AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Decor Tips: ಮನೆಯ ಒಳಾಂಗಣ ನೋಟ ಹೆಚ್ಚಿಸಲು ಇಲ್ಲಿದೆ ಅಲಂಕಾರಿಕ ಸಲಹೆಗಳು

ಮನೆಯ ಒಳಾಂಗಿನ ವಿನ್ಯಾಸವನ್ನು ಆಗಾಗ್ಗೆ ಬದಲಿಸುತ್ತಿರುವುದರಿಂದ, ಅದು ಮನೆಗೆ ಹೊಸತನದ ಹೊಳಪನ್ನು ನೀಡುತ್ತದೆ. ನಮ್ಮ ಮನಸ್ಸಿಗೂ ಅದು ಮುದವನ್ನು ನೀಡುತ್ತದೆ. ಮನೆಯ ಡೆಕೋಟ್ ಐಟಂಗಳಿಂದ ಹಿಡಿದು ಗೋಡೆಗೆ ಬಣ್ಣ ಬಳಿಯುವವರೆಗೆ, ಮನೆಯ ಒಳಾಂಗಣ ನೋಟವನ್ನು ಇನ್ನಷ್ಟು ಸುಂದರಗೊಳಿಸುವ ಕೆಲವೊಂದು ಸಲಹೆಗಳು ಇಲ್ಲಿವೆ.

Home Decor Tips: ಮನೆಯ ಒಳಾಂಗಣ ನೋಟ ಹೆಚ್ಚಿಸಲು ಇಲ್ಲಿದೆ ಅಲಂಕಾರಿಕ ಸಲಹೆಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 28, 2023 | 4:23 PM

Share

ವಸಂತಕಾಲ ಬಂದೇ ಬಿಟ್ಟಿದೆ. ನಿಮ್ಮ ಮನೆಯ ಪೈಂಟಿಂಗ್‌ನಿಂದ ಹಿಡಿದು ಎಲ್ಲಾ ರೀತಿಯ ಮೇಕ್‌ಓವರ್ ಮಾಡಲು ಇದು ಸೂಕ್ತ ಸಮಯವಾಗಿದೆ. ಮನೆಯ ಒಳಾಂಗಣ ವಿನ್ಯಾಸವನ್ನು ಬದಲಿಸಿ ಮನೆಗೆ ಹೊಸ ನೋಟವನ್ನು ನೀಡಬೇಕೆಂದು ಎಲ್ಲರ ಕನಸು. ಅಂದ ಚಂದದ ಡೆಕೋರ್ ಪೀಸ್‌ಗಳನ್ನು ಮನೆಯ ಒಳಾಂಗಿನ ಅಲಂಕಾರಿಕ ವಸ್ತುಗಳನ್ನಾಗಿ ಇಡುವ ಮೂಲಕ ಮನೆಯ ಆಂತರಿಕ ನೋಟವನ್ನು ಇನ್ನಷ್ಟು ಶ್ರೀಮಂತಗೊಳಿಸಬಹುದು. ಡಿಸೈನ್‌ಕೆಫೆ ಮತ್ತು ಕ್ರ‍್ಪೆಂಟ್ರಿಯ ಸಹಸಂಸ್ಥಾಪಕಿ ಗೀತಾ ರಮಣನ್ ಅವರು ಮನೆಯ ಒಳಾಂಗಣ ವಿನ್ಯಾಸ ಪ್ರವೃತ್ತಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ನಮ್ಮ ವಾಸಸ್ಥಳವನ್ನು ಸೊಬಗು ಮತ್ತು ಕೌಶಲ್ಯದಿಂದ ತುಂಬಿರುವಂತೆ ಮಾಡುತ್ತದೆ.

ಮನೆಯ ಒಳಾಂಗಣಗಳು ರೋಮಾಂಚಕ ಬಣ್ಣಗಳಿಂದ ತುಂಬಿರಲಿ: ರೋಮಾಂಚಕ ಗುಲಾಬಿ, ಹಸಿರು ಮತ್ತು ನೀಲಿ ಬಣ್ಣಗಳಂತಹ ಗಾಢ ಬಣ್ಣಗಳು ಮನೆಯ ಒಳಾಂಗಣ ನೋಟದ ಸೌಂದರ್ಯವನ್ನು ಹೆಚ್ಚಿಸುತ್ತದೆ.

ನಿಮ್ಮ ಅಡುಗೆ ಸಲಕರಣೆಗಳು, ಟೈಲ್ ಬ್ಯಾಕ್‌ ಸ್ಟ್ಯಾಲಶ್‌ಗಳು ಮತ್ತು ಕಿಚನ್ ಕ್ಯಾಬಿನೆಟ್‌ಗಳಿಗೆ ಗಾಢ ಬಣ್ಣದ ಪೈಂಟ್ ಬಳಿಯಿರಿ.

ಟಿವಿ ಘಟಕದ ಗೋಡೆಯನ್ನು ಹೈಲೈಟ್ ಮಾಡಲು ಗಾಢ ರೋಮಾಂಚಕ ಬಣ್ಣವನ್ನು ಬಳಸಿ.

ಬೆಡ್‌ಸ್ಪೆಡ್‌ಗಳು ಮತ್ತು ಕಲಾಕೃತಿಗಳೊಂದಿಗೆ ನಿಮ್ಮ ಆಯ್ಕೆಯ ರೋಮಾಂಚಕ ಬಣ್ಣದ ಸ್ಪರ್ಶವನ್ನು ಸೇರಿಸುವ ಮೂಲಕ ನಿಮ್ಮ ಮಲಗುವ ಕೋಣೆಯನ್ನು ಇನ್ನಷ್ಟು ಸುಂದರಗೊಳಿಸಿ.

ಇದನ್ನೂ ಓದಿ: Home Decor Tips: ಮನೆಯ ಅಂದವನ್ನು ಹೆಚ್ಚಿಸಬೇಕೆ? ಈ ಟಿಪ್ಸ್ ಟ್ರೈ ಮಾಡಿ

ಆರ್ಟ್ ಡೆಕೋರ್ ಮತ್ತು ವಿಂಟೇಜ್ ವಿನ್ಯಾಸಗಳನ್ನು ಇರಿಸಿ: ವಿಂಟೇಜ್ ಶೈಲಿಯ ಹಳೆಯ ಡೆಕೋರ್ ಪೀಸ್‌ಗಳು ಮನೆಗೆ ಹೊಸ ಲುಕ್ ನೀಡುತ್ತದೆ. ಮನೆಯ ಗಾಢ ಬಣ್ಣದ ಪೈಂಟ್ ಹಾಗೂ ಈ ವಿಂಟೆಜ್ ಆರ್ಟ್ ಡೆಕೋರ್‌ಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ.

ಈ ಪ್ರವೃತ್ತಿಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದು ಇಲ್ಲಿದೆ.

ನಿಮ್ಮ ಡೈನಿಂಗ್ ಟೇಬಲ್‌ನ ಕುರ್ಚಿ ಸೋಫಾಗಳಲ್ಲಿ ಉಕ್ಕು, ತಾಮ್ರ ಮತ್ತು ಪಾಲಿಶ್ ಮಾಡಿದ ಕಂಚಿನಂತಹ ವಿವಿಧ ಲೋಹಿಯ ನೋಟವನ್ನು ನೀಡಿ. ಇದು ಮನೆಗೆ ವಿಂಟೇಜ್ ಲುಕ್ ಕೊಡುತ್ತದೆ.

ಚಿನ್ನದ ಬಣ್ಣದ ಟೇಬಲ್‌ಗಳು ಅಥವಾ ಮನೆಯ ಐಷಾರಾಮಿ ನೋಟಕ್ಕಾಗಿ ಚಿನ್ನದ ಬಣ್ಣದ ಹಿಡಿಕೆಯನ್ನು ಹೊಂದಿರುವ ಕ್ಯಾಬಿನೆಟ್‌ಗಳನ್ನು ರಚಿಸಿ.

ಮನೆಯ ಒಳಗೆ ಸೂಕ್ಷ್ಮವಾದ ಹಾಗೂ ಶ್ರೀಮಂತ ವಾತಾವರಣವನ್ನು ಸಾಧಿಸಲು ಸ್ಕಲ್ಲೋಪ್ಡ್ ಅಂಚುಗಳು, ಅಮೃತಶಿಲೆ ಮತ್ತು ಕಂಚಿನ ಸ್ಪರ್ಶಗಳೊಂದಿಗೆ ಆರ್ಟ್ ಡೆಕೋರ್‌ಗಳನ್ನು ಇರಿಸಿ.

ಮ್ಯಾಕ್ಸಿಮಲಿಸಂನನ್ನು ಮನೇಯ ಆಂತರಿಕ ಪೃವೃತ್ತಿಗಳಲ್ಲಿ ಬಳಸಿ: ಮ್ಯಾಕ್ಸಿಮಲಿಸಂ ಒಂದು ಜನಪ್ರಿಯ ಮನೆಯ ವಿನ್ಯಾಸದ ಪ್ರವೃತ್ತಿಯಾಗಿದೆ. ಇದು ಮನೆಗೆ ಸುಂದರವಾದ ನೋಟವನ್ನು ಒದಗಿಸುತ್ತದೆ.

ಇದನ್ನೂ ಓದಿ;

ಬಹುಮುಖ ಪೀಠೋಪಕರಣಗಳನ್ನು ಬಳಸುವುದು.

ಗಾಜು, ಮರದ ಕ್ಯಾಬಿನೆಟ್ರಿ, ವರ್ಣರಂಜಿತ ಡೆಕೋಟೈಲ್ಸ್, ಟಾಸ್ಕ್ ಲೈಟಿಂಗ್ಸ್​ನಂತಹ ವಿನ್ಯಾಸಗಳು ಮತ್ತು ಡೆಕೋರ್ ಪೀಸ್‌ಗಳನ್ನು ಮನೆಯಲ್ಲಿಡಿ. ಇದು ಮಾತ್ರವಲ್ಲದೆ ಮನೆಯ ಒಳಗೆ ಅಲ್ಲಲ್ಲಿ ಒಳಾಂಗಿನ ಗಿಡಗಗಳನ್ನು ಇಡುವ ಮೂಲಕ ಮನೆಗೆ ಹೊಸ ಲುಕ್ ಕೊಡಬಹುದು. ಮತ್ತು ಗೋಡೆಯ ಬಣ್ಣಕ್ಕೆ ಅನುಗುಣವಾಗಿ ಮ್ಯಾಚ್ ಆಗುವ ಕರ್ಟನ್ಸ್​ಗಳನ್ನು, ಸೋಫಾಸೆಟ್‌ಗಳನ್ನು ಅಳವಡಿಸಿ. ಅಲ್ಲಲ್ಲಿ ಡೆಕೋರ್ ಪೀಸ್‌ಗಳನ್ನು ಇರಿಸಿ. ಇದು ನಿಮ್ಮ ಮನೆಯ ನೋಟವನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತದೆ.

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್