ವೈದ್ಯಲೋಕದ ಅಚ್ಚರಿ; ಮಹಿಳೆಯ ಕಿಬ್ಬೊಟ್ಟೆಯಲ್ಲಿ ಕಿತ್ತಳೆ ಗಾತ್ರದ ಯೋನಿ ಕಲ್ಲು ಪತ್ತೆ

ವೈದ್ಯರು ಲೇಸರ್‌ ಮೂಲಕ 3 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಆ ಯೋನಿ ಕಲ್ಲನ್ನು ಒಡೆದು ಆಕೆಯ ದೇಹದಿಂದ ಹೊರತೆಗೆದರು. ಮೂತ್ರಶಾಸ್ತ್ರ ಪ್ರಕರಣದ ವರದಿಗಳಲ್ಲಿ ಈ ರೀತಿಯ ಪ್ರಕರಣವು ಬಹಳ ಅಪರೂಪವಾಗಿದ್ದು, ಇದು ವೈದ್ಯರಿಗೆ ಕೂಡ ಅಚ್ಚರಿ ಉಂಟುಮಾಡಿದೆ.

ವೈದ್ಯಲೋಕದ ಅಚ್ಚರಿ; ಮಹಿಳೆಯ ಕಿಬ್ಬೊಟ್ಟೆಯಲ್ಲಿ ಕಿತ್ತಳೆ ಗಾತ್ರದ ಯೋನಿ ಕಲ್ಲು ಪತ್ತೆ
ಯೋನಿ ಕಲ್ಲಿನ ಎಕ್ಸ್​ರೇ

Updated on: Nov 25, 2023 | 12:43 PM

ನವದೆಹಲಿ: ಕಿಡ್ನಿ ಸ್ಟೋನ್‌ಗಳ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಆದರೆ ಯೋನಿ ಕಲ್ಲುಗಳ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಇದು ಅತ್ಯಂತ ಅಪರೂಪದ ಸಂಗತಿ. ಈ ಅಪರೂಪದ ಘಟನೆಯು 27 ವರ್ಷದ ಮಹಿಳೆಯ ಆರೋಗ್ಯವನ್ನೇ ಹಾಳು ಮಾಡಿದೆ. ಆ ಮಹಿಳೆಯ ದೇಹದಲ್ಲಿ ದೊಡ್ಡದಾದ ಯೋನಿ ಕಲ್ಲು ಅಡಗಿದೆ ಎಂದು ವೈದ್ಯರು ಹೇಳಿದರು. ಅಸಹನೀಯ ಕಿಬ್ಬೊಟ್ಟೆಯ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದ ಮಹಿಳೆ ನಂತರ ಆಸ್ಪತ್ರೆಗೆ ಅಡ್ಮಿಟ್ ಆದರು. ಆಗ ಅಲ್ಲಿ ವೈದ್ಯರು ಅವರನ್ನು ಪರೀಕ್ಷಿಸಿದ ವೈದ್ಯರು ಆಕೆಯ ಕಿಬ್ಬೊಟ್ಟೆಯಲ್ಲಿ ಕಿತ್ತಳೆ ಹಣ್ಣಿನ ಗಾತ್ರದ ಬೃಹತ್ ಯೋನಿ ಕಲ್ಲು ಇದೆ ಎಂದು ಗುರುತಿಸಿದರು.

ನಂತರ ವೈದ್ಯರು ಲೇಸರ್‌ ಮೂಲಕ 3 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಆ ಯೋನಿ ಕಲ್ಲನ್ನು ಒಡೆದು ಆಕೆಯ ದೇಹದಿಂದ ಹೊರತೆಗೆದರು. ಮೂತ್ರಶಾಸ್ತ್ರ ಪ್ರಕರಣದ ವರದಿಗಳಲ್ಲಿ ಈ ರೀತಿಯ ಪ್ರಕರಣವು ಬಹಳ ಅಪರೂಪವಾಗಿದ್ದು, ಇದು ವೈದ್ಯರಿಗೆ ಕೂಡ ಅಚ್ಚರಿ ಉಂಟುಮಾಡಿದೆ.

ಇದನ್ನೂ ಓದಿ: ಕಿಡ್ನಿ ಸಮಸ್ಯೆ ಬಗೆಹರಿಸುವ 7 ಸೂಪರ್‌ಫುಡ್‌ಗಳು ಇಲ್ಲಿವೆ

ಯೋನಿ ಕಲ್ಲುಗಳು ಯಾವುದು?:

ಯೋನಿ ಕಲ್ಲು ಅಪರೂಪದ ಸ್ಥಿತಿಯಾಗಿದ್ದು, ಈ ರೀತಿಯ ಪ್ರಕರಣ ಬಹಳ ಅಪರೂಪ. ಪ್ರಾಥಮಿಕ ಮತ್ತು ಮಾಧ್ಯಮಿಕ ಎಂಬ 2 ವಿಧದಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಅವು ರೋಗಶಾಸ್ತ್ರೀಯ ಕ್ಯಾಲ್ಸಿಫಿಕೇಶನ್ ಅನ್ನು ಒಳಗೊಂಡಿರುತ್ತವೆ. ಮುಖ್ಯವಾಗಿ ಮೂತ್ರದ ಸೋಂಕು ಅಥವಾ ನಿಶ್ಚಲತೆಯಿಂದಾಗಿ ಇದು ಸಂಭವಿಸುತ್ತವೆ. ಈ ಸೋಂಕಿನ ಸಂದರ್ಭದಲ್ಲಿ ಹರಳುಗಳು ಗಟ್ಟಿಯಾಗಲು ಪ್ರಾರಂಭಿಸುತ್ತವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us