ಅಪಘಾತಗಳಲ್ಲಿ ಉಂಟಾಗುವ ಅಧಿಕ ರಕ್ತಸ್ರಾವ ನಿಲ್ಲಿಸಲು 2 ಘಟಕಗಳನ್ನು ಅಭಿವೃದ್ಧಿಪಡಿಸಿದ MIT ಸಂಶೋಧಕರು
ಯಾವುದೇ ಅಪಘಾತಗಳಲ್ಲಿ ಒಬ್ಬ ವ್ಯಕ್ತಿಯ ದೇಹದಿಂದ ಅಧಿಕ ಪ್ರಮಾಣದಲ್ಲಿ ರಕ್ತಸ್ರಾವವಾದರೆ ಆ ವ್ಯಕ್ತಿ ಸಾಯುವ ಅಪಾಯ ಹೆಚ್ಚಿರುತ್ತದೆ. ಹೀಗೆ ರಕ್ತಸ್ರಾವವಾಗುತ್ತಿದೆ ಎಂದಾಗ ಆ ದೇಹದ ರಕ್ತವನ್ನು ಹೆಪ್ಪುಗಟ್ಟುವಂತೆ ಮಾಡಿ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಕಾಪಾಡಲು ಸಹಾಯಕವಾಗುವ ಎರಡು ಘಟಕ ವಸ್ತುಗಳನ್ನು ಸಂಶೋಧಕರು ರೂಪಿಸಿದ್ದಾರೆ.
ರಸ್ತೆ ಅಪಘಾತಗಳಲ್ಲಿ ತೀವ್ರವಾದ ರಕ್ತಸ್ರಾವ ಉಂಟಾದರೆ, ಅಪಘಾತಕ್ಕೆ ಒಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವ ಮೊದಲೇ ಪ್ರಾಣವನ್ನು ಕಳೆದುಕೊಳ್ಳುವ ಅಪಾಯವಿದೆ. ಇದೇ ರೀತಿ ಅಪಘಾತದಲ್ಲಿ ತೀವ್ರವಾದ ರಕ್ತಸ್ರಾವ ಉಂಟಾಗಿ ಅದೆಷ್ಟೋ ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರ ಸಲುವಾಗಿ ಅಮೇರಿಕಾದ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಸಂಶೋಧಕರು ರಕ್ತ ಹೆಪ್ಪುಗಟ್ಟುವಿಕೆಯೆ ಸಂಶ್ಲೇಷಿತ ವ್ಯವಸ್ಥೆಯೊಂದನ್ನು ರಚಿಸಿದ್ದು, ಇದು ಗಂಭೀರ ಅಪಘಾತಗಳು ಸಂಭವಿಸಿದಾಗ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವುದಕ್ಕಿಂತಲೂ ಮುಂಚೆಯೇ ಉಂಟಾಗುವ ಅಧಿಕ ರಕ್ತಸ್ರಾವವನ್ನು ನಿಲ್ಲಿಸಿ, ಆ ವ್ಯಕ್ತಿಯ ಪ್ರಾಣವನ್ನು ಉಳಿಸಲು ಸಹಾಯಕವಾಗುತ್ತದೆ.
ಸಂಶೋಧಕರು ಅಪಘಾತದಲ್ಲಿ ತೀವ್ರವಾದ ರಕ್ತಸ್ರಾವವಾದ ಸಂದರ್ಭದಲ್ಲಿ ಗಾಯಗೊಂಡ ವ್ಯಕ್ತಿಯ ದೇಹಕ್ಕೆ ಚುಚ್ಚುಮದ್ದು ನೀಡಬಹುದಾದ ಎರಡು ಘಟಕ ವಸ್ತುಗಳನ್ನು ವಿನ್ಯಾಸಗೊಳಿಸಿದ್ದಾರೆ. ಮತ್ತು ಈ ಚುಚ್ಚುಮದ್ದು ಆಂತರಿಕ ಗಾಯದ ಸ್ಥಳಗಳಲ್ಲಿ ರಕ್ತಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ದೇಹವು ಸ್ವಾಭಾವಿಕವಾಗಿ ರಕ್ತಸ್ರಾವದ ಪ್ರದೇಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ರೂಪಿಸುವ ವಿಧಾನವನ್ನು ಅನುಸರಿಸುವ ಈ ಎರಡು ಘಟಕಗಳು, ತೀವ್ರವಾದ ಗಾಯಗಳಿಂದ ಬಳಲುತ್ತಿರುವ ಜನರನ್ನು ಆಸ್ಪತ್ರೆಗೆ ತಲುಪುವವರೆಗೆ ಯಾವುದೇ ರಕ್ತಸ್ರಾವವಾಗದೆ ಜೀವಂತವಾಗಿಡಲು ಸಹಾಯಕವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನೂ ಓದಿ:Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಏಕೆ ಮುಖ್ಯ, ಇಲ್ಲಿದೆ ಮಾಹಿತಿ
ಅಡ್ವಾನ್ಸ್ ಹೆಲ್ತ್ ಕೇರ್ ಮೆಟೀರಿಯಲ್ಸ್ ಜರ್ನಲ್ನಲ್ಲಿ (Journal of Advanced Healthcare Materials) ಪ್ರಕಟವಾದ ಈ ಅಧ್ಯಯನವು, ಅಪಘಾತಗಳಲ್ಲಿ ರಕ್ತಸ್ರಾವ ಸಂಭವಿಸಿದಾಗ ರಕ್ತವನ್ನು ಹೆಪ್ಪುಗಟ್ಟುವಂತೆ ಮಾಡಲು ನ್ಯಾನೊಪರ್ಟಿಕಲ್ (ನ್ಯಾನೊತಂತ್ರಜ್ಞಾನ) ಮತ್ತು ಪಾಲಿಮರ್ ಎಂಬ ಎರಡು ಘಟಕಗಳನ್ನು ಅಭಿವೃದ್ಧಿಪಡಿಸಿದೆ. ಇದು ಈ ಹಿಂದೆ ಅಭಿವೃದ್ಧಿಪಡಿಸಿದ್ದ ಹೆಮೋಸ್ಪಾಟಿಕ್ ನ್ಯಾನೊಪರ್ಟಿಕಲ್ ಗಳಿಗಿಂತ ಗಮನಾರ್ಹವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಿದೆ.
ಈ ಸಂಶೋಧನೆಯ ಫಲಿತಾಂಶಗಳಲ್ಲಿ ವಿಶೇಷವಾಗಿ ಗಮನಾರ್ಹವಾದದ್ದು, ‘ಪ್ರಾಣಿಗಳ ಮಾದರಿ ಪರೀಕ್ಷೆಯಲ್ಲಿ ನಾವು ನೋಡಿದ ಪ್ರಾಣಿಗಳು ತೀವ್ರ ಗಾಯದಿಂದ ಚೇತರಿಸಿಕೊಳ್ಳುವ ಮಟ್ಟವಾಗಿದೆ’ ಅನುಕ್ರಮದಲ್ಲಿ ನಾವು ಅಭಿವೃದ್ಧಿ ಪಡಿಸಿದ ಎರಡು ಘಟಕಗಳ ಮೂಲಕ ರಕ್ತಸ್ರಾವದ ಜಾಗದಲ್ಲಿ ಬಲವಾದ ಹೆಪ್ಪುಗಟ್ಟುವಿಕೆಯನ್ನು ಪಡೆಯಲು ಸಾಧ್ಯವಿದೆ ಎಂದು ಅಮೇರಿಕಾದ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಪ್ರೊಫೆಸರ್ ಹಾಗೂ ಈ ಸಂಶೋಧನೆಯ ಹಿರಿಯ ಲೇಖಕ ಪೌಲ್ ಹ್ಯಾಮಂಡ್ ಹೇಳಿದ್ದಾರೆ.
ಈ ಹಿಂದೆ ಅಭಿವೃದ್ಧಿಪಡಿಸಿದ್ದ ಹೆಮೋಸ್ಟಾಟಿಕ್ ವ್ಯವಸ್ಥೆಗಳಿಗಿಂತ ಈ ಹೊಸ ತಂತ್ರಜ್ಞಾನವು ಭಿನ್ನವಾಗಿದೆ. ಇದು ಪ್ಲೇಟ್ಲೆಟ್ ಕ್ರಿಯೆಗಳನ್ನು ಅನುಕರಿಸುತ್ತದೆ. ಮತ್ತು ರಕ್ತಹೆಪ್ಪುಗಟ್ಟುವಿಕೆಯನ್ನು ರೂಪಿಸುವ ಕೋಶಗಳು ಮತ್ತು ಫೈಬ್ರಿನೊಜೆನ್ ಹೆಪ್ಪುಗಟ್ಟುವಿಕೆಯನ್ನು ರೂಪಿಸಲು ಸಹಾಯ ಮಾಡುವ ಪ್ರೋಟಿನ್ಗಳನ್ನು ರೂಪಿಸುತ್ತದೆ. ಹೀಗಿದ್ದರೂ ಗಾಯಗೊಂಡ ವ್ಯಕ್ತಿ ಬಹಳಷ್ಟು ಪ್ರಮಾಣದಲ್ಲಿ ರಕ್ತವನ್ನು ಕಳೆದುಕೊಂಡರೆ ಅವರ ದೇಹವು ಹೆಪ್ಪುಗಟ್ಟುವಿಕೆಯನ್ನು ರೂಪಿಸಲು ಪ್ಲೇಟ್ಲೆಟ್ ಅಥವಾ ಫೈಬಿನೊಜೆನ್ ಹೊಂದಿರುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಸಂಶೋಧನಾ ತಂಡವು ಆ ಎರಡು ಹೆಪ್ಪುಗಟ್ಟುವಿಕೆಯ ಘಟಕಗಳನ್ನು ಬದಲಿಸುವ ಮೂಲಕ ಜನರ ಜೀವವನ್ನು ಉಳಿಸಲು ಸಹಾಯ ಮಾಡುವ ಕೃತಕ ವ್ಯಸಸ್ಥೆಯನ್ನು ಬಯಸಿದೆ ಎಂದು ಅವರು ಹೇಳಿದರು. ಅದನ್ನು ಸಾಧಿಸಲು ಸಂಶೋಧಕರು ಎರಡು ರೀತಿಯ ವಸ್ತುಗಳನ್ನು ಹೊಂದಿರುವ ವ್ಯವಸ್ಥೆಯನ್ನು ರಚಿಸಿದರು. ಅವುಗಳೆಂದರೆ ಫ್ಲೇಟ್ಲೆಟ್ಗಳನ್ನು ನೇಮಿಸುವ ನ್ಯಾನೊಪರ್ಟಿಕಲ್ ಮತ್ತು ಫೈಬ್ರಿಜೆನ್ನ್ನು ಅನುಕರಿಸುವ ಪಾಲಿಮರ್. ಪ್ಲೇಟ್ಲೇಟ್ ಕಣಗಳಿಗೆ ಸಂಶೋಧಕರು 2020ರ ಅಧ್ಯಯನದಲ್ಲಿ ವರದಿ ಮಾಡಿದ ಕಣಗಳನ್ನು ಬಳಸಿದ್ದಾರೆ. ಈ ಕಣಗಳು ಎಂಬ ಜೈವಿಕ ಹೊಂದಾಣಿಕೆಯ ಪಾಲಿಮರ್ ನಿಂದ ಮಾಡಲ್ಪಟ್ಟಿದೆ. ಇದು GRGDS ಎಂಬ ಪ್ಲೇಟ್ಲೆಟ್ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಎಂದು ಸಂಶೋಧಕರು ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ