ಅಶೋಕ ಮರದ ಹೂವುಗಳಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ

|

Updated on: Oct 25, 2023 | 7:00 PM

ಅಶೋಕ ಮರದ ಎಲೆಗಳು ಮತ್ತು ಹೂವುಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ನೋವನ್ನು ನಿವಾರಿಸಲು ಇದನ್ನು ಬಳಸಬಹುದು. ಅಶೋಕ ಮರದ ಎಲೆ ಜ್ವರವನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಅಶೋಕ ಮರದ ಎಲೆಗಳು ಮತ್ತು ಹೂವುಗಳಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಅಶೋಕ ಮರದ ಹೂವುಗಳಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ
ಅಶೋಕ ಮರ
Image Credit source: iStock
Follow us on

ನೀವು ಓಡಾಡುವಾಗ ಅಲ್ಲಲ್ಲಿ ಕಾಂಪೌಂಡ್​ಗಳ ಪಕ್ಕದಲ್ಲಿ ಅಶೋಕ ಮರವನ್ನು ನೋಡಿರಬಹುದು. ಅಶೋಕ ಮರವನ್ನು ಭಾರತದಲ್ಲಿ ಪವಿತ್ರ ಮತ್ತು ಪೌರಾಣಿಕವೆಂದು ಪರಿಗಣಿಸಲಾಗಿದೆ. ಸಂಸ್ಕೃತದಲ್ಲಿ, ಅಶೋಕ ಎಂದರೆ ‘ದುಃಖವಿಲ್ಲದ’ ಎಂದರ್ಥ. ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಸಿದ್ಧಾರ್ಥ ಅಶೋಕ ಮರದ ಕೆಳಗೆ ಜ್ಞಾನೋದಯ ಪಡೆದನು ಎಂದು ನಂಬಲಾಗಿದೆ. ಅಶೋಕ ಮರ ಭಾರತದಲ್ಲಿ ವಿಶೇಷವಾಗಿ ಹಿಮಾಲಯ, ಕೇರಳ, ಪಶ್ಚಿಮ ಬಂಗಾಳ ಮತ್ತು ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ. ಅಶೋಕ ಮರವನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಅಶೋಕ ಮರದ ಕೆಲವು ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅಶೋಕ ಸಸ್ಯಗಳು ಸಪೋನಿನ್‌ಗಳು, ಸ್ಟೀರಾಯ್ಡ್‌ಗಳು, ಪ್ರೊಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು, ಟ್ಯಾನಿನ್‌ಗಳು, ಗ್ಲೈಕೋಸೈಡ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಇನ್ನೂ ಅನೇಕ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ. ಅಶೋಕ ಮರದ ಎಲೆಗಳು ಮತ್ತು ಹೂವುಗಳಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮೂಳೆಗಳನ್ನು ಗಟ್ಟಿಗೊಳಿಸುವ 8 ಬೆಸ್ಟ್ ಯೋಗಾಸನಗಳು ಇಲ್ಲಿವೆ

ಅಶೋಕ ಮರದ ಎಲೆಗಳು ಮತ್ತು ಹೂವುಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ನೋವನ್ನು ನಿವಾರಿಸಲು ಇದನ್ನು ಬಳಸಬಹುದು. ಅಶೋಕ ಮರದ ಎಲೆ ಜ್ವರವನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಹಾಗೇ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಶೋಕ ಮರದ ಎಲೆ ನಮ್ಮ ದೇಹದ ಸೂಕ್ಷ್ಮಜೀವಿಯ ಸೋಂಕಿನ ವಿರುದ್ಧ ಹೋರಾಡುತ್ತದೆ. ಅಶೋಕ ಮರದ ಎಲೆಗಳು ಮತ್ತು ಹೂವುಗಳಲ್ಲಿನ ಸಂಯುಕ್ತಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ.

ಅಶೋಕ ಮರದಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಹುಣ್ಣುಗಳನ್ನು ಕಡಿಮೆ ಮಾಡುತ್ತದೆ. ಅಶೋಕ ಮರದ ಎಲೆಗಳು ಮತ್ತು ಹೂವುಗಳು ಕಿಡ್ನಿಯಲ್ಲಿನ ಕಲ್ಲುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಶೋಕ ಮರದ ತೊಗಟೆ ದೇಹದಿಂದ ಹುಳುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದಿಷ್ಟೇ ಅಲ್ಲದೆ, ಸಿಬಿನ್ ಮತ್ತು ಇತರರು 2021ರಲ್ಲಿ ನಡೆಸಿದ ಅಧ್ಯಯನದಲ್ಲಿ ಅಶೋಕ ಮರದ ಹೂವುಗಳಿಂದ ಫ್ಲೇವನಾಯ್ಡ್​ಗಳು ಚರ್ಮದ ಕ್ಯಾನ್ಸರ್​ನಲ್ಲಿನ ಗೆಡ್ಡೆಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದೆ. ಅಶೋಕ ಮರದ ಎಲೆ ಚರ್ಮದ ಕ್ಯಾನ್ಸರ್​ಗೆ ಕಾರಣವಾಗಬಹುದಾದ ಫ್ಲೇವನಾಯ್ಡ್‌ಗಳು ಗ್ಲುಟಾಥಿಯೋನ್ ಪೆರಾಕ್ಸೈಡ್, ಕ್ಯಾಟಲೇಸ್ ಮತ್ತು ಆರ್ನಿಥಿನ್ ಡೆಕಾರ್ಬಾಕ್ಸಿಲೇಸ್‌ನಂತಹ ಕಿಣ್ವಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ವಿಟಮಿನ್ ಡಿ ಕೊರತೆಯಿಂದ ಸ್ತನ ಕ್ಯಾನ್ಸರ್​ ಬರುತ್ತಾ?

ಆದರೆ, ಈ ಅಧ್ಯಯನಗಳನ್ನು ಪ್ರಾಣಿಗಳ ಮೇಲೆ ನಡೆಸಲಾಗಿದೆ. ಆದ್ದರಿಂದ, ಅಶೋಕ ಮರದ ಎಲೆಗಳು ಕ್ಯಾನ್ಸರ್ ವಿರುದ್ಧ ಕಾರ್ಯನಿರ್ವಹಿಸಬಹುದೇ ಎಂದು ಪರಿಶೀಲಿಸಲು ಮಾನವರ ಮೇಲೆ ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ. ಇದಿಷ್ಟೇ ಅಲ್ಲದೆ, ಬ್ಯಾಕ್ಟೀರಿಯಾದ ಸೋಂಕಿಗೆ ಮತ್ತು ಹೃದ್ರೋಗಕ್ಕೂ ಅಶೋಕ ಮರದ ಹೂವು, ಎಲೆಗಳನ್ನು ಬಳಸಬಹುದಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ