Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗಲು ಒತ್ತಡವಿದೆಯೇ? ಇದು ನಿಮ್ಮ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಕೊಳ್ಳಿ

ಮದುವೆಯಾಗಲು ಒತ್ತಡ ಹೇರುವ ಪ್ರತೀ ಪೋಷಕರು ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ. ಮದುವೆಯಾಗಲು ಸದಾ ನಿಮ್ಮ ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದರೆ ಅದು ನಿಮ್ಮ ಮಕ್ಕಳ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಕೊಳ್ಳಿ.

ಮದುವೆಯಾಗಲು ಒತ್ತಡವಿದೆಯೇ? ಇದು ನಿಮ್ಮ  ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಕೊಳ್ಳಿ
ಮದುವೆಯ ಒತ್ತಡ
Follow us
ಅಕ್ಷತಾ ವರ್ಕಾಡಿ
|

Updated on: Mar 30, 2023 | 10:50 AM

ಹೆಣ್ಣು 20 ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಮನೆಯಲ್ಲಿ ಮದುವೆ ಮಾತುಕತೆ ಪ್ರತೀ ದಿನ ಚರ್ಚೆಯಾಗುತ್ತಿರುತ್ತದೆ. ಇನ್ನೇನ್ನು ತನ್ನ ಕಾಲೇಜು ಜೀವನ ಮುಗಿಸಿ, ವೃತ್ತಿಪರ ಜೀವನದ ಕನಸು ಹೊತ್ತ ಹೆಣ್ಣಿಗೆ ತನ್ನ ಮನೆಯಿಂದಲೇ ಸಾಕಷ್ಟು ಮದುವೆಯ ಒತ್ತಡವಿರುತ್ತದೆ. ಆದರೆ ಮದುವೆಯಾಗಲು ಒತ್ತಡ ಹೇರುವ ಪ್ರತೀ ಪೋಷಕರು ತಿಳಿದುಕೊಳ್ಳಬೇಕಾದ ವಿಷಯ ಇಲ್ಲಿದೆ. ಮದುವೆಯಾಗಲು ಸದಾ ನಿಮ್ಮ ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದರೆ ಅದು ನಿಮ್ಮ ಮಕ್ಕಳ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಕೊಳ್ಳಿ.

ಮದುವೆಯ ಒತ್ತಡ ಬರೀ ಹೆಣ್ಣಿಗೆ ಮಾತ್ರ ಸಂಬಂಧಿಸಿದಲ್ಲ ಬದಲಾಗಿ ಗಂಡಿನ ಮೇಲೆಯೂ ಸಾಕಷ್ಟು ಪರಿಣಾಮ ಬೀರುತ್ತದೆ. ಹೌದು ಇನ್ನೇನು ಇರುವ ಕೆಲಸವನ್ನು ಭದ್ರಪಡಿಸಿಕೊಂಡು, ಕೈ ತುಂಬಾ ಸಂಬಳ ಸಿಗಬೇಕೆನ್ನುವ ಕನಸುಗಳನ್ನು ಕಾಣುತ್ತಾ ಇರುವಾಗಲೇ ಗಂಡಿಗೂ ಮದುವೆಯ ಒತ್ತಡ ಹೇರಿ ಇಡೀ ಕುಟುಂಬದ ಜವಬ್ದಾರಿಯನ್ನು ಆತನ ಮೇಲೆ ಹೇರುವುದುಂಟು. ಇದ್ದಕ್ಕಿದ್ದಂತೆ, ನಿಮ್ಮ ಸ್ನೇಹಿತರೆಲ್ಲರೂ ಮದುವೆಯಾಗುತ್ತಿದ್ದಾರೆ. ನೀವು ಎಂದಿಗೂ ಮಾತನಾಡದ ಸಂಬಂಧಿಕರು ನೀವು ಯಾವಾಗ ಮದುವೆಯಾಗುತ್ತಿ? ಎಂದು ಪ್ರಶ್ನೆ ಮಾಡಿದಾಗ ಸಾಕಷ್ಟು ಕಿರಿ ಕಿರಿ ಮಾಡುವುದಂತೂ ಸಹಜ.

ಮದುವೆಯಾಗುವ ಒತ್ತಡವು ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಮನೋವಿಜ್ಞಾನ ಶಾಸ್ತ್ರಜ್ಞರಾದ ದಿವ್ಯಾ ಪಾಠಕ್ ಅವರ ಪ್ರಕಾರ, ಮದುವೆಯ ಒತ್ತಡವು ವ್ಯಕ್ತಿಯನ್ನು ವಿವಿಧ ಕಠಿಣ ಭಾವನೆಗಳನ್ನು ಅನುಭವಿಸುವಂತೆ ಮಾಡುತ್ತದೆ. ಇದಲ್ಲದೇ ವ್ಯಕ್ತಿ ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಸಾಮಾಜಿಕ ಆತಂಕ:

ನೀವು ಯಾವುದೇ ಕುಟುಂಬದ ಕಾರ್ಯಕ್ರಮ ಅಥವಾ ಸಮಾರಂಭಕ್ಕೆ ಹೋಗುತ್ತಿರುವಿರಿ ಎಂದು ಕಲ್ಪಿಸಿಕೊಳ್ಳಿ. ನೀವು ನೋಡುತ್ತಿರುವುದು ನಿಮ್ಮ ವಯಸ್ಸಿನ ಜನರು ಮದುವೆಯಾಗುತ್ತಿರುವವರು, ಮದುವೆಯಾಗಲು ಸಿದ್ಧರಾಗಿರುವುದು ಅಥವಾ ಅವರ ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾರೆ. ಇದಲ್ಲದೇ ಮದುವೆ ಆಗುವಂತೆ ಒತ್ತಾಯಿಸುವುದು ಇವೆಲ್ಲವೂಗಳಿಂದಾಗಿ ನೀವು ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳಿಗೂ ಹೋಗಬಾರದು ಎಂದು ನಿರ್ಧರಿಸುವಂತೆ ಮಾಡುತ್ತದೆ.

ಖಿನ್ನತೆ:

ಮದುವೆಯಾಗಲು ಒತ್ತಡ ಬಂದಾಗ ದುಃಖ ಮತ್ತು ಹತಾಶತೆಯ ಕೆಲವು ಭಾವನೆಗಳನ್ನು ಪ್ರಚೋದಿಸಬಹುದು. ವಿಶೇಷವಾಗಿ ವ್ಯಕ್ತಿಯು ಸಂಗಾತಿಯನ್ನು ಹುಡುಕುವಲ್ಲಿ ಅಥವಾ ಅವರ ಗುರಿಗಳನ್ನು ಸಾಧಿಸುವಲ್ಲಿ ವಿಫಲವಾದೆ ಎಂದು ಭಾವಿಸಿದರೆ, ಆಪ್ತರಿಂದ ಕಾಳಜಿಯ ಹೆಸರಿನಲ್ಲಿ ಸಾಮಾಜಿಕ ಅವಮಾನವು ನಿರಾಶಾದಾಯಕವಾಗಿರುತ್ತದೆ ಮತ್ತು ಖಿನ್ನತೆಗೆ ಕಾರಣವಾಗುತ್ತದೆ ಎಂದು ಪಾಠಕ್ ಹೇಳುತ್ತಾರೆ.

ಇದನ್ನೂ ಓದಿ: ದೂರವಾದ ಸಂಬಂಧವನ್ನು ಸುಧಾರಿಸುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

ಮದುವೆಯ ಒತ್ತಡವನ್ನು ಹೇಗೆ ನಿಭಾಯಿಸುವುದು?

ಕುಟುಂಬ ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ:

ಪದೇ ಪದೇ ನಿಮ್ಮ ಮೇಲೆ ಮದುವೆಯ ಒತ್ತಡ ಹೇರುವ ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಮುಕ್ತವಾಗಿ ಮಾತಾಡಿ. ಮದುವೆಯ ಮಾತು ಬಂದ ಕೂಡಲೇ ಆದಷ್ಟು ನನ್ನ ವೈಯಕ್ತಿಕ ವಿಷಯದಿಂದ ದೂರವಿರಿ ಎಂದು ಹೇಳಿಬಿಡಿ.

ನಿಮ್ಮ ಜೀವನದ ಆಯ್ಕೆಗಳಲ್ಲಿ ವಿಶ್ವಾಸವಿರಲಿ:

ನಿಮ್ಮ ಜೀವನದಲ್ಲಿ ನೀವು ಯಾವುದೇ ಆಯ್ಕೆಗಳನ್ನು ಮಾಡುತ್ತಿದ್ದೀರಿ, ಅದು ಮದುವೆಗೆ ಸಂಬಂಧಿಸಿರಬಹುದು ಅಥವಾ ಇಲ್ಲದಿರಬಹುದು, ಒತ್ತಡದಿಂದಾಗಿ ಅವುಗಳನ್ನು ಅನುಮಾನಿಸಬೇಡಿ. “ಜೀವನದ ಆಯ್ಕೆಗಳನ್ನು ಜೊತೆಗೆ, ನಿಮ್ಮ ವೃತ್ತಿಜೀವನಕ್ಕೆ ಆದ್ಯತೆ ನೀಡಿ, ನಿಮ್ಮೊಂದಿಗೆ ಅಥವಾ ಇತರ ಸಂಬಂಧಗಳೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ ಎಂದು ದಿವ್ಯಾ ಪಾಠಕ್ ಸಲಹೆ ನೀಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್