ನಮ್ಮ ಸುತ್ತಮುತ್ತಲಿನಲ್ಲಿ ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿರುವ ಮರಗಳನ್ನು ಕಾಣಬಹುದು. ಆರೋಗ್ಯದ ಗುಟ್ಟನ್ನು ಹೊಂದಿರುವ ಇಂತಹ ಮರಗಳಲ್ಲಿ ಅರ್ಜುನ ಮರ (Arjun Tree) ಕೂಡ ಒಂದು. ಹಿಂದಿನ ಕಾಲದಲ್ಲಿ ಜನರು ರೋಗಗಳನ್ನು ಗುಣಪಡಿಸಲು ಔಷಧಿಗಳ ಬದಲಿಗೆ ಈ ಔಷಧೀಯ ಮರದ ತೊಗಟೆಯನ್ನು ಬಳಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅಲೋಪತಿ ಔಷಧ ಬಳಕೆಯಿಂದಾಗಿ ಅವುಗಳ ಬಳಕೆ ಕಡಿಮೆಯಾಗಿದೆ. ಇಂಗ್ಲಿಷ್ ಔಷಧ ಹೊರತಾಗಿ ನಾವು ಅರ್ಜುನ ಮರದ ಬಗ್ಗೆ ನೋಡುವುದಾದರೆ, ಈ ಮರದ ತೊಗಟೆ ಔಷಧೀಯ ಗುಣಗಳನ್ನು ಹೊಂದಿದೆ.
ಆಯುರ್ವೇದ ಔಷಧವೆಂದು ಪರಿಗಣಿಸಲಾಗುವ ಅರ್ಜುನ ತೊಗಟೆಯನ್ನು ಶತಮಾನಗಳಿಂದಲೂ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿದೆ. ಇದು ಸೋಂಕುಗಳು, ಗಂಟಲು ನೋವು, ಶೀತ, ಜ್ವರವನ್ನು ಚಿಟಿಕೆಯಲ್ಲಿ ಗುಣಪಡಿಸುತ್ತದೆ. ಹಾಗಿದ್ದರೆ ಅರ್ಜುನ ತೊಗಟೆಯ ಔಷಧದಿಂದ ಶಮನವಾಗುವ ಆರು ರೋಗಗಳು ಯಾವುವು ಎಂಬುದನ್ನು ನೋಡೋಣ.
ಮಧುಮೇಹ: ಮಧುಮೇಹವನ್ನು ನಿಯಂತ್ರಿಸುವಲ್ಲಿ ಅರ್ಜುನ ತೊಗಟೆ ಪರಿಣಾಮಕಾರಿಯಾಗಿದೆ. ಇದರಲ್ಲಿರುವ ಕೆಲವು ವಿಶೇಷ ಕಿಣ್ವಗಳು ಆಂಟಿಡಯಾಬಿಟಿಕ್ ಗುಣಲಕ್ಷಣಗಳು, ಮೂತ್ರಪಿಂಡ ಮತ್ತು ಯಕೃತ್ತಿನ ದಕ್ಷತೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಮಧುಮೇಹಿಗಳು ಅರ್ಜುನ ಮರದ ತೊಗಟೆಯ ನೀರನ್ನು ಕುದಿಸಿ ಕುಡಿಯಲು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.
ಹೃದಯ ಕಾಯಿಲೆ: ಅರ್ಜುನ ಮರದ ತೊಗಟೆ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುವಲ್ಲಿ ಮತ್ತು ಅದರ ದಕ್ಷತೆಯನ್ನು ಸುಧಾರಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ, ತೊಗಟೆಯು ಟ್ರೈಟರ್ಪಿನಾಯ್ಡ್ ಎಂಬ ವಿಶೇಷ ರಾಸಾಯನಿಕ ಹೊಂದಿದೆ ಎಂದು ಸಂಶೋಧನೆಯೊಂದರಲ್ಲಿ ಕಂಡುಹಿಡಿಯಲಾಗಿದೆ. ಇದು ಹೃದ್ರೋಗದ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.
ನೆಗಡಿ ಮತ್ತು ಕೆಮ್ಮು: ಮಳೆಗಾಲ ಬಂತೆಂದರೆ ಅನೇಕರು ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಾರೆ. ಅರ್ಜುನ ಮರದ ತೊಗಟೆ ಈ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಶೀತ ಮತ್ತು ಕೆಮ್ಮನ್ನು ತ್ವರಿತವಾಗಿ ಗುಣಪಡಿಸುತ್ತದೆ.
ಉಸಿರಾಟದ ತೊಂದರೆಗಳು: ಆಯುರ್ವೇದದ ಪ್ರಕಾರ, ಅರ್ಜುನ ಮರದ ತೊಗಟೆ ಉಸಿರಾಟದ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಆಸ್ತಮಾದಂತಹ ಉಸಿರಾಟದ ಕಾಯಿಲೆಗಳನ್ನು ನಿವಾರಿಸಲು ಇದು ತುಂಬಾ ಉಪಯುಕ್ತವಾಗಿದೆ.
ಅಧಿಕ ರಕ್ತದೊತ್ತಡ: ಅರ್ಜುನ ಮರದ ತೊಗಟೆಯಲ್ಲಿ ಟ್ರೈಟರ್ಪಿನಾಯ್ಡ್ ರಾಸಾಯನಿಕಗಳಿವೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡದ ಗುಣಲಕ್ಷಣಗಳನ್ನು ಸಹ ಹೊಂದಿದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ: ಜೀರ್ಣಕ್ರಿಯೆಯನ್ನು ಸುಧಾರಿಸಲು ಆಯುರ್ವೇದ ತಜ್ಞರು ಅರ್ಜುನ ಮರದ ತೊಗಟೆಯನ್ನು ಕುದಿಸಿದ ನೀರನ್ನು ಕುಡಿಯಲು ಸಲಹೆ ನೀಡುತ್ತಾರೆ. ಮಲಬದ್ಧತೆ, ಗ್ಯಾಸ್ಟ್ರಿಕ್, ಅಲ್ಸರ್ ನಂತಹ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
(ಸೂಚನೆ: ಮೇಲಿನ ಮಾಹಿತಿಯನ್ನು ಜನರ ಸಾಮಾನ್ಯ ಆರೋಗ್ಯ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಆಯುರ್ವೇದ ತಜ್ಞರು ನೀಡಿದ ಸೂಚನೆಗಳ ಪ್ರಕಾರ ನೀಡಲಾಗಿದೆ. ಇದನ್ನು ಟಿವಿ9 ಕನ್ನಡ ಖಚಿತಪಡಿಸಿಲ್ಲ.)
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ