AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಏಕೆ ಮುಖ್ಯ, ಇಲ್ಲಿದೆ ಮಾಹಿತಿ

ಮಾನಸಿಕ ಆರೋಗ್ಯ(Mental Health)ವೊಂದು ಉತ್ತಮವಾಗಿದ್ದರೆ ನೀವು ಜೀವನದಲ್ಲಿ ಎಂತಹ ಕೆಟ್ಟ ಪರಿಸ್ಥಿತಿಯನ್ನು ಬೇಕಾದರೂ ಎದುರಿಸುವ ಛಲ ನಿಮಗೆ ಬರುತ್ತದೆ.

Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಏಕೆ ಮುಖ್ಯ, ಇಲ್ಲಿದೆ ಮಾಹಿತಿ
ಮಾನಸಿಕ ಆರೋಗ್ಯImage Credit source: Times Of India
ನಯನಾ ರಾಜೀವ್
|

Updated on: Apr 28, 2023 | 9:30 AM

Share

ಮಾನಸಿಕ ಆರೋಗ್ಯ(Mental Health)ವೊಂದು ಉತ್ತಮವಾಗಿದ್ದರೆ ನೀವು ಜೀವನದಲ್ಲಿ ಎಂತಹ ಕೆಟ್ಟ ಪರಿಸ್ಥಿತಿಯನ್ನು ಬೇಕಾದರೂ ಎದುರಿಸುವ ಛಲ ನಿಮಗೆ ಬರುತ್ತದೆ. ಮಾನಸಿಕ ಆರೋಗ್ಯಕ್ಕೂ ನಿಮ್ಮ ದೈಹಿಕ ಆರೋಗ್ಯಕ್ಕೂ ಸಂಬಂಧವಿದೆ, ದೈಹಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಉತ್ತಮ ಆಹಾರದ ಆಯ್ಕೆಯನ್ನು ನೀವು ಮಾಡಬಹುದು, ಆದರೆ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಅಷ್ಟು ಸುಲಭವಲ್ಲ.

ನಿಮ್ಮ ದೇಹ ಮನಸ್ಸು ಪ್ರತ್ಯೇಕವಲ್ಲ ನಮ್ಮ ದೇಹ ಮತ್ತು ಮನಸ್ಸು ಪ್ರತ್ಯೇಕವಲ್ಲ, ಮನಸ್ಸಿನ ಮೂಲ ದೇಹದ ಒಂದು ಭಾಗವಾದ ಮೆದುಳು. ಪಾದದಲ್ಲಿ ಉಗುರಿಗೆ ಗಾಯವಾದರೂ ಮೆದುಳು ಮಾತ್ರ ಅದನ್ನು ಅನುಭವಿಸುತ್ತದೆ. ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಮೊದಲ ಸೂತ್ರ. ಸಮತೋಲಿತ ಆಹಾರ, ವ್ಯಾಯಾಮ, ಯೋಗ ಮತ್ತು ನಿದ್ರೆ ಮತ್ತು ಏಳುವ ಕ್ರಮಬದ್ಧತೆ ದೇಹ ಮತ್ತು ಮನಸ್ಸು ಎರಡಕ್ಕೂ ಅವಶ್ಯಕ.

ಸಂಭಾಷಣೆ ಈ ಜಗತ್ತಿನಲ್ಲಿ ನೀವು ಒಬ್ಬಂಟಿಯಾಗಿಲ್ಲ. ಕೋಟಿಗಟ್ಟಲೆ ಜನರಿದ್ದಾರೆ, ಅವರ ನಡುವೆಯೇ ಬದುಕಬೇಕು. ಅವರೆಲ್ಲರ ಜೊತೆ ಸಂವಹನ ನಡೆಸದೇ ಇದ್ದರೆ, ನಿಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳದಿದ್ದರೆ, ಸ್ನೇಹವನ್ನು ಇಟ್ಟುಕೊಳ್ಳದಿದ್ದರೆ ಸಂತೋಷವು ನಿಮ್ಮಿಂದ ದೂರ ಉಳಿಯುತ್ತದೆ. ಸಂಭಾಷಣೆಯಿಂದ ತಪ್ಪು ತಿಳಿವಳಿಕೆಯನ್ನು ತೆಗೆದುಹಾಕಬಹುದು.

ಮತ್ತಷ್ಟು ಓದಿ: Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಉತ್ತಮ ಸಲಹೆ

ಕೆಲಸದಲ್ಲಿ ಕ್ರಿಯಾಶೀಲತೆ ಮತ್ತು ಉತ್ಪಾದಕತೆ ನೀವು ಕ್ರಿಯಾಶೀಲರಾಗಿದ್ದರೆ, ನಿಮ್ಮ ಆತ್ಮವಿಶ್ವಾಸ ಇರುತ್ತದೆ. ಆಲೂಗಡ್ಡೆ ಬೆಳೆಯುವುದು ಮತ್ತು ಕಲಿಸುವುದು ಅಥವಾ ಚಿಕ್ಕ ಮಕ್ಕಳೊಂದಿಗೆ ಸಮಯ ಕಳೆಯುವುದು ಮುಂತಾದವುಗಳು ಮುಖ್ಯವಾಗುತ್ತದೆ.

ಪ್ರಕೃತಿಯ ಒಡನಾಡಿ ಪ್ರಕೃತಿಯಿಂದ ದೂರವಾಗಿ ಕಾಂಕ್ರೀಟ್ ಕಾಡಿನಲ್ಲಿ ವಾಸಿಸುವವರಿಗೆ ಮಾನಸಿಕ ಅಸ್ವಸ್ಥತೆಯ ಪ್ರಮಾಣ ಹೆಚ್ಚಾಗಿರುತ್ತದೆ. ನೀವು ಪ್ರಕೃತಿಗೆ ಹತ್ತಿರವಾಗಿದ್ದರೆ ನೀವು ಹೆಚ್ಚು ಶಾಂತಿ ಮತ್ತು ಸಂತೋಷವನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ