Eyebrow Dandruff: ತಲೆಹೊಟ್ಟಿನಂತೆ ಹುಬ್ಬುಗಳಲ್ಲಿಯೂ ಹೊಟ್ಟಿನ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸರಳ ಟಿಪ್ಸ್
ಹುಬ್ಬುಗಳ ಸುತ್ತ ಅಥವಾ ಹುಬ್ಬುಗಳ ಮೇಲೆ (ಐಬೋ ಡ್ಯಾಂಡ್ರಫ್) ಫ್ಲಾಕಿ ಚರ್ಮವನ್ನು ನೀವು ಎಂದಾದರೂ ಗಮನಿಸಿದ್ದೀರಾ? ತಲೆಹೊಟ್ಟಿನಂತೆ ಹುಬ್ಬುಗಳಲ್ಲಿ ಹೊಟ್ಟಿನ ಸಮಸ್ಯೆಯನ್ನು ಅನೇಕ ಜನರು ಎದುರಿಸುತ್ತಿದ್ದಾರೆ.
ಹುಬ್ಬುಗಳ ಸುತ್ತ ಅಥವಾ ಹುಬ್ಬುಗಳ ಮೇಲೆ (Eyebrow Dandruff) ಫ್ಲಾಕಿ ಚರ್ಮವನ್ನು ನೀವು ಎಂದಾದರೂ ಗಮನಿಸಿದ್ದೀರಾ? ತಲೆಹೊಟ್ಟು ಪ್ರತಿಯೊಬ್ಬರ ಸಾಮಾನ್ಯ ಸಮಸ್ಯೆಯಾಗಿದೆ. ತಲೆಹೊಟ್ಟಿನಂತೆ ಹುಬ್ಬುಗಳಯೂ ಅನೇಕ ಜನರು ಅದೇ ಸಮಸ್ಯೆಯಿಂದ ಬಳಲುತ್ತಾರೆ. ಅಂತಹ ಸಮಸ್ಯೆಗಳ ಚಿಕಿತ್ಸೆಯನ್ನು ಸೆಬೊರ್ಹೆಕ್ ಡರ್ಮಟೈಟಿಸ್ ಎಂದು ಕರೆಯಲಾಗುತ್ತದೆ. ಇಂತಹ ಸಮಸ್ಯೆಗಳು ದೇಹದ ಯಾವುದೇ ಭಾಗದಲ್ಲಿ ಸಂಭವಿಸಬಹುದು. ಚರ್ಮದಲ್ಲಿ ಎಣ್ಣೆ ಗ್ರಂಥಿಗಳ ಸಾಂದ್ರತೆಯು ಹೆಚ್ಚಾದಾಗ ಈ ಸಮಸ್ಯೆ ಉಂಟಾಗುತ್ತದೆ. ಎಣ್ಣೆಯುಕ್ತ ತ್ವಚೆಯಿರುವವರಲ್ಲಿ ಹೆಚ್ಚುವರಿ ಪದರಗಳಿರುವ ಸಾಧ್ಯತೆ ಹೆಚ್ಚು. ನಮ್ಮ ಚರ್ಮವು ಸಾಮಾನ್ಯವಾಗಿ ಜೀನ್‌ಗಳಿಂದಾಗಿ ಸೆಬೊರ್ಹೆಕ್ ಡರ್ಮಟೈಟಿಸ್‌ಗೆ ಗುರಿಯಾಗುತ್ತದೆ. ನೆತ್ತಿಯ ಮೇಲೆ ತಲೆಹೊಟ್ಟು ಕಾಣಿಸಿಕೊಂಡರೆ ಹೇಗೆ ನಾವು ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆಯೋ ಅದೇ ರೀತಿಯಾಗಿ ಹುಬ್ಬುಹೊಟ್ಟು ತೊಡೆದುಹಾಕಲು ಸಹಾಯವಾಗುವ ಕೆಲ ಸಲಹೆಗಳು ಇಲಿವೆ.
ನಿಯಮಿತ ಮುಖ ತೊಳೆಯುವುದು:
ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ಮುನ್ನ ಮುಖ ತೊಳೆಯುವುದು ಪ್ರಮುಖ ಕೆಲಸಗಳಲ್ಲಿ ಒಂದಾಗಿದೆ. ವ್ಯಾಯಾಮದ ನಂತರ ನಿಮ್ಮ ಮುಖವನ್ನು ಸಹ ತೊಳೆಯಬೇಕು. ಹುಬ್ಬುಗಳಿಂದ ಹೊಟ್ಟು ಹೋಗಲಾಡಿಸಲು ಪ್ರತಿದಿನ ನಾಲ್ಕು ಸಲ ಮುಖವನ್ನು ನೀರಿನಿಂದ ತೊಳೆಯಬೇಕು.
ಆಪಲ್ ಸೈಡರ್ ವಿನೆಗರ್ ಬಳಸಿ:
ತಲೆಹೊಟ್ಟು ಹೋಗಲಾಡಿಸಲು ನೀವು ಆಪಲ್ ಸೈಡರ್ ವಿನೆಗರ್ನ್ನು ಬಳಸಬಹುದು. ಜೊತೆಗೆ ಚರ್ಮದ ಆರೈಕೆ ಜೊತೆಗೆ ಇದನ್ನೂ ಅಡುಗೆ ಮಾಡಲು ಬಳಸಬಹುದು. ಒದ್ದೆಯಾದ ಹತ್ತಿಗೆ ಒಂದು ಹನಿ ಆಪಲ್ ಸೈಡರ್ ವಿನೆಗರ್ ಹಾಕಿ, ನಂತರ ಕಣ್ಣಿನ ಮೇಲ್ಬಾಗಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. ಹತ್ತಿಯ ಉಂಡೆಯಿಂದ ಹೆಚ್ಚುವರಿ ನೀರನ್ನು ತೆಗೆದುಕೊಂಡು ಅನ್ವಯಿಸಿ. ಆದರೆ ಕಣ್ಣಿನೊಳಗೆ ಹೋಗದಂತೆ ಎಚ್ಚರಿಕೆಯಿಂದ ಬಳಸಿ. ಆಪಲ್ ಸೈಡರ್ ವಿನೆಗರ್ನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಬೇಕು. ಬಳಕೆಯ ನಂತರ ಮತ್ತೆ ನೀರಿನಿಂದ ತೊಳೆಯಬೇಡಿ.
ಚಹಾ ಮರದ ಎಣ್ಣೆಯನ್ನು ಬಳಸಿ:
ಚಹಾ ಮರದ ಎಣ್ಣೆಯನ್ನು ಅರೋಮಾಥೆರಪಿ ಉತ್ಪನ್ನವಾಗಿ ಬಳಸಲಾಗುತ್ತದೆ. ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಇದನ್ನು ಕ್ಲನ್ಸರ್ ಆಗಿ ಬಳಸಲಾಗುತ್ತದೆ. ರಾತ್ರಿಯಲ್ಲಿ ಟೀ ಟ್ರೇ ಎಣ್ಣೆಯ ಕೆಲವು ಹನಿಗಳಿಂದ ನಿಮ್ಮ ಹುಬ್ಬುಗಳನ್ನು ಮಸಾಜ್ ಮಾಡಬಹುದು. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳಿವೆ. ಇದು ಒಣ ಚರ್ಮವನ್ನು ಹೈಡೇಟ್ ಮಾಡಲು ಸಹ ಸಹಾಯ ಮಾಡುತ್ತದೆ.
ಸೌಮ್ಯವಾದ ಎಕ್ಟೋಲಿಯಂಟ್ ಬಳಸಿ:
ಡ್ಯಾಂಡ್ರಫ್ನ್ನು ತೆಗೆದುಹಾಕಲು ಆಲ್ಫಾ-ಬೀಟಾ ಹೈಡ್ರಾಕ್ಸಿ ಆಸಿಡ್ ವಾಶ್‌ನಂತಹ ಸೌಮ್ಯವಾದ ಎಕ್ಸ್ಫೋಲಿಯಂಟ್ನ್ನು ಬಳಸಿ. ಚರ್ಮಕ್ಕೆ ಹಾನಿಯಾಗುವಂತಹ ಎಕ್ಟೋಲಿಯಂಟ್ ಬಳಸುವುದು ಬೇಡ.
ಆಂಟಿ ಡ್ಯಾಂಡ್ರಫ್ ಶಾಂಪೂ ಬಳಸಿ:
ಡ್ಯಾಂಡ್ರಫ್ ಶಾಂಪೂ ಬಳಸುವುದರಿಂದ ಹುಬ್ಬು ಹಾಗೂ ನೆತ್ತಿಯ ಮೇಲಿನ ಡ್ಯಾಂಡ್ರಫ್ ನಿವಾರಣೆಯಾಗುತ್ತದೆ. ನಿಮ್ಮ ಮುಖವನ್ನು ತೊಳೆಯುವ ಮೊದಲು ಕೆಲವು ನಿಮಿಷಗಳ ಕಾಲ ನಿಮ್ಮ ಹುಬ್ಬುಗಳನ್ನು ಶಾಂಪೂವಿನಿಂದ ಸ್ವಚ್ಛಗೊಳಿಸಬಹುದು. ಇದು ಆಳವಾಗಿ ಶುದ್ದೀಕರಿಸುತ್ತದೆ. ಡ್ಯಾಂಡ್ರಫ್ನ್ನು ಸಹ ತ್ವರಿತವಾಗಿ ತೆಗೆದುಹಾಕಬಹುದು.
ಒತ್ತಡ ಮಾಡಿಕೊಳ್ಳಬೇಡಿ:
ತಲೆಹೊಟ್ಟು ಹೆಚ್ಚಾಗಲು ದೈನಂದಿನ ಒತ್ತಡವು ಒಂದು ಕಾರಣ. ಒತ್ತಡವು ತಲೆಹೊಟ್ಟು ಹರಡುವಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ನೀವು ಉತ್ತಮ ವೈದ್ಯರೊಂದಿಗೆ ಮಾತಮಾಡಿ ಸಲಹೆ ಪಡೆದುಕೊಳ್ಳಿ. ಇದು ಮನಸ್ಸು ಮತ್ತು ದೇಹ ಎರಡನ್ನೂ ವಿಶ್ರಾಂತಿ ಮಾಡುತ್ತದೆ.
ಇದನ್ನೂ ಓದಿ: Health Tips: ಸಕ್ಕರೆಯ ಕಡುಬಯಕೆಯನ್ನು ತಪ್ಪಿಸುವುದು ಹೇಗೆ? ಇಲ್ಲಿವೆ ಸರಳ ವಿಧಾನಗಳು
Published On - 7:20 am, Sun, 3 July 22