Relationship: ದೂರವಾದ ಸಂಬಂಧವನ್ನು ಸುಧಾರಿಸುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

ಕೆಲವೊಮ್ಮೆ ವಿಭಿನ್ನ ಮನಸ್ಥಿತಿಗಳ ಕಾರಣದಿಂದಾಗಿ ಸಂಗಾತಿಗಳ ನಡುವೆ ಮನಸ್ಥಾಪಗಳು ಎದುರಾಗಿ ದೂರವಾಗುತ್ತಾರೆ. ಅಂತಹ ದೂರವಾದ ಪ್ರೇಮ ಸಂಬಂಧವನ್ನು ಮರಳಿ ಪಡೆಯುವ ಕ್ರಮಗಳ ಕುರಿತ ಮಾಹಿತಿ ಇಲ್ಲಿವೆ.

Relationship: ದೂರವಾದ ಸಂಬಂಧವನ್ನು ಸುಧಾರಿಸುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 29, 2023 | 6:35 PM

ಕೆಲವೊಮ್ಮೆ ಸಂಗಾತಿಯ ಜೊತೆಗಿನ ಮನಸ್ತಾಪ, ಸಣ್ಣಪುಟ್ಟ ಜಗಳಗಳ ಕಾರಣದಿಂದಾಗಿ ಫೋನ್ ಕಾಲ್, ಮೆಸೇಜ್ ಮಾಡದೇ, ಮುಖಾಮುಖಿ ಭೇಟಿಯಾಗಿ ಮಾತನಾಡದೇ ದೂರವಿರುತ್ತೇವೆ. ಅದು ನಾವು ನಮ್ಮ ಸಂಗಾತಿಯಿಂದ ದೂರವಾಗಿದ್ದೇವೆಯೋ ಅಥವಾ ಸಂಬಂಧ ಮುರಿದು ಬೀಳುತ್ತದೆಯೋ ಎಂಬ ಭಾನವೆಯನ್ನು ಉಂಟುಮಾಡಬಹುದು. ಅಂತಹ ಸಂದರ್ಭಗಳಲ್ಲಿ ಕೋಪವನ್ನು ಪಕ್ಕಕ್ಕಿಟ್ಟು, ಸಂಬಂಧದಲ್ಲಿ ಆದ ತಪ್ಪುಗಳನ್ನು ಸರಿಪಡಿಸಿ ಅನ್ಯೋನ್ಯತೆಯಿಂದ ಬಾಳ್ವೆ ನಡೆಸುವುದು ಮುಖ್ಯವಾಗಿರುತ್ತದೆ. ದೂರವಾದ ಸಂಬಂಧಗಳನ್ನು ಸುಧಾರಿಸುವ ಕ್ರಮಗಳು ಇಲ್ಲಿವೆ.

ಪ್ರತ್ಯೇಕತೆಯ ಕಾರಣವನ್ನು ಪ್ರತಿಬಿಂಬಿಸಿ: ಸಂಬಂಧದಲ್ಲಿ ಜಗಳ ಅಥವಾ ಮನಸ್ತಾಪದ ಕಾರಣಗಳಿಂದ ಪ್ರತ್ಯೇಕವಾಗಿರುತ್ತೀರಾ. ಅಂತಹ ಸಂದರ್ಭದಲ್ಲಿ ಆ ಮನಸ್ತಾಪಕ್ಕೆ ಕಾರಣ ಏನೆಂಬುವುದನ್ನು ಗುರುತಿಸಿ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಬರೀ ನಿಮ್ಮ ದೃಷ್ಟಿಕೋನದಲ್ಲಿ ಮಾತ್ರ ಯೋಚಿಸದೆ, ನಿಮ್ಮ ಸಂಗಾತಿಯ ದೃಷ್ಟಿಕೋನದಿಂದಲೂ ಯೋಚಿಸುತ್ತಾ, ನೀವು ಜಗಳವಾಡಿ ದೂರವಾದ ತಪ್ಪಿಗೆ ಕ್ಷಮೆಯನ್ನು ಕೇಳಿ. ಆಗ ಅನ್ಯೋನ್ಯತೆಯಿಂದ ಇರಬಹುದು.

ಸಂಪರ್ಕಿಸಿ: ಏನೋ ಒಂದು ಕಾರಣದಿಂದ ದೂರವಾಗಿ ಸಂಗಾತಿಯ ಜೊತೆಗೆ ಮಾತುಕತೆ ಮತ್ತು ಸಂಪರ್ಕವನ್ನು ಕಡಿತಗೊಳಿಸಿರುತ್ತೀರಾ. ಹಾಗೂ ಒಮ್ಮೆ ನೀವು ಪರಿಸ್ಥಿತಿಯನ್ನು ಜಾನ್ಮೆಯಿಂದ ಚೆನ್ನಾಗಿ ಅರ್ಥಮಾಡಿಕೊಂಡರೆ, ಸಂಗಾತಿಯನ್ನು ಸಂಪರ್ಕಿಸಲು ಪ್ರಯತ್ನಿಸಿ. ಫೋನ್ ಕರೆ ಅಥವಾ ಮುಖಾಮುಖಿ ಭೇಟಿಯಾಗಿ ಮಾತನಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿ, ಸಂಬಂಧವನ್ನು ಉಳಿಸಿಕೊಳ್ಳಬಹುದು. ಹಾಗೂ ಮಾಡಿರುವ ತಪ್ಪಿಗೆ ಒಬ್ಬರಿಗೊಬ್ಬರು ಕ್ಷಮೆಯಾಚಿಸಬಹುದು.

ಸಕ್ರಿಯವಾಗಿ ಆಲಿಸಿ: ನೀವು ಒಮ್ಮೆ ಸಂಗಾತಿಯನ್ನು ಮುಖಾಮುಖಿ ಭೇಟಿಯಾದ ನಂತರ ಅವರು ಏನು ಹೇಳುತ್ತಾರೆ ಎಂಬ ಅವರ ಮಾತುಗಳನ್ನು ಸಕ್ರಿಯವಾಗಿ ಕೇಳಿ. ನೀವು ಅವರ ಮೇಲೆ ಕೂಗಾಡದೆ, ಅಥವಾ ಮಾತನಾಡಲು ಅವಕಾಶ ನೀಡುವ ಮೂಲಕ ಅವರಿಗೂ ಅವರ ಭಾವನೆ ಹಾಗೂ ಕಾಳಜಿಯನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ. ಮತ್ತು ಅವರ ಮೇಲೆ ಕೋಪ ಮಾಡದೆ ಪ್ರೀತಿ ತೋರುವ ಮೂಲಕ ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಇದನ್ನೂ ಓದಿ: Relationship: ದಾಂಪತ್ಯ ಸಂಬಂಧದಲ್ಲಿ ನೀವು ಕಲಿಯಬೇಕಾದ ಸತ್ಯಗಳು ಇಲ್ಲಿದೆ

ಜೊತೆಯಾಗಿ ಪರಿಹಾರಗಳನ್ನು ಕಂಡುಕೊಳ್ಳಿ: ಇಬ್ಬರ ದೃಷ್ಟಿಕೋನವನ್ನು ಹಂಚಿಕೊಳ್ಳುವ ಮೂಲಕ, ಸಮಸ್ಯೆಯ ಮೂಲ ಕಾರಣ ಏನೆಂಬುವುದನ್ನು ಅರಿತು, ಸಂಬಂಧವನ್ನು ಸುಧಾರಿಸಲು ಸಹಾಯ ಮಾಡುವ ಪರಿಹಾರಗಳನ್ನು ಹುಡುಹಲು ಜೊತೆಯಾಗಿ ಕೆಲಸ ಮಾಡಿ. ಈ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಇನ್ನೂ ಹೆಚ್ಚಾಗಿ ಅರ್ಥ ಮಾಡಿಕೊಳ್ಳಬಹುದು.

ತಾಳ್ಮೆಯಿಂದಿರಿ: ಸಂಬಂಧವನ್ನು ಪುನರ್‌ನಿರ್ಮಿಸಲು ಸಮಯ ಮತ್ತು ಶ್ರಮ ಬೇಕಾಗುತ್ತದೆ. ಇದಕ್ಕಾಗಿ ತಾಳ್ಮೆಯಿಂದ ಇರುವುದು ತುಂಬಾ ಮುಖ್ಯವಾಗಿರುತ್ತದೆ. ಮತ್ತು ಸಕ್ರಿಯವಾಗಿ ಸಂಗಾತಿಯ ಜೊತೆ ಸಂವಹನ ನಡೆಸುವ ಮೂಲಕ ಸಂಬಮದವನ್ನು ಸುಧಾರಿಸಿಕೊಳ್ಳಬಹುದು. ಪರಸ್ಪರ ಅರ್ಥಮಾಡಿಕೊಂಡು ಮುನ್ನಡೆಯುವ ಮೂಲಕ ಧನಾತ್ಮಕ ಮತ್ತು ಆರೋಗ್ಯಕರ ಸಂಬಂಧವನ್ನು ಬೆಳೆಸಬಹುದು.

Published On - 6:35 pm, Wed, 29 March 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ