Google: ಮದುವೆಯ ನಂತರ ಹೆಚ್ಚಿನ ಮಹಿಳೆಯರು ಗೂಗಲ್‌ನಲ್ಲಿ ಏನನ್ನು ಸರ್ಚ್ ಮಾಡ್ತಾರೆ?
ಸಿಲ್ಲಿ ಸಿಲ್ಲಿ ವಿಷಯಗಳಿಂದ ಹಿಡಿದು ಗಂಭೀರ ವಿಷಯಗಳವರೆಗೂ ಮಾಹಿತಿಗಾಗಿ ಪ್ರತಿಯೊಬ್ಬರೂ ಗೂಗಲ್ನ್ನು ನಂಬಿಕೊಂಡಿದ್ದಾರೆ.
ಸಿಲ್ಲಿ ಸಿಲ್ಲಿ ವಿಷಯಗಳಿಂದ ಹಿಡಿದು ಗಂಭೀರ ವಿಷಯಗಳವರೆಗೂ ಮಾಹಿತಿಗಾಗಿ ಪ್ರತಿಯೊಬ್ಬರೂ ಗೂಗಲ್ನ್ನು ನಂಬಿಕೊಂಡಿದ್ದಾರೆ. ಯಾವುದೇ ವಿಷಯಗಳ ಬಗ್ಗೆ ನಿಖರ ಮಾಹಿತಿ ಬೇಕಿದ್ದರೂ ಕ್ಷಣಮಾತ್ರದಲ್ಲಿ ಗೂಗಲ್ ಒದಗಿಸಬಲ್ಲದು. ಜನರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಗೂಗಲ್‌ನಲ್ಲಿ ಉತ್ತರವಿದೆ ಎಂಬುದು ಜನರ ನಂಬಿಕೆ. ಹಾಗಾಗಿ ಬಹುತೇಕ ಮಂದಿ ಎಲ್ಲದಕ್ಕೂ ಗೂಗಲ್ನ್ನೇ ಅವಲಂಬಿಸಿದ್ದಾರೆ.
ಸ್ನೇಹಿತರಿಗೆ ಗಿಫ್ಟ್ ಕೊಡುವುದರಿಂದ ಹಿಡಿದು ಅನಾರೋಗ್ಯವಾದಾಗ ಔಷಧಿಯನ್ನು ಸರ್ಚ್ ಮಾಡುವವರೆಗೂ ಎಲ್ಲದಕ್ಕೂ ಗೂಗಲ್ಲೇ ಬೇಕು. ಚಿಕ್ಕಪುಟ್ಟ ವಿಷಯಗಳಿಂದ ಹಿಡಿದು ದೊಡ್ಡ ವಿಷಯಗಳವರೆಗೂ ಪ್ರತಿಯೊಬ್ಬರೂ ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಗೂಗಲ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ.
ಆದರೆ ಇತ್ತೀಚಿನ ವರದಿಯೊಂದರಲ್ಲಿ ಮದುವೆಯ ನಂತರ ಹೆಚ್ಚಿನ ಮಹಿಳೆಯರು ಗೂಗಲ್‌ನಲ್ಲಿ ಏನನ್ನು ಹುಡುಕುತ್ತಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಮಹಿಳೆಯರು ಗೂಗಲ್‌ನಲ್ಲಿ ಏನನ್ನು ಹುಡುಕುತ್ತಾರೆ ಗೂಗಲ್‌ನ ಅಂಕಿಅಂಶಗಳ ಪ್ರಕಾರ, ವಿವಾಹಿತ ಮಹಿಳೆಯರು ಪತಿ ಏನು ಇಷ್ಟಪಡುತ್ತಾರೆ ಎಂಬುದನ್ನು ಕಂಡುಹಿಡಿಯುವುದು ಹೇಗೆ ಎಂದು ಎಂಬುದನ್ನು ಗೂಗಲ್‌ನಲ್ಲಿ ಹೆಚ್ಚು ಹುಡುಕಿದ್ದಾರೆ. ಮದುವೆಯಾದ ನಂತರ ಜಗತ್ತಿನ ಪ್ರತಿಯೊಬ್ಬ ಹೆಣ್ಣಿಗೆ ಕಾಡುವ ಪ್ರಶ್ನೆಯೇ ಪತಿಗೆ ಏನು ಇಷ್ಟ ಎಂಬುದು. ಇದಲ್ಲದೇ ಗಂಡಂದಿರ ಆಯ್ಕೆ ಯಾವುದು ಮತ್ತು ಅವರು ಇಷ್ಟಪಡುವ ಮತ್ತು ಇಷ್ಟಪಡದಿರುವುದು ಏನು ಎಂಬುದನ್ನು ತಿಳಿದುಕೊಳ್ಳಲು ಮಹಿಳೆಯರು ಇಷ್ಟಪಡುತ್ತಾರೆ.
ಗಂಡನ ಮನಸ್ಸನ್ನು ಗೆಲ್ಲುವುದು ಹೇಗೆ? ಮಹಿಳೆಯರು ತಮ್ಮ ಗಂಡನ ಮನಸ್ಸನ್ನು ಗೆಲ್ಲುವುದು ಹೇಗೆ?, ಅವರನ್ನು ಸಂತೋಷವಾಗಿಟ್ಟುಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಹೆಚ್ಚು ಸರ್ಚ್ ಮಾಡಿದ್ದಾರೆ.
ಮಹಿಳೆಯರು ಗೂಗಲ್‌ನಲ್ಲಿ ಹುಡುಕಿದಂತಹ ಇತರೆ ವಿಷಯಗಳೇನು? -ಕೆಲವು ಮಹಿಳೆಯರು ಗಂಡನನ್ನು ತನ್ನ ಗುಲಾಮನನ್ನಾಗಿ ಮಾಡಿಕೊಳ್ಳುವುದು ಹೇಗೆ?, ಮಕ್ಕಳನ್ನು ಹೊಂದಲು ಯಾವ ತಿಂಗಳು ಸೂಕ್ತ ಎಂಬುದರ ಕುರಿತು ಚರ್ಚ್ ಮಾಡಿದ್ದಾರೆ. -ಮಹಿಳೆಯರು ಮದುವೆಯ ನಂತರ ತಮ್ಮ ಹೊಸ ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು, ಆ ಕುಟುಂಬದ ಭಾಗವಾಗುವುದು ಹೇಗೆ, ತಮ್ಮ ಅತ್ತೆ-ಮಾವ ಸೊಸೆ ಯಾವ ರೀತಿ ಇರಲು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. -ಕುಟುಂಬದ ಜವಾಬ್ದಾರಿಯನ್ನು ಹೇಗೆ ನೋಡಿಕೊಳ್ಳಬೇಕು -ಮದುವೆಯ ನಂತರ ಸ್ವಂತ ವ್ಯವಹಾರವನ್ನು ಹೇಗೆ ನಡೆಸಬೇಕು ಮತ್ತು ಕುಟುಂಬವು ವ್ಯವಹಾರವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಹೆಚ್ಚು ಹುಡುಕುತ್ತಾರೆ ಎಂಬುದು ತಿಳಿದುಬಂದಿದೆ.