ಬಾಳೆ ಎಲೆ ಊಟದ ವೈದ್ಯೋದ್ದೇಶ ಏನು? ಉಪವಾಸ ಏಕೆ ಮಾಡಬೇಕು?

| Updated By: ಸಾಧು ಶ್ರೀನಾಥ್​

Updated on: Sep 21, 2022 | 6:06 AM

ಬಾಳೆ ಎಲೆಯ ಮೇಲೆ ಬ್ಯಾಕ್ಟಿರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.

ಬಾಳೆ ಎಲೆ ಊಟದ ವೈದ್ಯೋದ್ದೇಶ ಏನು? ಉಪವಾಸ ಏಕೆ ಮಾಡಬೇಕು?
ಬಾಳೆ ಎಲೆ ಊಟದಿಂದ ಇದೆ ಬಹಳ ದೊಡ್ಡ ಉಪಯೋಗ! ಉಪವಾಸ ಏಕೆ ಮಾಡಬೇಕು?
Follow us on

ಬಾಳೆ ಎಲೆ ಊಟದಿಂದ ಇದೆ ಬಹಳ ದೊಡ್ಡ ಉಪಯೋಗ! ಉಪವಾಸ ಏಕೆ ಮಾಡಬೇಕು? ಬಾಳೆ ಎಲೆ ಊಟದಿಂದ ಕೇವಲ ಹೊಟ್ಟೆ ತುಂಬುವುದೊಂದೇ ಅಲ್ಲ. ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ. ಮುಖ್ಯವಾದ 6 ಲಾಭಗಳು ಇಲ್ಲಿವೆ.

  1. * ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ ಎಂದ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ಜೀರ್ಣಕ್ರಿಯ ಚೆನ್ನಾಗಿ ಆಗುತ್ತದೆ.
  2. * ಬಾಳೆ ಎಲೆಯ ಮೇಲೆ ಬ್ಯಾಕ್ಟಿರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.
  3. * ಚೆನ್ನೈನ ಆಯುರ್ವೇದ ತಜ್ಞರ ಪ್ರಕಾರ ಸಣ್ಣ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ಹೊಂದಿರುವವರು ನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.
  4. * ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು. ಆದರೆ, ಬಾಳೆ ಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ!
  5. * ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪು, ಗ್ಯಾಸ್ ಅಡುಗೆಯಿಂದ ಆಹಾರ ಸೇರಿಕೊಳ್ಳುವ ಕೃತ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ.
  6. * ಬಾಳೆ ಎಲೆಯಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಡಿ ಶೇಖರಣೆಗೊಂಡಿರುತ್ತದೆ. ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆ ಲೇಪಿತ ಬಾಳೆ ಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ. ಭವಿಷ್ಯದಲ್ಲಿ ಚರ್ಮ ರೋಗಳು ಬಾರದಂತೆ ತಡೆಯುವ ವೈದ್ಯೋದ್ದೇಶ ಇದರದ್ದು. ತೆಂಗಿನೆಣ್ಣೆ ಲೇಪಿತ ಬಾಳೆ ಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ.
  7. * ಉಪವಾಸ ಏಕೆ ಮಾಡಬೇಕು?:
    ಆಯುರ್ವೇದದಲ್ಲಿ ಉಪವಾಸದ ಬಗ್ಗೆ ಈ ಕೆಳಕಂಡ ತತ್ವಗಳು ಅಡಗಿವೆ ಎಂದು ಹೇಳಲಾಗಿದೆ. ವೈದ್ಯಕೀಯ ದೃಷ್ಟಿಯಿಂದ ಗಮನಿಸಿದಾಗ ಹಲವಾರು ಕಾಯಿಲೆಗಳು, ಸಂಗ್ರಹಿತ ವಿಷಪೂರಿತ ವಸ್ತುಗಳು ನಮ್ಮ ಜೀರ್ಣಾಂಗದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆ ವಿಷಪೂರಿತ ವಸ್ತುಗಳು ಹೊರ ಹೋಗಿ ಆರೋಗ್ಯಕ್ಕೆ ಕಾರಣವಾಗುತ್ತದೆ. ಅಲ್ಲದೆ ಜೀರ್ಣಾಂಗಗಳು ವಿಶ್ರಮಿಸಿಕೊಂಡು ಶುದ್ದೀಕರಣಗೊಂಡು ಮುಂದಿನ ಉತ್ತಮ ಕಾರನಿರ್ವಹಣೆಗೆ ಸಿದ್ಧವಾಗುತ್ತವೆ.
    ಪೂರ್ಣ ನಿರಾಹಾರ ಆರೋಗ್ಯಕ್ಕೆ ಉತ್ತಮ ಮತ್ತು ಆ ಅವಧಿಯಲ್ಲಿ ಸಾಂದರ್ಭಿಕವಾಗಿ ಬಿಸಿ ನೀರಿನಿಂದ ಕೂಡಿದ ನಿಂಬೆರಸ ದೇಹದ ಉಷ್ಣತೆಯನ್ನು ಸುಧಾರಿಸುತ್ತದೆ. ಆಯುರ್ವೇದದಲ್ಲಿ ದೇಹವು ಭೂಮಿಯ ಮಾದರಿಯಲ್ಲಿ 80 % ನೀರಿನಿಂದ 20 % ಗಟ್ಟಿ ಪದಾರ್ಥದಿಂದ ಕೂಡಿದೆ. ಚಂದ್ರನ ಗುರುತ್ವಾಕರ್ಷಣೆ ದ್ರವಾಹಾರದ ಮೇಲೆ ಪರಿಣಾಮ ಬೀರುವುದು. ಅದು ದೇಹದ ಸಮತೋಲನವನ್ನು ಹೆಚ್ಚಿಸುವುದು ಮತ್ತು ಜಾಗೃತಗೊಳಿಸುವುದು.
    ಅದು ದೇಹದ ಕೊಳೆ (ಮಲ) ವಿಸರ್ಜನೆ ಮೊದಲಾದವುಗಳಿಂದ ಅಸಿಡಿಟಿಯನ್ನು ಹೋಗಲಾಡಿಸುತ್ತದೆ. ಜೊತೆಗೆ ಸಂಶೋಧಕರು ಮುಖ್ಯವಾಗಿ ಆರೋಗ್ಯಕ್ಕೆ ಅಗತ್ಯವಾದಷ್ಟು ಕ್ಯಾಲರಿ ಆಹಾರವನ್ನು ಒದಗಿಸಿ ಕ್ಯಾನ್ಸರ್, ಸಕ್ಕರೆ ಕಾಯಿಲೆ, ಮಲಬದ್ಧತೆ ಮೊದಲಾದ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ. (ಸಂಗ್ರಹ – ನಿತ್ಯಸತ್ಯ)