ಏನಿದು ದಾದಾ ಸಾಹೇಬ್​​ ಫಾಲ್ಕೆ ಪ್ರಶಸ್ತಿ? ಇದು ಭಾರತೀಯ ಚಿತ್ರರಂಗದಲ್ಲಿ ನೀಡಲಾಗುವ ಅತ್ಯಂತ ಶ್ರೇಷ್ಠ ಅವಾರ್ಡ್​​ ಯಾಕೆ? ಇಲ್ಲಿದೆ ಮಾಹಿತಿ

ಭಾರತದ ಸಿನಿಮಾ ಕ್ಷೇತ್ರದಲ್ಲಿನ ಅತ್ಯುತ್ತಮ ಗೌರವವಕ್ಕೆ ಕನ್ನಡಿಗ, ನಟ ಅನಂತ್​​ ನಾಗ್​​ ಭಾಜನರಾಗಿದ್ದಾರೆ. ಅಷ್ಟಕ್ಕೂ ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಸ್ಮರಣಾರ್ಥ ನೀಡಲಾಗುವ ಅತ್ಯುನ್ನತ ಚಲನಚಿತ್ರ ಗೌರವ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯ ಇತಿಹಾಸ, ಮಹತ್ವ ಏನು? ಎಂಬ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಏನಿದು ದಾದಾ ಸಾಹೇಬ್​​ ಫಾಲ್ಕೆ ಪ್ರಶಸ್ತಿ? ಇದು ಭಾರತೀಯ ಚಿತ್ರರಂಗದಲ್ಲಿ ನೀಡಲಾಗುವ ಅತ್ಯಂತ ಶ್ರೇಷ್ಠ ಅವಾರ್ಡ್​​ ಯಾಕೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: makemyexam.in

Updated on: Sep 16, 2026 | 7:54 PM

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಭಾರತದ ಸಿನಿಮಾ ಕ್ಷೇತ್ರದಲ್ಲಿನ ಅತ್ಯುತ್ತಮ ಗೌರವವಾಗಿದ್ದು,  ಸಿನಿಮಾದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ. ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಖ್ಯಾತರಾದ ಧುಂಡಿರಾಜ್ ಗೋವಿಂದ್ ಫಾಲ್ಕೆ (ದಾದಾಸಾಹೇಬ್ ಫಾಲ್ಕೆ) ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಭಾರತ ಸರ್ಕಾರವು 1969ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.

ಸ್ವರ್ಣ ಕಮಲ ಪದಕ, 10 ಲಕ್ಷ ರೂ. ನಗದು ಬಹುಮಾನ

ಈ ಪ್ರಶಸ್ತಿಯು ಒಂದು ಸ್ವರ್ಣ ಕಮಲ ಪದಕ, ಒಂದು ಶಾಲು ಮತ್ತು 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ. ಪ್ರತಿವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಈ ಪ್ರಶಸ್ತಿಯನ್ನು ನೀಡುತ್ತಾರೆ. 1969ರಲ್ಲಿ ನಡೆದ 17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಖ್ಯಾತ ನಟಿ ದೇವಿಕಾ ರಾಣಿ ಅವರು ಈ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿಗೆ ಸ್ವೀಕರಿಸಿದ್ದರು. 2024ರ ಹೊತ್ತಿಗೆ ಒಟ್ಟು 54  ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಲ್ಲಿ, ನಟರಾದ ಪೃಥ್ವಿರಾಜ್ ಕಪೂರ್ (1971) ಮತ್ತು ವಿನೋದ್ ಖನ್ನಾ (2017) ಮಾತ್ರ ಮರಣೋತ್ತರ ಪ್ರಶಸ್ತಿ ವಿಜೇತರು.  ಹಿಂದಿ ಭಾಷೆಗೆ ಈ ಪ್ರಶಸ್ತಿ ಅತಿ ಹೆಚ್ಚು ಸಿಕ್ಕಿವೆ.

ಇದನ್ನೂ ಓದಿ: ಐದು ದಶಕದ ಅವಿರತ ಕಲಾಸೇವೆ: ಅನಂತ್ ನಾಗ್ ಅವರ ಸಿನಿ ಪಯಣದ ಪಕ್ಷಿ ನೋಟ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಮಹತ್ವ

1969ರಲ್ಲಿ ಮೊದಲು ಪ್ರದಾನ ಮಾಡಲಾದ ಈ ಪ್ರಶಸ್ತಿಯನ್ನು ಭಾರತ ಸರ್ಕಾರವು ಭಾರತೀಯ ಚಿತ್ರರಂಗಕ್ಕೆ ದಾದಾಸಾಹೇಬ್ ಫಾಲ್ಕೆ ಅವರ ಕೊಡುಗೆಯನ್ನು ಸ್ಮರಿಸಲು ಪರಿಚಯಿಸಿತು.”ಭಾರತೀಯ ಚಿತ್ರರಂಗದ ಪಿತಾಮಹ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಫಾಲ್ಕೆ (1870–1944) ಭಾರತದ ಮೊದಲ ಫೀಚರ್​​ ಫಿಲ್ಮ್​​ ರಾಜಾ ಹರಿಶ್ಚಂದ್ರ (1912)ದ ನಿರ್ದೇಶಕ ಮತ್ತು ಭಾರತೀಯ ಚಲನಚಿತ್ರ ನಿರ್ಮಾಪಕರಾಗಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us