AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Donkey Milk: ಕತ್ತೆ ಹಾಲಿನ ಆರೋಗ್ಯ ಪ್ರಯೋಜಗಳು ಹಾಗೂ ದುಷ್ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ

ಹಸು, ಆಡು, ಕುರಿ, ಎಮ್ಮೆ ಮತ್ತು ಒಂಟೆಗಳಂತಹ ಇತರ ಡೈರಿ ಪ್ರಾಣಿಗಳ ಹಾಲಿಗೆ ಹೋಲಿಸಿದರೆ, ಕತ್ತೆಯ ಹಾಲು ಮಾನವನ ಎದೆ ಹಾಲನ್ನು ಹೋಲುತ್ತದೆ.

Donkey Milk: ಕತ್ತೆ ಹಾಲಿನ ಆರೋಗ್ಯ ಪ್ರಯೋಜಗಳು ಹಾಗೂ ದುಷ್ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ
ಕತ್ತೆ ಹಾಲುImage Credit source: Wikipedia
TV9 Web
| Edited By: |

Updated on:Mar 30, 2023 | 10:07 AM

Share

ಮುಖ್ಯಾಂಶಗಳು

  • ಕತ್ತೆ ಹಾಲಿನಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೇರಳವಾಗಿದ್ದು, ಆಫ್ರಿಕಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಇದನ್ನು ಕೆಮ್ಮು ಹಾಗೂ ಇತರ ಸಾಂಕ್ರಮಿಕ ಸೋಂಕುಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.
  • ಹಸುಗಳು, ಆಡುಗಳು, ಕುರಿಗಳು, ಎಮ್ಮೆಗಳು ಮತ್ತು ಒಂಟೆಗಳಂತಹ ಇತರ ಡೈರಿ ಪ್ರಾಣಿಗಳ ಹಾಲಿಗೆ ಹೋಲಿಸಿದರೆ, ಕತ್ತೆ ಹಾಲು ಮಾನವನ ಎದೆ ಹಾಲನ್ನು ಹೋಲುತ್ತದೆ. ಆದ್ದರಿಂದ ಇದನ್ನು 19ನೇ ಶತಮಾನದಲ್ಲಿ ಅನಾಥ ಶಿಶುಗಳಿಗೆ ತಾಯಿಯ ಎದೆಹಾಲಿನ ರೂಪದಲ್ಲಿ ನೀಡಲಾಗುತ್ತಿತ್ತು ಎಂದು ಹೆಲ್ತ್​​ ಲೈನ್​​​ ಡಾಟ್​​​ ಕಾಮ್​​​ನಲ್ಲಿ ಪ್ರಕಟವಾದ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
  • ಕತ್ತೆ ಹಾಲಿನ ಒಂದು ದೊಡ್ಡ ಅನಾನುಕೂಲವೆಂದರೆ ಇದು ಸಾಕಷ್ಟು ದುಬಾರಿಯಾಗಿದೆ. ಇದಲ್ಲದೇ ಈ ಹಾಲು ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿರುವುದರಿಂದ, ಹಾಲನ್ನು ಬಯಸಿದರೆ ಮಾರುಕಟ್ಟೆಯಲ್ಲಿ ಪೌಡರ್​​ ರೂಪದಲ್ಲಿ ಖರೀದಿಸಬಹುದು. ಆದರೆ ಈ ಪೌಡರ್​​ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಇತ್ತೀಚಿನ ದಿನಗಳಲ್ಲಿ ಕತ್ತೆ ಹಾಲು, ಹಾಲಿನ ಮಾರುಕಟ್ಟೆಯಲ್ಲಿ ವಿಶೇಷವಾಗಿ ಆನ್ಲೈನ್​​​ನಲ್ಲಿ ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ. ಕತ್ತೆಗಳು ಈಕ್ವಿಡೆ ಕುಟುಂಬಕ್ಕೆ ಸೇರಿದ್ದು, ಇದರಲ್ಲಿ ಕುದುರೆಗಳು ಮತ್ತು ಜೀಬ್ರಾಗಳೂ ಸೇರಿವೆ. ಕತ್ತೆ ಹಾಲು ಔಷಧೀಯ ಮತ್ತು ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಹಿಂದಿನ ಕಾಲದಲ್ಲಿ ಸಂಧಿವಾತ , ಕೆಮ್ಮು ಮತ್ತು ಗಾಯಗಳಿಗೆ ಚಿಕಿತ್ಸೆಯಾಗಿ ಬಳಸುತ್ತಿದ್ದರು ಎಂದು ತಿಳಿದಿಬಂದಿದೆ. ಕತ್ತೆ ಹಾಲಿನಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೇರಳವಾಗಿದ್ದು, ಆಫ್ರಿಕಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಇದನ್ನು ಕೆಮ್ಮು ಹಾಗೂ ಇತರ ಸಾಂಕ್ರಮಿಕ ಸೋಂಕುಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಹಸುಗಳು, ಆಡುಗಳು, ಕುರಿಗಳು, ಎಮ್ಮೆಗಳು ಮತ್ತು ಒಂಟೆಗಳಂತಹ ಇತರ ಡೈರಿ ಪ್ರಾಣಿಗಳ ಹಾಲಿಗೆ ಹೋಲಿಸಿದರೆ, ಕತ್ತೆ ಹಾಲು ಮಾನವನ ಎದೆ ಹಾಲನ್ನು ಹೋಲುತ್ತದೆ. ಆದ್ದರಿಂದ ಇದನ್ನು 19ನೇ ಶತಮಾನದಲ್ಲಿ ಅನಾಥ ಶಿಶುಗಳಿಗೆ ತಾಯಿಯ ಎದೆಹಾಲಿನ ರೂಪದಲ್ಲಿ ನೀಡಲಾಗುತ್ತಿತ್ತು ಎಂದು ಹೆಲ್ತ್​​ ಲೈನ್​​​ ಡಾಟ್​​​ ಕಾಮ್​​​ನಲ್ಲಿ ಪ್ರಕಟವಾದ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಕತ್ತೆ ಹಾಲಿನಲ್ಲಿರುವ ವಿಟಮಿನ್‌ಗಳು, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಅಗತ್ಯ ಕೊಬ್ಬಿನಾಮ್ಲಗಳು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಚರ್ಮದ ತಡೆಗೋಡೆಯನ್ನು ಪುನರುತ್ಪಾದಿಸಲು ಮತ್ತು ರಕ್ಷಿಸಲು ಅಗತ್ಯವಾದ ಎಲ್ಲಾ ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಹಾಲಿನ ಪ್ರೋಟೀನ್‌ಗಳಿಂದ ಹೆಚ್ಚಿನ ಪ್ರಯೋಜನಗಳು ಬರುತ್ತವೆ. ಕತ್ತೆ ಹಾಲು ಉತ್ತಮ ಮಾಯಿಶ್ಚರೈಸರ್ ಮತ್ತು ಹಾಲಿನ ಸ್ನಾನಕ್ಕೆ ಅತ್ಯುತ್ತಮವಾಗಿದೆ. ನಿಮ್ಮ ಚರ್ಮವನ್ನು ಕಾಂತಿಯುತವನ್ನಾಗಿ ಮಾಡುವಲ್ಲಿ ಕತ್ತೆಯ ಹಾಲು ಅತ್ಯಂತ ಉಪಯುಕ್ತವಾಗಿದೆ. ಇದಕ್ಕೆ ಉತ್ತಮ ನಿದರ್ಶನ ಎಂದರೆ ರಾಣಿ ಕ್ಲಿಯೋಪಾತ್ರ ಕತ್ತೆಗಳ ಹಾಲಿನಿಂದ ಸ್ನಾನ ಮಾಡುತ್ತಿದ್ದಳು ಎಂಬ ಬಗ್ಗೆ ಪುಸ್ತಕಗಳಲ್ಲಿ ಉಲ್ಲೇಖವಿದೆ ಹೇಳುತ್ತಾರೆ.

ಇದನ್ನೂ ಓದಿ: ಸೌತೆಕಾಯಿ ತಿನ್ನುವಾಗ ಸಿಪ್ಪೆ ತೆಗೆಯಬೇಡಿ, ಸಿಪ್ಪೆಯಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ

ಕತ್ತೆ ಹಾಲಿನ ಅನಾನುಕೂಲಗಳು:

ಕತ್ತೆ ಹಾಲಿನ ಒಂದು ದೊಡ್ಡ ಅನಾನುಕೂಲವೆಂದರೆ ಇದು ಸಾಕಷ್ಟು ದುಬಾರಿಯಾಗಿದೆ. ಇದಲ್ಲದೇ ಈ ಹಾಲು ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿರುವುದರಿಂದ, ಹಾಲನ್ನು ಬಯಸಿದರೆ ಮಾರುಕಟ್ಟೆಯಲ್ಲಿ ಪೌಡರ್​​ ರೂಪದಲ್ಲಿ ಖರೀದಿಸಬಹುದು. ಆದರೆ ಈ ಪೌಡರ್​​ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಜೊತೆಗೆ ಹಾಲಿನಲ್ಲಿರುವ ಲಾಕ್ಟೋಸ್​​​ ಅಂಶವು ಹೊಟ್ಟೆ ಉಬ್ಬರ, ಆಸಿಡಿಟಿ ಮುಂತಾದ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 7:00 am, Thu, 30 March 23

Follow Us
TV9 Web
TV9 Web

TV9 Kannada

Read More
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!