ಅಮೆರಿಕಾದ ಮಿಸೌರಿಯಲ್ಲಿ (Missouri) ನಿಯಮಿತ ಆರೋಗ್ಯ ತಪಾಸಣೆಯ ಸಮಯದಲ್ಲಿ ಆಶ್ಚರ್ಯಕರ ಘಟನೆಯೊಂದು ಬೆಳಕಿದೆ ಬಂದಿದೆ. ತಪಾಸಣೆ ವೇಳೆ ವೈದ್ಯರು ಅನಿರೀಕ್ಷಿತವಾಗಿ 63 ವರ್ಷ ವಯಸ್ಸಿನ ರೋಗಿಯ ದೊಡ್ಡ ಕರುಳಿನೊಳಗೆ ಜೀವಂತ ನೊಣ ಇರುವುದನ್ನು ಕಂಡು ಶಾಕ್ ಆಗಿದ್ದಾರೆ. ಮಿಸೌರಿ ವಿಶ್ವವಿದ್ಯಾನಿಲಯದ ಗ್ಯಾಸ್ಟ್ರೋಎಂಟರಾಲಜಿಯ ಮುಖ್ಯಸ್ಥ ಮ್ಯಾಥ್ಯೂ ಬೆಚ್ಟೋಲ್ಡ್, ರೋಗಿಗೆ ನೊಣವನ್ನು ನುಂಜಿದ ಯಾವುದೇ ನೆನಪಿಲ್ಲ ಮತ್ತು ರೋಗಿ ಯಾವುದೇ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸಲಿಲ್ಲ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ರೋಗಿಯು ವೈದ್ಯಕೀಯ ತಪಾಸಣೆಯ ಮೊದಲು ನೀರು ಮತ್ತು ಎರಡು ದಿನಗಳ ಹಿಂದೆ ಪಿಜ್ಜಾ ಮತ್ತು ಲೆಟಿಸ್ ಅನ್ನು ಸೇವಿಸಿರುವುದನ್ನು ಉಲ್ಲೇಖಿಸಿದ್ದಾನೆ. ವಿಚಿತ್ರವೆಂದರೆ, ಆತ ಸೇವಿಸಿದ ಯಾವುದೇ ಆಹಾರದಲ್ಲಿ ನೊಣ ಕಂಡ ನೆನಪು ಆತನಿಗಿರಲಿಲ್ಲ. ಅಮೇರಿಕನ್ ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ವಿಚಿತ್ರವಾದ ಸಂಶೋಧನೆಯು ವರದಿಯಾಗಿದೆ, ಇದು ಕೊಲೊನೋಸ್ಕೋಪಿ ಸಮಯದಲ್ಲಿ ಅತ್ಯಂತ ಅಪರೂಪದ ಆವಿಷ್ಕಾರ ಎಂದು ವಿವರಿಸುತ್ತದೆ.
ನೊಣ ಅಲ್ಲಿಗೆ ಹೇಗೆ ಬಂತು ಎಂಬುದೇ ನಿಗೂಢ! ಡಾ. ಬೆಚ್ಟೋಲ್ಡ್ ರೋಗಿಯು ಆಕಸ್ಮಿಕವಾಗಿ ಅದನ್ನು ನುಂಗಿದ್ದಾನೆ ಅಥವಾ ಕೆಳಗಿನಿಂದ ನೊಣ ಪ್ರವೇಶಿಸಿದೆ ಎಂಬ ಎರಡು ಸಾಧ್ಯತೆಗಳನ್ನು ಸೂಚಿಸಿದರು. ನೊಣವನ್ನು ನುಂಗಿದರೆ, ಹೊಟ್ಟೆಯಲ್ಲಿರುವ ಜೀರ್ಣಕಾರಿ ಕಿಣ್ವಗಳು ಅದನ್ನು ಒಡೆಯಬೇಕಿತ್ತು ಹಾಗಾಗಿ ಇದರ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಅದು ಕೆಳಗಿನಿಂದ ಬಂದಿದ್ದರೆ, ನೊಣವು ದೊಡ್ಡ ಕರುಳಿನಲ್ಲಿ ಕತ್ತಲೆಯಾದ ಮತ್ತು ಅಂಕುಡೊಂಕಾದ ಮಾರ್ಗವನ್ನು ನ್ಯಾವಿಗೇಟ್ ಮಾಡಬೇಕಾಗಿತ್ತು, ಅದು ಅಸಂಭವವೆಂದು ತೋರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ವೈದ್ಯಲೋಕದ ಅಚ್ಚರಿ; ಮಹಿಳೆಯ ಕಿಬ್ಬೊಟ್ಟೆಯಲ್ಲಿ ಕಿತ್ತಳೆ ಗಾತ್ರದ ಯೋನಿ ಕಲ್ಲು ಪತ್ತೆ
ಕೆಲವೊಮ್ಮೆ, ಕೀಟಗಳು ಹೊಟ್ಟೆಯ ಆಮ್ಲ ಮತ್ತು ಜೀರ್ಣಕಾರಿ ಪರಿಸರವನ್ನು ತಡೆದುಕೊಳ್ಳಬಲ್ಲವು, ಇದು ಕರುಳಿನ ಮೈಯಾಸಿಸ್ ಎಂದು ಕರೆಯಲ್ಪಡುವ ಕರುಳಿನ ಮುತ್ತಿಕೊಳ್ಳುವಿಕೆಗೆ ಕಾರಣವಾಗುತ್ತದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಅಂತಹ ಪ್ರಕರಣಗಳನ್ನು ಸಕ್ರಿಯವಾಗಿ ಪತ್ತೆಹಚ್ಚದಿದ್ದರೂ, ಮಲದಲ್ಲಿ “ಚಲಿಸುವ ಹುಳುಗಳ” ನಿದರ್ಶನಗಳು ಹಿಂದೆ ವರದಿಯಾಗಿದೆ. ಜೀರ್ಣಾಂಗವ್ಯೂಹದ ಮೂಲಕ ಈ ನೊಣ ಹೇಗೆ ಹಾಗೇ ಉಳಿದುಕೊಂಡಿತು ಎಂಬ ವಿವರಗಳು ವೈದ್ಯಕೀಯ ತಜ್ಞರನ್ನು ಕಂಗೆಡಿಸುತ್ತಲೇ ಇದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ