International Plastic Bag Free Day 2022: ಪ್ಲಾಸ್ಟಿಕ್ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ? ತಜ್ಞರು ಹೇಳುವುದು ಏನು?

Plastic Harmful Effect on Health: ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಗಂಭೀರ ಹಾನಿ ಉಂಟಾಗುತ್ತಿದ್ದು, ಅದರ ಹೊರೆಯನ್ನು ಜನರು ಅನುಭವಿಸಬೇಕಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿದರೆ, ಪರಿಸರದಲ್ಲಿನ ಅನೇಕ ರೀತಿಯ ಮಾಲಿನ್ಯವನ್ನು ಕಡಿಮೆ ಮಾಡಬಹುದಾಗಿದೆ.

International Plastic Bag Free Day 2022: ಪ್ಲಾಸ್ಟಿಕ್ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ? ತಜ್ಞರು ಹೇಳುವುದು ಏನು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 03, 2022 | 12:17 PM

ಜುಲೈ 1 ರಿಂದ ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ (Plastic) ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಮಾಲಿನ್ಯವನ್ನು ಎದುರಿಸಲು ಸರ್ಕಾರ ಈ ಕ್ರಮ ಕೈಗೊಂಡಿದ್ದು, ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮಾಲಿನ್ಯದ ದೊಡ್ಡ ಮೂಲವಾಗಿದೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 14 ಮಿಲಿಯನ್ ಟನ್ ಪ್ಲಾಸ್ಟಿಕ್ ಬಳಕೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದರಿಂದ ಕಸ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಜನರ ಆರೋಗ್ಯಕ್ಕೆ ಪ್ಲಾಸ್ಟಿಕ್ ತುಂಬಾ ಅಪಾಯಕಾರಿಯಾಗಿದ್ದು, ಇದರಿಂದ ಜನರು ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬುದನ್ನು ನಾವು ತಜ್ಞರಿಂದ ತಿಳಿಯೋಣ.

ಇದನ್ನೂ ಓದಿ; Viral Video: ಅಲಿಗೇಟರ್ ಮೊಸಳೆಯನ್ನು ಮದುವೆಯಾದ ಮೆಕ್ಸಿಕೋ ಮೇಯರ್, ಡಾನ್ಸ್ ಮಾಡುತ್ತಾ ಮೊಸಳೆಗೆ ಕಿಸ್ ಕೊಟ್ಟ ಮೇಯರ್

ತಜ್ಞರು ಏನು ಹೇಳುತ್ತಾರೆ?

ವೈದ್ಯರಾದ ಡಾ. ಸೋನಿಯಾ ರಾವತ್ ಅವರ ಪ್ರಕಾರ, ಪ್ಲಾಸ್ಟಿಕ್ ನಮ್ಮ ಆರೋಗ್ಯದ ಮೇಲೆ ನೇರ ಮತ್ತು ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಎಷ್ಟೇ ವರ್ಷಗಳು ಬಿಟ್ಟರು ಅದು ಕೊಳೆಯುವುದಿಲ್ಲ. ಮತ್ತು ಇದು ಜಲ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಮಣ್ಣಿನ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದರಿಂದ ಜನರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಸಮುದ್ರವನ್ನು ತಲುಪುತ್ತದೆ ಮತ್ತು ಸಮುದ್ರದ ಪ್ರಾಣಿಗಳು ಪ್ಲಾಸ್ಟಿಕ್​ನ್ನು ತಿನ್ನುತ್ತವೆ. ಆಹಾರ ಪದಾರ್ಥಗಳ ಪ್ಯಾಕೇಜಿಂಗ್‌ನಲ್ಲಿ ಅನೇಕ ಬಾರಿ ರಾಸಾಯನಿಕಗಳನ್ನು ಬಳಸುತ್ತಾರೆ. ಇದರಿಂದಾಗಿ ಜನರ ರೋಗನಿರೋಧಕ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಎಲ್ಲಾ ಜನರು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡುವುದನ್ನು ತಪ್ಪಿಸಬೇಕು ಮತ್ತು ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ಬಿದಿರು ಅಥವಾ ಗಾಜಿನ ಬಾಟಲಿಗಳನ್ನು ನೀರಿಗಾಗಿ ಬಳಸಬೇಕು ಎಂದು ಹೇಳುತ್ತಾರೆ.

ಪರಿಸರಕ್ಕೆ ಹಾನಿ:

ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಗಂಭೀರ ಹಾನಿ ಉಂಟಾಗುತ್ತಿದ್ದು, ಅದರ ಹೊರೆಯನ್ನು ಜನರು ಅನುಭವಿಸಬೇಕಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿದರೆ, ಪರಿಸರದಲ್ಲಿನ ಅನೇಕ ರೀತಿಯ ಮಾಲಿನ್ಯವನ್ನು ಕಡಿಮೆ ಮಾಡಬಹುದು ಮತ್ತು ಅದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ಇದನ್ನೂ ಓದಿ: ತಪ್ಪು ಮಾಡಿದ್ರೆ ವಿಧಾನಸೌಧದ ಎದುರು ನನ್ನ ತಲೆ ತೆಗೆಯಿರಿ: ಅಧಾರ ರಹಿತ ಆರೋಪಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಆಕ್ರೋಶ