ಶಾಲೆ ನಡೆಸಲಾಗದ್ದಷ್ಟು ಬಡವಾಯ್ತೆ ಸರ್ಕಾರ: ಮೈಶುಗರ್ ಶಾಲೆ ಕಾಂಗ್ರೆಸ್ ಮುಖಂಡನ ತೆಕ್ಕೆಗೆ?
ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಕಳೆದ ಬಿಜೆಪಿ ಸರ್ಕಾರದ ಉದ್ದೇಶಿಸಿತ್ತು.ಆದ್ರೆ ರೈತರ ಹೋರಾಟದ ಬಳಿಕ ಕೈಬಿಟ್ಟಿತ್ತು. ಇದೀಗ ಮೈಶುಗರ್ ಕಾರ್ಖಾನೆಯ ಇನ್ನೊಂದು ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಾಂಗ್ರೆಸ್ ಮುಖಂಡನಿಗೆ ಲೀಸ್ ಗೆ ನೀಡಲು ತೆರೆಮರೆಯ ಸರ್ಕಸ್ ನಡೆಯುತ್ತಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಮಂಡ್ಯ,(ಜೂನ್ 20): ಮೈಶುಗರ್ ಕಾರ್ಖಾನೆಯನ್ನು (Mandya Mysugar factory) ಅಭಿವೃದ್ಧಿಗೊಳಿಸಲು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಎಲ್ಲಾ ಸರ್ಕಾರಗಳು ಕೋಟ್ಯಾಂತರ ರೂಪಾಯಿ ಅನುದಾನವನ್ನು ನೀಡಿವೆ. ಕಳೆದ ಬಿಜೆಪಿ ಸರ್ಕಾರ ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಪ್ರಯತ್ನ ಪಟ್ಟಿತ್ತು. ಆಗ ರೈತ ಸಂಘಟನೆಗಳು, ಜೆಡಿಎಸ್ ನಾಯಕರು ಹೋರಾಟ ಮಾಡಿದ ಪರಿಣಾಮ ಈ ಪ್ರಯತ್ನ ವಿಫಲಾಗಿತ್ತು. ಇದಾದ ಬಳಿಕ ಇದೀಗ ಸಿದ್ದರಾಮಯ್ಯ ಸರ್ಕಾರ (Siddaramaiah Government) ಬಜೆಟ್‌ನಲ್ಲಿ ಹೊಸ ಮೈಶುಗರ್ ಕಾರ್ಖಾನೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ. ಇದರ ಬೆನ್ನೆಲ್ಲೇ ಮೈಶುಗರ್ ಆಸ್ತಿಯ ಪ್ರಮುಖ ಭಾಗವಾಗಿರುವ ಮೈಶುಗರ್ ಶಾಲೆಯನ್ನು (Mandya Mysugar school) ಕಾಂಗ್ರೆಸ್ ಮುಖಂಡನಿಗೆ ಲೀಸ್‌ಗೆ ನೀಡಲು ಆಡಳಿತ ಮಂಡಳಿ ತೆರೆಮರೆಯ ಸರ್ಕಸ್ ಮಾಡುತ್ತಿದೆ.
ಬೆಂಗಳೂರು ಮೈಸೂರು ಹಳೆ ಹೆದ್ದಾರಿಯಲ್ಲಿರುವ ಮಂಡ್ಯದ ಸ್ವರ್ಣಸಂದ್ರ ಬಡಾವಣೆಯಲ್ಲಿ 12 ಎಕರೆ ಪ್ರದೇಶದಲ್ಲಿ 1949ರಲ್ಲಿ ಮೈಶುಗರ್ ಶಾಲೆಯನ್ನು ಆರಂಭಿಸಲಾಗಿದೆ. ಇಲ್ಲಿ ಓದಿರುವ ನೂರಾರು ಮಂದಿ ಉನ್ನತ್ತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೀಗ ಈ ಶಾಲೆಯ ಆರ್ಥಿಕ ಹೊರೆಯ ನೆಪಹೊಡ್ಡಿ ಮೈಶುಗರ್ ಆಡಳಿತ ಮಂಡಳಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಎಂಎಲ್‌ಸಿ ಬಿ.ರಾಮಕೃಷ್ಣ ಮಾಲೀಕತ್ವದ ಕೀರ್ತನಾ ಟ್ರಸ್ಟ್‌ಗೆ ಗುತ್ತಿಗೆ ನೀಡಲು ನಿರ್ಧಾರ ಮಾಡಿದೆ.ಮೈಶುಗರ್ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಇದೀಗ ರೈತ ಸಂಘಟನೆಗಳು, ಹಳೆಯ ವಿದ್ಯಾರ್ಥಿಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಯಾವುದೇ ಕ್ಷಣದಲ್ಲಿ ಕೆಆರ್ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ: ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ
ಸದ್ಯ ಮೈಶುಗರ್ ಶಾಲೆ ಇರುವ 12 ಎಕರೆ ಪ್ರದೇಶ ನೂರಾರು ಕೋಟಿ ಬೆಲೆ ಬಾಳುತ್ತದೆ. ಹೀಗಾಗಿ ಈ ಆಸ್ತಿಯನ್ನು ಕಬಳಿಸುವ ನಿಟ್ಟಿನಲ್ಲಿ ಶಾಲೆಯನ್ನು ಗುತ್ತಿಗೆ ನೀಡುವ ಹುನ್ನಾರ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಮೈಶುಗರ್ ಶಾಲೆ ಖಾಸಗಿ ಅವರ ಪಾಲಾಗಬಾರದು. ಈ ಶಾಲೆ ಮೈಶುಗರ್ ಆಡಳಿತದಲ್ಲಿಯೇ ಇದ್ದು ಸಾವಿರಾರು ಬಡ ವಿದ್ಯಾರ್ಥಿಗಳಿವೆ ವಿದ್ಯಾ ದಾನ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿವೆ.
ಒಟ್ಟಾರೆ ಬಿಜೆಪಿ ಸರ್ಕಾರ ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ಲಾನ್ ಪ್ಲಾಪ್ ಆಗಿದೆ. ಇದೀಗ ಮೈಶುಗರ್ ಆಡಳಿತ ಮಂಡಳಿ ಮೈಶುಗರ್ ಕಾರ್ಖಾನೆಯನ್ನು ಗುತ್ತಿಗೆ ನೀಡುವ ವಿಚಾರಕ್ಕೆ ಬ್ರೇಕ್ ಬೀಳುತ್ತಾ ಅನ್ನೋದನ್ನು ಕಾದುನೋಡಬೇಕಿದೆ.



