ಇನ್ನೇನು ಕಡಲೆಕಾಯಿ ಪರಿಷೆ ಬರುತ್ತಿದೆ, ಮಧುಮೇಹಿಗಳು ಕಡಲೆಕಾಯಿ ತಿನ್ನಬಹುದಾ? ತಜ್ಞರು ಏನು ಹೇಳುತ್ತಾರೆ?

|

Updated on: Nov 25, 2023 | 5:41 PM

Health Tips: ಕಡಲೆಕಾಯಿಯನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಜೊತೆಗೆ ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನೂ ಕಡಿಮೆ ಮಾಡುತ್ತದೆ. ಅದರಲ್ಲೂ ಶೇಂಗಾವನ್ನು ಚಳಿಗಾಲದಲ್ಲಿ ತಿನ್ನಬೇಕು.

ಇನ್ನೇನು ಕಡಲೆಕಾಯಿ ಪರಿಷೆ ಬರುತ್ತಿದೆ, ಮಧುಮೇಹಿಗಳು ಕಡಲೆಕಾಯಿ ತಿನ್ನಬಹುದಾ? ತಜ್ಞರು ಏನು ಹೇಳುತ್ತಾರೆ?
ಮಧುಮೇಹಿಗಳು ಕಡಲೆಕಾಯಿ ತಿನ್ನಬಹುದಾ?
Follow us on

ಇನ್ನೇನು ಕಡಲೆಕಾಯಿ ಪರಿಷೆ ಬರುತ್ತಿದೆ. ಬಾಯಿಗೆ ರುಚಿಕಟ್ಟಾಗಿ ಕಡಲೆಕಾಯಿ (Kadalekai parishe) ಋತು ಕಾಲಿಟ್ಟಿದೆ. ಕಡಲೆಕಾಯಿ ನಮ್ಮ ಅಡುಗೆಮನೆಯಲ್ಲಿ ಯಾವಾಗಲೂ ಇರುತ್ತದೆ. ಅವುಗಳನ್ನು ತರಕಾರಿಗಳು ಮತ್ತು ಸಲಾಡ್‌ಗಳಿಂದ ಹಿಡಿದು ಸಿಹಿತಿಂಡಿಗಳವರೆಗೆ ಬಳಸಲಾಗುತ್ತದೆ. ಜನರು ಅದನ್ನು ಇಷ್ಟಪಡುತ್ತಾರೆ. ಆದರೆ ಮಧುಮೇಹಿಗಳು ಕಡಲೆಕಾಯಿ ತಿನ್ನುವುದು ಸರಿಯೇ (Are peanuts good for diabetes)? ಎಂಬ ಅನುಮಾನ ಹಲವರಿಗೆ ಇದೆ. ಇವುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಭಾವಿಸಲಾಗಿದೆ. ಹಾಗಾದರೆ ಇದರಲ್ಲಿರುವ ಸತ್ಯ ಏನೆಂದು ತಿಳಿಯೋಣ.

ಮಧುಮೇಹಿಗಳು ಕಡಲೆಕಾಯಿ ತಿನ್ನಬೇಕೇ?

ಕಡಲೆಕಾಯಿಯನ್ನು ಮಧುಮೇಹ ರೋಗಿಗಳು ಸೇವಿಸಲು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್, ಗ್ಲೈಸೆಮಿಕ್ ಲೋಡ್, ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಮಧುಮೇಹ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಕಡಲೆಕಾಯಿಯನ್ನು ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಕೊಬ್ಬು ಇರುತ್ತದೆ. ಕೆಲವೊಮ್ಮೆ ಹೆಚ್ಚಿನ ಕೊಬ್ಬಿನಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು.

ಕಡಲೆಕಾಯಿ ಸೇವಿಸಿದರೆ ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುತ್ತದಾ?

ಕಡಲೆಕಾಯಿಯನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಜೊತೆಗೆ ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನೂ ಕಡಿಮೆ ಮಾಡುತ್ತದೆ. ಅದರಲ್ಲೂ ಶೇಂಗಾವನ್ನು ಚಳಿಗಾಲದಲ್ಲಿ ತಿನ್ನಬೇಕು. ಏಕೆಂದರೆ ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬು ಮತ್ತು ಫೈಬರ್ ಸಮೃದ್ಧವಾಗಿದೆ. ಇದು ನಮಗೆ ಶಕ್ತಿಯನ್ನು ನೀಡುತ್ತದೆ.

Also read: ಸಕ್ಕರೆ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲ ತೊಂದರೆ?

ಇದು ಶೀತ ವಾತಾವರಣದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಪೊಟ್ಯಾಶಿಯಂ, ತಾಮ್ರ, ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಕಡಲೆಕಾಯಿಯಲ್ಲಿವೆ. ಕಡಲೆಕಾಯಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ದಿನಕ್ಕೆ 100 ಗ್ರಾಂ ಕಡಲೆಕಾಯಿಯನ್ನು ತಿನ್ನಬಹುದು. ಇದು 590 ಕ್ಯಾಲೋರಿಗಳನ್ನು ಹೊಂದಿರುತ್ತದೆ.

(ಗಮನಿಸಿ: ಈ ಆರೋಗ್ಯ ವಿಷಯಗಳು ಮಾಹಿತಿಗಾಗಿ ಮಾತ್ರ. ಇದನ್ನು ಆರೋಗ್ಯ ತಜ್ಞರ ಸಲಹೆ ಪ್ರಕಾರ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ, ತಜ್ಞರನ್ನು ಸಂಪರ್ಕಿಸಿ)

ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ