನಟಿಸಿರುವ ಈ ವಿಶೇಷ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಮಾಹಿತಿ ಇಲ್ಲಿದೆ...

ಮುಖ್ಯಾಂಶಗಳು
- ವಿಜಯ್ ರಾಘವೇಂದ್ರ ಹೊಸ ಸಿನಿಮಾ ರಿಲೀಸ್ಗೆ ರೆಡಿ
- ‘ರುದ್ರಾಭಿಷೇಕಂ’ ಹೆಸರಿನ ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ನಟನೆ
- ರುದ್ರಾಭಿಷೇಕಂ ರಿಲೀಸ್ ಡೇಟ್ ಫಿಕ್ಸ್
ವಿಜಯ್ ರಾಘವೇಂದ್ರ (Vijay Raghavendra), ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಯ ನಟ. ಯಾವುದೇ ರೀತಿಯ ಪಾತ್ರಗಳಿಗಾದರೂ ಸುಲಭವಾಗಿ ಒಗ್ಗಿಕೊಳ್ಳುವ ನಟ. ಟಿವಿ ರಿಯಾಲಿಟಿ ಶೋ, ಸಿನಿಮಾ, ಹಾಡುಗಾರಿಕೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಅವರ ಇತ್ತೀಚೆಗಿನ ಸಿನಿಮಾ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಇದೀಗ ವಿಜಯ್ ಅವರ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅದುವೇ ‘ರುದ್ರಾಭಿಷೇಕಂ’.
ವಿಜಯ್ ರಾಘವೇಂದ್ರ, ಹಳ್ಳಿ ವ್ಯಕ್ತಿಯ ಪಾತ್ರ ಮಾಡಿದ ಹಲವು ಸಿನಿಮಾಗಳು ಹಿಟ್ ಎನಿಸಿಕೊಂಡಿವೆ, ಜೊತೆಗೆ ಪ್ರೇಕ್ಷಕರಿಗೆ ಹತ್ತಿರವಾಗಿವೆ. ಇದೀಗ ಅಂಥಹುದೇ ಹಳ್ಳಿಯ, ಥ್ರಿಲ್ಲರ್ ಹಾಗೂ ದೈವಿಕ ಅಂಶಗಳ ಕತೆಯುಳ್ಳ ‘ರುದ್ರಾಭಿಷೇಕಂ’ ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದಾರೆ. ಹಲವು ನಿರ್ಮಾಪಕರುಗಳು ಒಟ್ಟಿಗೆ ಸೇರಿ ನಿರ್ಮಿಸಿರುವ ಈ ವಿಭಿನ್ನ ಪ್ರಯತ್ನದ ಸಿನಿಮಾ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ.
‘ರುದ್ರಾಭಿಷೇಕಂ’ ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ದ್ವಿಪಾತ್ರದಲ್ಲಿ ನಟಿಸಿದ್ದು, ಹಲವು ಭಿನ್ನ-ಭಿನ್ನ ಗೆಟಪ್ಗಳಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ವೀರಗಾಸೆ ವೇಷ ಸೇರಿದಂತೆ ಇನ್ನೂ ಹಲವು ಜನಪದ ಗೆಟಪ್ಗಳಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಗಿರಿಜಾ ಮೀಸೆ ಬಿಟ್ಟು ಸಖತ್ ರಗಡ್ ಆಗಿ ವಿಜಯ್ ಫೈಟ್ ದೃಶ್ಯಗಳಲ್ಲಿ ನಟಿಸಿರುವುದು ವಿಶೇಷ.
ಇದನ್ನೂ ಓದಿ:ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ
ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ. ಬಲ ರಾಜವಾಡಿ, ಮನು, ಸನತ್, ಬುಲೆಟ್ ವಿನು, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ ಇನ್ನಿತರರು ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ಗ್ರಾಮಗಳ ಜೊತೆಗೆ ಮಂಗಳೂರು, ಕರಾವಳಿಯ ಇನ್ನೂ ಕೆಲವು ಸುಂದರ ಪ್ರದೇಶಗಳಲ್ಲಿ ಮಾಡಲಾಗಿದೆ. ಸಿನಿಮಾಕ್ಕೆ ವಿ ಮನೋಹರ್ ಸಂಗೀತ ನೀಡಿದ್ದು, ಹಾಡುಗಳು ಯೂಟ್ಯೂಬ್ನಲ್ಲಿ ವೈರಲ್ ಆಗುತ್ತಿವೆ.
ಸಿನಿಮಾ ಅನ್ನು ವಸಂತ್ ಕುಮಾರ್ ನಿರ್ದೇಶನ ಮಾಡಿದ್ದು, ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಲಾಯರ್ ಜಯರಾಂ, ಮಂಜುನಾಥ ಕೆ.ಎನ್, ಕೆ ವೆಂಕಟೇಶ್, ಚಿದಾನಂದ ಮೂರ್ತಿ, ಸುರೇಶ್ ಬಾಬು, ಅಶ್ವಥ್ ನಾರಾಯಣ, ಶಿವಕುಮಾರ್, ರವಿಕುಮಾರ್, ಚಂದ್ರಶೇಖರ ಹಡಪದ ಅವರುಗಳು ಒಟ್ಟಿಗೆ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಬಿಜೆ ಕಿಶೋರ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 25ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




