ನವದೆಹಲಿ: ಅಥ್ಲೀಟ್ಸ್ ಫುಟ್ (Athlete’s Foot) ಗೊತ್ತಲ್ಲ ಮಾರಾಯ್ರೇ? ಇದೊಂದು ಬಗೆಯ ಚರ್ಮವ್ಯಾಧಿಯಾಗಿದ್ದು ಕಾಲುಗಳನ್ನು ಸೋಂಕಿಗೀಡು ಮಾಡುತ್ತದೆ. ಸೋಂಕು ಪಾದದಿಂದ ಶುರುವಾರು ಉಗುರು (nails) ಮತ್ತು ಬೆರಳುಗಳಿಗೆ ಹಬ್ಬುತ್ತದೆ. ಟಿನಿಯಾ ಫಂಗಸ್ ನಿಂದ (Tinea Fungus) ಸೋಂಕು ತಗುಲಿಕೊಳ್ಳುತ್ತದೆ ಅಂತ ವೈದ್ಯರು ಹೇಳುತ್ತಾರೆ ಮತ್ತು ನೀವೇನಾದರೂ ಅಥ್ಲೀಟ್ಸ್ ಫುಟ್ ಸೋಂಕಿಗೊಳಗಾಗಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದರೆ ಇಲ್ಲವೆ ಫಂಗಸ್ ಇರುವ ಜಾಗದಲ್ಲಿ ಕಾಲಿಟ್ಟರೆ ಸೋಂಕಿಗೊಳಗಾಗುತ್ತೀರಿ.
ಈ ಫಂಗಸ್ ಹಬ್ಬುವ ಸ್ವರೂಪದ್ದಾಗಿರುವುದರಿಂದ ಸೋಂಕಿತ ವ್ಯಕ್ತಿ ಕಾಲಿಟ್ಟ ಜಾಗವನ್ನು ಅದು ತೇವಗೊಳಿಸುತ್ತದೆ. ಸದಾ ಬೆವರುವ ಪಾದ ನಿಮ್ಮವಾಗಿದ್ದರೆ ಕೂಡಲೇ ಸೋಂಕಿತರಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಅಯಿಂಟ್ ಮೆಂಟ್ ಗಳಿಂದ ಸೋಂಕನ್ನು ತಹಬದಿಗೆ ತರಬಹುದಾದರೂ ನೀವೇನಾದರೂ ಎಚ್ಚರ ತಪ್ಪಿದರೆ ಅದು ಪುನಃ ನಿಮ್ಮನ್ನು ಕಾಡಲಾರಂಭಿಸುತ್ತದೆ.
ಮಧುಮೇಹದಿಂದ ಬಳಳುತ್ತಿರುವರು ಅಥ್ಲೀಟ್ಸ್ ಫುಟ್ ಸೋಂಕಿಗೊಳಗಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ಅಥ್ಲೀಟ್ಸ್ ಫುಟ್ ಲಕ್ಷಣಗಳೇನು:
1 ಪಾದದ ಚರ್ಮದ ಮೇಲೆ ತುರಿಕೆ ಉಂಟಾಗುತ್ತದೆ ಆ ಭಾಗ ಉರಿಯುತ್ತದೆ
2 ಸೋಂಕಿತ ಭಾಗದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ
3 ಉಗುರಿನ ಬಣ್ಣ ಬದಲಾಗಲಾರಂಭಿಸುತ್ತದೆ
4 ನಿಮ್ಮ ಪಾದದಲ್ಲಿ ಮತ್ತು ಬೆರಳುಗಳ ನಡುವಿನ ಚರ್ಮದಲ್ಲಿ ಸೀಳು ಆಥವಾ ಬಿರುಕು ಕಾಣಿಸುತ್ತದೆ.
5 ಪಾದದ ಕೆಳಭಾಗದ ಚರ್ಮ ಸುಕ್ಕುಗಟ್ಟಿದ ಹಾಗೆ ಕಾಣಿಸಲಾರಂಭಿಸುತ್ತದೆ. ಅಥ್ಲೀಟ್ಸ್ ಫುಟ್ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳಗಳಾದ ಸ್ವಿಮ್ಮಿಂಗ್ ಪೂಲ್, ಲಾಕರ್ ರೂಮು, ಪಾರ್ಕ್ ಮೊದಲಾದ ಕಡೆಗಳಲ್ಲಿ ಬರಿಗಾಲಲ್ಲಿ ಓಡಾಡಿದರೆ ಫಂಗಸ್ ಬೇರೆಯವರಿಗೆ ತಾಕಿಬಿಡುತ್ತದೆ.
ಸೋಂಕಿತ ವ್ಯಕ್ತಿಯ ಟವೆಲ್, ಸಾಕ್ಸ್ ಅಥವಾ ಬಟ್ಟೆಗಳನ್ನ ಉಪಯೋಗಿಸಿದರೆ ಕೂಡಲೇ ಸೋಂಕು ತಾಕಿಬಿಡುತ್ತದೆ.
ಮುನ್ನೆಚ್ಚರಿಕೆಯ ಕ್ರಮಗಳೇನು?
1 ಪಾದಗಳನ್ನು ತೊಳೆಯುವುದು: ನಿಮ್ಮ ಪಾದಗಳನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯವಾಗಿದೆ. ಪಾದಗಳನ್ನು ತೊಳೆಯುವಾಗ ಬಿಸಿನೀರನ್ನು ಬಳಸಿ ಮತ್ತು ಪಾದರಕ್ಷೆ ತೊಡುವ ಮೊದಲು ಪಾದಗಳನ್ನು ಚೆನ್ನಾಗಿ ಒರೆಸಿ ಒಣಗಿಸಿಕೊಳ್ಳಿ.
2 ತೆರೆದ ಪಾದರಕ್ಷೆ ಬಳಸಿ: ಮುಚ್ಚಿದ ಪಾದರಕ್ಷೆಗಳಿಗಿಂತ ಓಪನ್ನಾಗಿರುವ ಪಾದರಕ್ಷೆಗಳನ್ನು ಬಳಶುವ ಅಭ್ಯಾಸ ಬೆಳೆಸಿಕೊಳ್ಳಿ. ತೆರೆದ ಪಾದರಕ್ಷೆ ಧರಿಸಿದರೆ ಪಾದಗಳಿಗೆ ತಾಜಾ ಗಾಳಿ ಸಿಗುತ್ತದೆ.
3 ಸಾಕ್ಸ್ಗಳನ್ನು ಬದಲಾಯಿಸುತ್ತಿರಿ: ಸಾಕ್ಸ್ಗಳನ್ನು ಮೇಲಿಂದ ಮೇಲೆ ಬದಲಾಯಿಸಿ ಸ್ವಚ್ಛವಾಗಿರುವ, ಒಣಗಿದ ಸಾಕ್ಸ್ಗಳನ್ನು ಧರಿಸಬೇಕು, ಹಾಗೆ ಮಾಡುವುದರಿಂದ ನಿಮ್ಮ ಪಾದಗಳಿಗೆ ಸೋಂಕು ತಾಕುವ ಅಪಾಯವಿರುವುದಿಲ್ಲ.
ಇದನ್ನೂ ಓದಿ: International Plastic Bag Free Day 2022: ಪ್ಲಾಸ್ಟಿಕ್ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ? ತಜ್ಞರು ಹೇಳುವುದು ಏನು?