Summer Health Tips: ಸೌತೆಕಾಯಿ ತಿನ್ನುವಾಗ ಸಿಪ್ಪೆ ತೆಗೆಯಬೇಡಿ, ಸಿಪ್ಪೆಯಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ

ನೀವು ಸೌತೆಯನ್ನು ಸಿಪ್ಪೆ ತೆಗೆಯದೇ ತಿನ್ನುವುದರಿಂದ ಸಾಕಷ್ಟು ಪೋಷಣೆಯನ್ನು ಪಡೆಯಬಹುದು. ಇದರ ಸಿಪ್ಪೆಯಲ್ಲಿ ವಿಟಮಿನ್ ಕೆ ಮತ್ತು ವಿಟಮಿನ್ ಸಿ ಸೇರಿದಂತೆ ಅನೇಕ ಖನಿಜಗಳು ಸಮೃದ್ಧವಾಗಿದೆ.

Summer Health Tips: ಸೌತೆಕಾಯಿ ತಿನ್ನುವಾಗ ಸಿಪ್ಪೆ ತೆಗೆಯಬೇಡಿ, ಸಿಪ್ಪೆಯಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ
ಸಾಂಧರ್ಬಿಕ ಚಿತ್ರImage Credit source: GreenDNA
Follow us
ಅಕ್ಷತಾ ವರ್ಕಾಡಿ
|

Updated on: Mar 29, 2023 | 7:00 AM

ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸುವ ಆಹಾರಗಳಲ್ಲಿ ಸೌತೆಕಾಯಿಯೂ ಒಂದು. ಇದು ನಿಮಗೆ ಚೈತನ್ಯದ ಜೊತೆಗೆ ತ್ವರಿತ ತಾಜಾತನವನ್ನು ನೀಡುತ್ತದೆ. ಸೌತೆಕಾಯಿಯನ್ನು ಹಲವಾರು ವಿಧಗಳಲ್ಲಿ ಅಂದರೆ ಊಟ, ಸಲಾಡ್ ಅಥವಾ ಉಪ್ಪಿಕಾಯಿಯಾಗಿಯೂ ತಿನ್ನಬಹುದಾಗಿದೆ. ವೆಬ್‌ ಎಂ ಡಿ ಯಲ್ಲಿ ಪ್ರಕಟವಾದ ಸುದ್ದಿ ಲೇಖನವೊಂದರ ಪ್ರಕಾರ, ನೀವು ಸೌತೆಯನ್ನು ಸಿಪ್ಪೆ ತೆಗೆಯದೇ ತಿನ್ನುವುದರಿಂದ ಸಾಕಷ್ಟು ಪೋಷಣೆಯನ್ನು ಪಡೆಯಬಹುದು. ಇದರ ಸಿಪ್ಪೆಯಲ್ಲಿ ವಿಟಮಿನ್ ಕೆ ಮತ್ತು ವಿಟಮಿನ್ ಸಿ ಸೇರಿದಂತೆ ಅನೇಕ ಖನಿಜಗಳು ಸಮೃದ್ಧವಾಗಿದೆ ಎಂದು ತಿಳಿಸಿದೆ.

ಆದರೆ ನೀವು ಸೌತೆಕಾಯಿಯನ್ನು ತಿನ್ನುವ ಮೊದಲು ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಬೆಳೆದ ಸೌತೆಕಾಯಿ ತಿನ್ನುವ ಜನರಿಗಿಂತ ಮಾರುಕಟ್ಟೆಯಿಂದ ಖರೀದಿಸಿ ತಿನ್ನುವವರೇ ಹೆಚ್ಚು. ಆದ್ದರಿಂದ ಆದ್ದರಿಂದ ಸೌತೆಕಾಯಿಗಳನ್ನು ತಿನ್ನುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆಯುವುದು ಮುಖ್ಯ, ಇಲ್ಲದಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ನೀವು ಸೌತೆಕಾಯಿಯನ್ನು ಬಿಸಿ ನೀರಿನಿಂದ ತೊಳೆದ ನಂತರ ತಿಂದರೆ, ಅದರಲ್ಲಿನ ಸಿಂಥೆಟಿಕ್ ಮೇಣದ ಹಾನಿಯಿಂದ ನಿಮ್ಮನ್ನು ರಕ್ಷಿಸಬಹುದು. ಸೌತೆಕಾಯಿಗಳು ವಿಟಮಿನ್ ಸಿ ಮತ್ತು ಕೆ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸೇರಿದಂತೆ ಪೋಷಕಾಂಶಗಳಿಂದ ತುಂಬಿವೆ. ಅವು ಆಹಾರದ ಫೈಬರ್‌ನ ಉತ್ತಮ ಮೂಲವಾಗಿದ್ದು, ಇದು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ತಂಗಳನ್ನ ಸೇವಿಸುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳಿ

ಜೊತೆಗೆ ಸೌತೆಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಜೀವಕೋಶದ ಹಾನಿಯಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಾದ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಫೈಬರ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಂಶಗಳು ಸಾಕಷ್ಟು ಕಂಡುಬರುತ್ತವೆ. ಸೌತೆಕಾಯಿಗಳನ್ನು ಸಲಾಡ್ ಮತ್ತು ಜ್ಯೂಸ್ ರೂಪದಲ್ಲಿ ನಿಯಮಿತವಾಗಿ ತೆಗೆದುಕೊಳ್ಳಬೇಕು. ಇದು ಬೇಸಿಗೆ ಕಾಲದಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿದೆ. ಈ ಋತುವಿನಲ್ಲಿ ಇದನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕು. ಸೌತೆಕಾಯಿಯನ್ನು ಪ್ರತಿನಿತ್ಯ ತಿಂದರೆ ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ. ಇದನ್ನು ಸೇವಿಸುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ