Cardiac Arrest: ಮಕ್ಕಳಲ್ಲೂ ಕಂಡು ಬರುತ್ತಿದೆ ಹಠಾತ್‌ ಹೃದಯ ಸ್ತಂಭನ

ಇತ್ತೀಚೆಗಷ್ಟೇ 4 ವರ್ಷದ ಮಗು ಆಟವಾಡುತ್ತಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಸಾವಿಗೆ ನಿಖರವಾದ ಕಾರಣದ ಬಗ್ಗೆ ಯಾವುದೇ ದೃಢೀಕರಣವಿಲ್ಲದಿದ್ದರೂ, ಮಗುವಿನ ಹಠಾತ್ ಉಸಿರಾಟದ ಸಮಸ್ಯೆಯುಂಟಾಗಿ ಕುಸಿದು ಬಿದ್ದಿದ್ದರಿಂದ ಅದು ಹೃದಯ ಸ್ತಂಭನವಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Cardiac Arrest: ಮಕ್ಕಳಲ್ಲೂ ಕಂಡು ಬರುತ್ತಿದೆ ಹಠಾತ್‌ ಹೃದಯ ಸ್ತಂಭನ
ಮಕ್ಕಳಲ್ಲೂಹಠಾತ್‌ ಹೃದಯ ಸ್ತಂಭನImage Credit source: AboutKidsHealth
Follow us
|

Updated on: Jul 07, 2023 | 6:40 AM

ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಯುವಕರಲ್ಲಿಯೇ ಹಠಾತ್‌ ಹೃದಯ ಸ್ತಂಭನದ ಪ್ರಕರಣಗಳು ಹೆಚ್ಚಾಗುತ್ತಿವೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಹೃದಯ ಸ್ತಂಭನದಿಂದ ಸಾವನ್ನಪ್ಪುವ ಪ್ರಕರಣಗಳು ಕಂಡುಬರುತ್ತಿದೆ. ಇತ್ತೀಚೆಗಷ್ಟೇ 4 ವರ್ಷದ ಮಗು ಆಟವಾಡುತ್ತಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಸಾವಿಗೆ ನಿಖರವಾದ ಕಾರಣದ ಬಗ್ಗೆ ಯಾವುದೇ ದೃಢೀಕರಣವಿಲ್ಲದಿದ್ದರೂ, ಮಗುವಿನ ಹಠಾತ್ ಉಸಿರಾಟದ ಸಮಸ್ಯೆಯುಂಟಾಗಿ ಕುಸಿದು ಬಿದ್ದಿದ್ದರಿಂದ ಅದು ಹೃದಯ ಸ್ತಂಭನವಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಈ ಅನಿರೀಕ್ಷಿತ ಘಟನೆ ಮಗುವಿನ ಪೋಷಕರಿಗೆ ನಂಬಲಾಗದಷ್ಟು ಅಘಾತವನ್ನುಂಟು ಮಾಡಿದೆ. ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ಕಾರಣ ಹಠಾತ್​​​​​ಉಸಿರಾಟ ನಿಂತು ಹೋಗಿದೆ. ತಕ್ಷಣ ಮಗುವಿಗೆ ಸಿಪಿಆರ್ ನೀಡಿದ್ದರು. ಮತ್ತು ಆಸ್ಪತ್ರೆಯಲ್ಲಿ ಕೋಮಾದಲ್ಲಿ ಇರಿಸಲಾಗಿತ್ತು. ಎರಡು ದಿನಗಳ ನಂತರ ಬ್ರೈನ್ ಡೆಡ್ ಎಂದು ಘೋಷಿಸಲಾಯಿತು.

ಹೃದಯ ಸ್ತಂಭನವು ಹೃದಯ ಬಡಿತ ಪ್ರಕ್ರಿಯೆಯನ್ನು ಏಕಾಏಕಿ ನಿಲ್ಲಿಸುತ್ತದೆ. ಇದನ್ನು ಶ್ವಾಸಕೋಶದ ಶುದ್ಧ ರಕ್ತನಾಳ ಸ್ತಂಭನ ಅಥವಾ ರಕ್ತಪರಿಚಲನೆ ಸ್ತಂಭನ ಎಂದೂ ಕರೆಯುತ್ತಾರೆ. ಈ ರೀತಿಯ ಹೃದಯ ಸ್ತಂಭನ ಉಂಟಾದಾಗ ಐದು ನಿಮಿಷಗಳ ವರೆಗೆ ಚಿಕಿತ್ಸೆ ನೀಡದೇ ಹೋದಲ್ಲಿ ಮೈದುಳು ನಿಷ್ಕ್ರಿಯವಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: ವಾಟರ್​ ಫಾಸ್ಟಿಂಗ್​ನಿಂದ ತೂಕವೇನೋ ಬಹುಬೇಗ ಕಡಿಮೆಯಾಗುತ್ತೆ, ನಂತರ ಈ ಸಮಸ್ಯೆಯೂ ಕಾಡಬಹುದು

ಹೃದಯ ಸ್ತಂಭನದ ಲಕ್ಷಣಗಳೇನು?

ಹೃದಯ ಸ್ತಂಭನವು ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ:

  • ಬೆನ್ನು ನೋವು
  • ಉಸಿರಾಟದ ತೊಂದರೆ
  • ವಿಪರೀತ ಆಯಾಸ
  • ಇದ್ದಕ್ಕಿದ್ದಂತೆ ಮೂರ್ಛೆ ಹೋಗುವುದು
  • ಎದೆ ನೋವು
  • ಎದೆಯ ಬಿಗಿತ
  • ವಾಂತಿ
  • ವಾಕರಿಕೆ
  • ಹೊಟ್ಟೆ ನೋವು

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: