Free Trip to Finland: 10 ಅದೃಷ್ಟವಂತರಿಗೆ ಸಿಗಲಿದೆ ಫಿನ್‌ಲ್ಯಾಂಡ್ ಉಚಿತ ಪ್ರವಾಸದ ಅವಕಾಶ
ಆ 10 ಅದೃಷ್ಟವಂತರಲ್ಲಿ ನೀವು ಒಬ್ಬರಾಗಬೇಕೆಂದರೆ ನೀವು ಮಾಡಬೇಕಾಗಿರುವುದು ಇಷ್ಟೇ, ಇಲ್ಲಿದೆ ಸಂಪೂರ್ಣ ಮಾಹಿತಿ.
ಉತ್ತರ ಯೂರೋಪಿನ ಒಂದು ಸುಂದರವಾದ ದೇಶವನ್ನು ಕಣ್ತುಂಬಿಸಿಕೊಳ್ಳಲು ಸಾಕಷ್ಟು ಜನರಿಗೆ ಕನಸಿರುತ್ತದೆ. ಆದರೆ ಇದೀಗಾ ನಿಮ್ಮ ಕನಸನ್ನು ಉಚಿತವಾಗಿ ನನಸು ಮಾಡುವ ಸಮಯ. ಹೌದು ನೀವು ಕೂಡ ಈ ಜೂನ್‌ನಲ್ಲಿ ಫಿನ್‌ಲ್ಯಾಂಡ್‌ನಲ್ಲಿ ನಾಲ್ಕು ದಿನಗಳ ವರೆಗೆ ಉಚಿತವಾಗಿ ಐಷಾರಾಮಿ ಜೀವನ ಕಳೆಯಬಹುದು. ಆದರೆ ಕೇವಲ 10 ಅದೃಷ್ಟವಂತರಿಗೆ ಮಾತ್ರ ಈ ಅವಕಾಶ ದೊರಯಲಿದೆ. ನೀವು ಕೂಡ ಆ 10 ಅದೃಷ್ಟವಂತರಲ್ಲಿ ಒಬ್ಬರಾಗಬೇಕೆಂದರೆ ಏನು ಮಾಡಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತೇವೆ.
ಮಾರ್ಚ್ 15ರಂದು @ourfinland ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫಿನ್‌ಲ್ಯಾಂಡ್ ಉಚಿತ ಪ್ರವಾಸದ ಅವಕಾಶದ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಜೂನ್‌ನಲ್ಲಿ ಫಿನ್‌ಲ್ಯಾಂಡ್‌ನಲ್ಲಿ ನಡೆಯುವ ವೈಯಕ್ತಿಕ ಮಾಸ್ಟರ್‌ಕ್ಲಾಸ್ ಆಫ್ ಹ್ಯಾಪಿನೆಸ್‌ನಲ್ಲಿ ಸಂತೋಷದ ಕೌಶಲ್ಯಗಳ ಬಗ್ಗೆ ಕಲಿಯಲು 4 ದಿನಗಳನ್ನು ಕಳೆಯುವ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಿ ಎಂದು ಪೋಸ್ಟ್ನಲ್ಲಿ ಬರೆದುಕೊಳ್ಳಲಾಗಿದೆ. ಇದಲ್ಲದೇ ಅರ್ಜಿ ಸಲ್ಲಿಸುವುದು ಹೇಗೆ ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಫಿನ್‌ಲ್ಯಾಂಡ್ ಉಚಿತ ಪ್ರವಾಸದ ಅದೃಷ್ಟವಂತರಾಗಲು ಅರ್ಜಿ ಸಲ್ಲಿಸುವುದು ಹೇಗೆ?
- ಹಂತ 1: ourfinland ವೆಬ್‌ಸೈಟ್‌ನಲ್ಲಿ ಸೈನ್-ಅಪ್ ಫಾರ್ಮ್ ಅನ್ನು ಭರ್ತಿ ಮಾಡಿ. (ಲಿಂಕ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೀಡಲಾಗಿದೆ.)
- ಹಂತ 2: ಸಾಮಾಜಿಕ ಮಾಧ್ಯಮ ಸವಾಲನ್ನು ಪೂರ್ಣಗೊಳಿಸಿ: ನೀವು ಮಾಸ್ಟರ್‌ಕ್ಲಾಸ್ ಆಫ್ ಹ್ಯಾಪಿನೆಸ್‌ಗೆ ಏಕೆ ಸೇರಲು ಬಯಸುತ್ತೀರಿ ಎಂಬುದನ್ನು ರೀಲ್ಸ್ ಅಥವಾ ವೀಡಿಯೋ ಮಾಡಿ. ಜೊತೆಗೆ #FindYourInnerFinn ಮತ್ತು #VisitFinland ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಮತ್ತು ನಿಮ್ಮ ವಿಷಯದಲ್ಲಿ @ourfinland ಅನ್ನು ಟ್ಯಾಗ್ ಮಾಡಿ.
- ಸೈನ್-ಅಪ್ ಫಾರ್ಮ್ ಅನ್ನು ಭರ್ತಿ ಮಾಡುವ ಮತ್ತು ಸಾಮಾಜಿಕ ಮಾಧ್ಯಮ ಸವಾಲನ್ನು ಪೂರ್ಣಗೊಳಿಸಿದ ಅರ್ಜಿದಾರರನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಪ್ಲಿಕೇಶನ್ ಏಪ್ರಿಲ್ 2, 2023 ರಂದು ಕೊನೆಗೊಳ್ಳುತ್ತದೆ, ಶುಭವಾಗಲಿ ಎಂದು ಪೋಸ್ಟ್ ನಲ್ಲಿ ಬರೆಯಾಲಾಗಿದೆ ಆ ಪೋಸ್ಟ್ ಇಲ್ಲಿದೆ ನೋಡಿ.
View this post on Instagram
ಪ್ರಮುಖವಾಗಿ ಮಾಸ್ಟರ್‌ಕ್ಲಾಸ್ ಆಫ್ ಹ್ಯಾಪಿನೆಸ್ ಎಂಬ ವಿಷಯದ ಅಡಿಯಲ್ಲಿ ಫಿನ್ಲೆಂಡ್‌ನ ಪ್ರವಾಸೋದ್ಯಮ ಇಲಾಖೆಯು ಜೂನ್‌ನಲ್ಲಿ ಲೇಕ್‌ಲ್ಯಾಂಡ್‌ನಲ್ಲಿರುವ ಕುರು ರೆಸಾರ್ಟ್‌ಗೆ ನಾಲ್ಕು ದಿನಗಳ ಪ್ರವಾಸಕ್ಕಾಗಿ 10 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಪ್ರಕಟಿಸಿದೆ. ಇಲ್ಲಿ 10 ಅದೃಷ್ಟಶಾಲಿಗಳು ಹಾಗೂ ಪರಿಣಿತ ತರಬೇತುದಾರರಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿಯಲ್ಲಿ ತರಬೇತುದಾರರು ಸಂತೋಷವಾಗಿರಲು ಸಹಾಯ ಮಾಡುವ ಸಮತೋಲಿತ ಜೀವನ ವಿಧಾನದ ಕುರಿತು ಮಾರ್ಗದರ್ಶನ ನೀಡುತ್ತಾರೆ.
ಇದನ್ನೂ ಓದಿ: ಜೀವನದಲ್ಲಿ ಒಮ್ಮೆಯಾದ್ರೂ ಈ ದೇವಸ್ಥಾನಗಳಿಗೆ ಭೇಟಿ ನೀಡಲೇಬೇಕು
ಭಾಗವಹಿಸುವವರಿಗೆ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ತಜ್ಞರು ತರಬೇತಿ ನೀಡುತ್ತಾರೆ: ಪ್ರಕೃತಿ ಮತ್ತು ಜೀವನಶೈಲಿ, ಆರೋಗ್ಯ , ಆಹಾರ ಮತ್ತು ಯೋಗಕ್ಷೇಮ. ನಾಲ್ಕು ದಿನಗಳಲ್ಲಿ, ಪ್ರಕೃತಿಗೆ ಸಂಬಂಧಿಸಿದಂತೆ ಸಮತೋಲಿತ ಜೀವನಶೈಲಿಯನ್ನು ಪರಿಚಯಿಸಲಾಗುತ್ತದೆ. ಪ್ರಪಂಚದಾದ್ಯಂತ ಆಯ್ಕೆಯಾದ 10 ಅದೃಷ್ಟಶಾಲಿಗಳಲ್ಲಿ ಫಿನ್‌ಲ್ಯಾಂಡ್‌ನಲ್ಲಿ ನಾಲ್ಕು ದಿನಗಳ ಮಾಸ್ಟರ್‌ಕ್ಲಾಸ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಇದು ಜೂನ್ 11 ರಿಂದ 16 ವರೆಗೆ ಇರುತ್ತದೆ. ಸೈನ್ ಅಪ್ ಫಾರ್ಮ್ ಹೆಸರು, ವಯಸ್ಸು, ರಾಷ್ಟ್ರೀಯತೆ ಮತ್ತು ನಿಮ್ಮ ಇನ್ಸ್ಟಾಗ್ರಾಮ್ ಅಥವಾ ಟಿಕ್ಟಾಕ್ ಹ್ಯಾಂಡಲ್‌ನಂತಹ ವಿವರಗಳನ್ನು ನೀಡುವುದು ಅಗತ್ಯವಾಗಿದೆ.
ಫಿನ್‌ಲ್ಯಾಂಡ್‌ನ ಮಾಸ್ಟರ್‌ಕ್ಲಾಸ್ ಆಫ್ ಹ್ಯಾಪಿನೆಸ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 2, 2023. ನೀವು ಅರ್ಜಿ ಸಲ್ಲಿಸಲು 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ನಾಲ್ಕು ದಿನಗಳ ಮಾಸ್ಟರ್‌ಕ್ಲಾಸ್‌ನಲ್ಲಿ ಭಾಗವಹಿಸುವವರು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಬೇಕು. ಚಿತ್ರೀಕರಿಸಿದ ವಿಡಿಯೋವನ್ನು ಫಿನ್‌ಲ್ಯಾಂಡ್‌ನ ಪ್ರವಾಸೋದ್ಯಮ ಜಾಹೀರಾತಿಗೆ ನೀಡಲು ಬಳಸಬಹುದು. ಇಂಗ್ಲಿಷ್ ಮಾತನಾಡಲು ಬರಬೇಕು ಮತ್ತು ನೀವು ಯಾವುದೇ ಬ್ರ್ಯಾಂಡ್ ಅಥವಾ ಕಂಪನಿಯನ್ನು ಪ್ರತಿನಿಧಿಸಬಾರದು.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:02 am, Wed, 29 March 23