Relationship: ದಾಂಪತ್ಯ ಸಂಬಂಧದಲ್ಲಿ ನೀವು ಕಲಿಯಬೇಕಾದ ಸತ್ಯಗಳು ಇಲ್ಲಿದೆ
ಸಂತೋಷದಾಯಕ ಮತ್ತು ಆರೋಗ್ಯಕರ ಸಂಬಂಧವನ್ನು ಹೊಂದಲು ಈ ಕೆಲವು ಸತ್ಯಗಳನ್ನು ತಿಳಿಯಬೇಕೆಂದು ತಜ್ಞರು ಸಲಹೆ ನೀಡುತ್ತಾರೆ.
ಸಂಬಂಧಗಳಲ್ಲಿ ಪ್ರಾಮಾಣಿಕತೆ ಎನ್ನುವಂತಹದ್ದು ತುಂಬಾನೇ ಮುಖ್ಯ. ಪ್ರೀತಿ, ದಾಂಪತ್ಯ ಯಾವುದೇ ಸಂಬಂಧವಾಗಿರಲಿ ಅದು ಶಾಶ್ವತವಾಗಿ ಉಳಿಯಬೇಕೆಂದರೆ ಪ್ರಾಮಾಣಿಕತೆ ಎನ್ನುವಂತಹದ್ದು ತುಂಬಾನೇ ಮುಖ್ಯವಾಗಿರುತ್ತದೆ. ಸಂಗಾತಿಗಳಿಬ್ಬರ ಮಧ್ಯೆ ಯಾವುದೇ ರೀತಿಯ ಮುಚ್ಚು ಮರೆಗಳು ಇರಬಾರದು. ಈ ರೀತಿಯ ಮುಚ್ಚುಮರೆ ಅಥವಾ ಅನುಮಾನಗಳಿದ್ದರೆ ಸಂಬಂಧವು ಕೆಡುತ್ತದೆ. ಆದ್ದರಿಂದ ಆರೋಗ್ಯಕರ ಸಂಬಂಧವನ್ನು ಹೊಂದಲು ಪ್ರೀತಿ, ನಂಬಿಕೆ, ಪ್ರಾಮಾಣಿಕತೆ ಮುಖ್ಯವಾಗಿರುತ್ತದೆ. ಸಂತೋಷದಾಯಕ ಮತ್ತು ಆರೋಗ್ಯಕರ ಸಂಬಂಧವನ್ನು ಹೊಂದಲು ಈ ಕೆಲವು ಸತ್ಯಗಳನ್ನು ತಿಳಿಯಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಇದನ್ನು ಉದ್ದೇಶಿಸಿ ಸೈಕೋಥೆರಪಿಸ್ಟ್ ಎಮಿಲಿ ಹೆಚ್ ಸ್ಯಾಂಡರ್ಸ್ ನಾವು ನಿಜವೆಂದು ನಂಬುವ ಸಂಬಂಧಗಳ ಬಗ್ಗೆ ನಾಲ್ಕು ಸತ್ಯಗಳನ್ನು ಹಂಚಿಕೊಂಡಿದ್ದಾರೆ.
ನಾವು ಕಲಿಯಬೇಕಾದ ಸಂಬಂಧಗಳ ಸತ್ಯಗಳು:
ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಿ: ಪ್ರತಿ ಸಂಬಂಧದಲ್ಲೂ ಪ್ರಾಮಾಣಿಕತೆಯು ಮುಖ್ಯವಾಗಿದೆ. ನಾವು ನಮ್ಮ ಸಂಗಾತಿಯೊಂದಿಗೆ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಬೇಕು. ಯಾವುದೇ ವಿಷಯಗಳನ್ನು ಮುಚ್ಚಿಟ್ಟುಕೊಳ್ಳಬಾರದು. ನಾವು ಈ ಮೊದಲು ಹೇಳದೇ ಇರುವಂತಹ ವಿಷಯಗಳು ಅಥವಾ ಸತ್ಯಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವ ರೀತಿಯಲ್ಲಿ ಸಹಾನುಭೂತಿ ಇರಬೇಕು. ಸಂಗಾತಿಗೆ ನೋವಾಗದಂತೆ ಪ್ರಾಮಾಣಿಕವಾಗಿ ವಿಷಯಗಳನ್ನು ಹಂಚಿಕೊಳ್ಳಲು ಕಲಿಯಬೇಕು.
ಶೂನ್ಯ ಸಂಘರ್ಷ ಒಳ್ಳೆಯದು: ಸಂಬಂಧದಲ್ಲಿ ಕೊಂಚ ಜಗಳ ಮತ್ತು ಭಿನ್ನಾಭಿಪ್ರಾಯಗಳನ್ನು ಹೊಂದುವುದು ಉತ್ತಮ ಸಂಕೇತವಾಗಿದೆ. ಇದು ಸಂಗಾತಿಗಳಿಬ್ಬರ ಅಭಿಪ್ರಾಯ, ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಮೂಲಕ ಸಂಬಂಧದಲ್ಲಿ ಹೊಂದಾಣಿಕೆಯನ್ನು ಸಾಧಿಸಬಹುದು.
ಇದನ್ನೂ ಓದಿ: Relationship: ಸವಾಲುಗಳ ಮಧ್ಯೆ ಸಂಬಂಧಗಳನ್ನು ಉಳಿಸಿಕೊಳ್ಳುವುದು ಹೇಗೆ?
ಪ್ರೀತಿಯು ಭಾವೋದ್ರಿಕ್ತವಾಗಿರಬೇಕು: ಸಂಬಂಧದಲ್ಲಿ ಅನ್ಯೋನ್ಯತೆ ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ. ಎಷ್ಟೇ ಭಿನ್ನಾಭಿಪ್ರಾಯಗಳು ಉಂಟಾದರೂ, ಅವೆಲ್ಲವನ್ನು ಸರಿದೂಗಿಸಿಕೊಂಡು ನಂಬಿಕೆಯಿಂದ ಜೀವನ ನಡೆಸಿಕೊಂಡು ಹೋಗಬೇಕು. ಯಾವತ್ತೂ ಯಾವುದೇ ಸಂಬಂಧದಲ್ಲಿ ವ್ಯಾಮೋಹ ಇರಬಾರದು ಬದಲಾಗಿ ನಿಶ್ಕಲ್ಮಷ ಪ್ರೀತಿ ಇರಬೇಕು. ಆಗ ಸಂಬಂಧವು ಶಾಶ್ವತವಾಗಿರುತ್ತದೆ.
ಕ್ಷಮೆಯಾಚಿಸುವುದು: ಕ್ಷಮೆ ಕೆಳುವಂತಹದ್ದು ನಮ್ಮನ್ನು ಸಣ್ಣವರನ್ನಾಗಿ ಮಾಡುವುದಿಲ್ಲ. ಸಣ್ಣಪುಟ್ಟ ಜಗಳವಾದಂತಹ ಸಂದರ್ಭದಲ್ಲಿ ಸಂಬಂಧವನ್ನು ಉಳಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಬಂದು ಸಂಗಾತಿಯ ಬಳಿ ಕ್ಷಮೆ ಕೇಳಬಹುದು. ಇದರಿಂದ ಸಂಬಂಧ ಗಟ್ಟಿಯಾಗುತ್ತದೆಯೇ ವಿನಃ, ಮುರಿದು ಬೀಳುವುದಿಲ್ಲ.
Published On - 6:00 pm, Wed, 29 March 23