ಗರ್ಭಾವಸ್ಥೆಯಲ್ಲಿರುವಾಗ ಉಸಿರಾಟದ ಸಮಸ್ಯೆಯಾಗದಿರಲು ಏನು ಮಾಡಬೇಕು? ಯಾವ ರೀತಿಯ ವ್ಯಾಯಾಮ ಮಾಡಬೇಕು? ಇಲ್ಲಿದೆ ಮಾಹಿತಿ

ಗರ್ಭಾವಸ್ಥೆಯಲ್ಲಿರುವಾಗ ಕೆಲವು ಸುಲಭ ಊಸಿರಾಟದ ವ್ಯಾಯಾಮ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಗರ್ಭಧಾರಣೆಯ ಪ್ರಯಾಣದಲ್ಲಿ ಉಸಿರಾಟದ ಸಮಸ್ಯೆಯಾಗದೇ, ಹೊಟ್ಟೆಯಲ್ಲಿರುವ ಮಗುವಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಇದು ಸಹಕಾರಿಯಾಗಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಗರ್ಭಾವಸ್ಥೆಯಲ್ಲಿರುವಾಗ ಉಸಿರಾಟದ ಸಮಸ್ಯೆಯಾಗದಿರಲು ಏನು ಮಾಡಬೇಕು? ಯಾವ ರೀತಿಯ ವ್ಯಾಯಾಮ ಮಾಡಬೇಕು? ಇಲ್ಲಿದೆ ಮಾಹಿತಿ
ಗರ್ಭಾವಸ್ಥೆಯಲ್ಲಿರುವಾಗ ಕೆಲವು ಸುಲಭ ಊಸಿರಾಟದ ವ್ಯಾಯಾಮ Image Credit source: Apollo Cradle
Follow us
| Updated By: ಅಕ್ಷತಾ ವರ್ಕಾಡಿ

Updated on:Apr 28, 2023 | 5:38 PM

ಹೆಣ್ಣಿಗೆ ಗರ್ಭಾವಸ್ಥೆ ಬಳಿಕ ಪುನರ್ಜನ್ಮ ಎನ್ನುತ್ತಾರೆ. ಅಂತಹ ಸನ್ನಿವೇಶದಲ್ಲಿ ಅರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಮುಖ್ಯವಾಗಿ ಗರ್ಭಿಣಿಯರಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ತಲೆದೊರುತ್ತವೆ. ಅದಕ್ಕಾಗಿಯೇ ಕೆಲವು ತಂತ್ರಗಳನ್ನು ಅನುಸರಿಸುವುದು ಬಹಳ ಮುಖ್ಯ. ಉಸಿರಾಟದ ವಿವಿಧ ತಂತ್ರಗಳನ್ನು ಅನುಸರಿಸುವುದರಿಂದ ತಾಯಿ ಮತ್ತು ಭ್ರೂಣ ಇಬ್ಬರಿಗೂ ಒಳ್ಳೆಯದು. ಇದು ಗರ್ಭಿಣಿಯರನ್ನು ಶಾಂತವಾಗಿಡುವುದರ ಜೊತೆಗೆ ಮತ್ತು ರಾತ್ರಿಯ ಸಮಯದಲ್ಲಿ ನೆಮ್ಮದಿ ಕೊಡುತ್ತದೆ. ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ ಮನಸ್ಸು ಶಾಂತಗೊಂಡು ಬೇಡದ ಗೊಂದಲಗಳನ್ನು ತೊಡೆದುಹಾಕುತ್ತದೆ. ನಿಮಗೆ ಮಲಗುವಾಗ ಅಥವಾ ಕುಳಿತಲ್ಲಿಯೇ ಕೆಲವರಿಗೆ ಕಿರಿ ಕಿರಿ ಉಂಟಾಗುತ್ತಿರುತ್ತದೆ. ಅಂತಹ ಸಮಯದಲ್ಲಿ ದೇಹವನ್ನು ವಿಶ್ರಾಂತಿಗೊಳಿಸಿ ರಕ್ತದೊತ್ತಡ ಸುಧಾರಿಸಿ, ದೇಹದ ಎಲ್ಲಾ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.

ಗರ್ಭಾವಸ್ಥೆಯಲ್ಲಿ ಉಸಿರಾಟದ ತಂತ್ರಗಳು ಹೇಗೆ ಸಹಾಯ ಮಾಡುತ್ತವೆ?

ಪ್ರಸವದ ಸಮಯದಲ್ಲಿ ಮಹಿಳೆಯರು ಎದುರಿಸುವ ಅಡೆತಡೆಗಳು, ಉಸಿರಾಟದ ಸಮಸ್ಯೆಗಳನ್ನು ನಿಭಾಯಿಸಲು ಇದೊಂದು ಮಾರ್ಗವಾಗಿದೆ ಅಲ್ಲದೆ ಉತ್ತಮ ಮನಸ್ಥಿತಿಗೆ ಮರಳಲು ಸಹಾಯ ಮಾಡುತ್ತದೆ. ಗರ್ಭಿಣಿಯರಲ್ಲಿ ಗಂಭೀರ ಸಮಸ್ಯೆಗಳಾದಂತ ಆತಂಕ, ಒತ್ತಡ ಮತ್ತು ಖಿನ್ನತೆಯನ್ನು ತಪ್ಪಿಸಲು ಉಸಿರಾಟದ ತಂತ್ರಗಳು ಸಹಾಯ ಮಾಡಬಲ್ಲದು.

ಗರ್ಭಾವಸ್ಥೆಯಲ್ಲಿ ಮಾಡಬೇಕಾದ, 5 ಉಸಿರಾಟಕ್ಕೆ ಸಹಾಯ ಮಾಡುವ ವ್ಯಾಯಾಮ ಅಥವಾ ತಂತ್ರಗಳು ಯಾವುದು? ಇಲ್ಲಿದೆ ಮಾಹಿತಿ

ಆಳವಾದ ಉಸಿರನ್ನು ತೆಗೆದುಕೊಳ್ಳುವುದು ಮತ್ತು ದೇಹವನ್ನು ವಿಶ್ರಾಂತಿಗೊಳಿಸುವುದು ತಾಯಿಗೆ ತನ್ನ ಮನಸ್ಥಿತಿಯನ್ನು ಸಮಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಗುವಿಗೆ ಹೆಚ್ಚಿನ ಆಮ್ಲಜನಕದ ಮಟ್ಟವನ್ನು ನೀಡಲು ಸಹಾಯ ಮಾಡುತ್ತದೆ.

ವಿಶ್ರಾಂತಿ ಮತ್ತು ಲಯಬದ್ಧ ಉಸಿರಾಟ:

ಲಯಬದ್ಧ ಉಸಿರಾಟವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಮತ್ತು ದೇಹದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಉಸಿರಾಟ ಎಣಿಕೆ:

ಉಸಿರಾಟವನ್ನು ಎಣಿಸುವುದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಇದು ದೇಹವನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯನ್ನು ದೇಹವು ವಿಶ್ರಾಂತಿ ಪಡೆಯುವವರೆಗೆ ಒಂದೆರಡು ನಿಮಿಷಗಳ ಕಾಲ ಪುನರಾವರ್ತಿಸಲಾಗುತ್ತದೆ. ಎಣಿಕೆಯ ಉಸಿರಾಟವು ಪರಿಣಾಮಕಾರಿ ಏಕೆಂದರೆ ಅದು ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ಸ್ನಾಯುಗಳನ್ನು ನಿಯಂತ್ರಿಸುತ್ತದೆ.

ಬಾಯಿಯಿಂದ ಉಸಿರಾಟ:

ಬಾಯಿ ಮೂಲಕ ಉಸಿರಾಡುವುದು ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಮೊದಲಿಗೆ ಆರಾಮದಾಯಕ ಭಂಗಿಯಲ್ಲಿ ಕುಳಿತು ಬಾಯಿಯ ಮೂಲಕ ಉಸಿರಾಡಬೇಕು, ಬಳಿಕ ಕೆಲವು ಸೆಕೆಂಡುಗಳ ಕಾಲ ಅದನ್ನು ಹಿಡಿದಿಟ್ಟುಕೊಂಡು ನಂತರ ಉಸಿರಾಡುವುದು ಈ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ಈ ಪ್ರಕ್ರಿಯೆಯನ್ನು ಒಂದೆರಡು ಬಾರಿ ಪುನರಾವರ್ತಿಸಿ.

ಆಳವಾದ ಕಿಬ್ಬೊಟ್ಟೆಯ ಉಸಿರಾಟ:

ಇದು ಎಲ್ಲಾ ರೀತಿಯ ಗೊಂದಲಗಳನ್ನು ದೂರಮಾಡಿ, ದೇಹದಲ್ಲಿನ ಆತಂಕ, ಒತ್ತಡ ಮತ್ತು ನೋವನ್ನು ಕಡಿಮೆ ಮಾಡುವುತ್ತದೆ ಹಾಗಾಗಿ ಇದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ಉಸಿರಾಟದ ತಂತ್ರವನ್ನು ಪ್ರಸವದ ಸಮಯದಲ್ಲಿ ನಡೆಸಲಾಗುತ್ತದೆ. ಇದು ಮಗು ಮತ್ತು ತಾಯಿಗೆ ಆಮ್ಲಜನಕದ ಪೂರೈಕೆಗೆ ಸಹಾಯ ಮಾಡುತ್ತದೆ. ಈ ಪ್ರಕಿಯೇ ಉಸಿರಾಟದ ಸಾಮಾನ್ಯ ತಂತ್ರವಾಗಿದೆ.

ಇದನ್ನೂ ಓದಿ: ಅಪಘಾತಗಳಲ್ಲಿ ಉಂಟಾಗುವ ಅಧಿಕ ರಕ್ತಸ್ರಾವ ನಿಲ್ಲಿಸಲು 2 ಘಟಕಗಳನ್ನು ಅಭಿವೃದ್ಧಿಪಡಿಸಿದ MIT ಸಂಶೋಧಕರು

ಲಮಾಜ್ ಉಸಿರಾಟ(ಸೈಕೋಪ್ರೊಫಿಲ್ಯಾಕ್ಟಿಕ್ ವಿಧಾನ):

ಈ ತಂತ್ರವು ದೇಹದಿಂದ ದೈಹಿಕ ನೋವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಪ್ರಸವದ ಸಮಯದಲ್ಲಿ ಸಂಕೋಚನಗಳು ಸಂಭವಿಸುತ್ತವೆ, ಇದು ದೇಹವು ನೋವು ಮತ್ತು ಉಸಿರಾಟದ ತೊಂದರೆಯನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಉಸಿರಾಟದ ತೊಂದರೆ ಉಂಟಾಗಿ ಉಸಿರಾಡಲು ಕಷ್ಟವಾಗುತ್ತದೆ. ಈ ತಂತ್ರವು ಉಸಿರಾಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿನ ನೋವನ್ನು ಕಡಿಮೆ ಮಾಡುತ್ತದೆ.

ಉಸಿರಾಟದ ತಂತ್ರಗಳು ಗರ್ಭಧಾರಣೆಯ ಸಮಯದಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ನಿಜವಾಗಿಯೂ ಗರ್ಭಿಣಿಯರಿಗೆ ಮಾರ್ಗದರ್ಶಿಯಾಗಿದೆ. ಇದು ದೇಹ ಮತ್ತು ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುವುದಲ್ಲದೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಹಿಳೆಯರಿಗೆ ಸುರಕ್ಷಿತ ಮತ್ತು ಆರಾಮದಾಯಕ ಹೆರಿಗೆಯಾಗಲು ಸಹಾಯ ಮಾಡುತ್ತದೆ. ಪ್ರಸವದ ಸಮಯದಲ್ಲಿ ವಿವಿಧ ಚಂಚಲತೆಗಳು ಇರಬಹುದಾದರೂ, ಆ ಎಲ್ಲಾ ಗೊಂದಲಗಳನ್ನು ತಪ್ಪಿಸುವುದು ಮತ್ತು ಉಸಿರಾಟದ ವ್ಯಾಯಾಮಗಳ ಮೇಲೆ ಕೇಂದ್ರೀಕರಿಸುವುದು ಮಹಿಳೆಯರಿಗೆ ಶಾಂತಿಯುತ, ನಿರಾಳ ಮನಸ್ಸನ್ನು ಹೊಂದಲು ಸಹಾಯ ಮಾಡುತ್ತದೆ.

ಈ ತಂತ್ರಗಳನ್ನು ಅನುಸರಿಸುವುದು ಮಹಿಳೆಯರ ಗರ್ಭಧಾರಣೆಯನ್ನು ಒತ್ತಡ ಮುಕ್ತ ಮತ್ತು ಶಾಂತಿಯುತ ಪ್ರಯಾಣಕ್ಕೆ ಬದಲಾಯಿಸುವ ಉತ್ತಮ ಮಾರ್ಗವಾಗಿದೆ. ಇದಕ್ಕೂ ಮಿಗಿಲಾಗಿ ಏನಾದರೂ ಅಗತ್ಯವಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:38 pm, Fri, 28 April 23