Ram Navami Festival Recipes: ರಾಮನವಮಿಗೆ ವಿಶೇಷ ಖಾದ್ಯಗಳನ್ನು ತಯಾರಿಸಿ, ಇಲ್ಲಿದೆ ಪಾಕ ವಿಧಾನ

ರಾಮ ನವಮಿ ಈ ವರ್ಷ ಮಾರ್ಚ್ 30ಕ್ಕೆ ಬಂದಿದೆ. ಆದ್ದರಿಂದ ಈ ಹಬ್ಬದ ಸಮಯದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ, ಇಲ್ಲಿದೆ ಪಾಕ ವಿಧಾನ.

ಅಕ್ಷತಾ ವರ್ಕಾಡಿ
|

Updated on:Mar 29, 2023 | 3:55 PM

ರಾಮ ನವಮಿ ಹೆಸರೇ ಸೂಚಿಸುವಂತೆ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಲ್ಲಿ ಶ್ರೀರಾಮನ ಜನ್ಮ ದಿನವಾಗಿ ರಾಮ ನವಮಿಯನ್ನು ಆಚರಿಸಲಾಗುವುದು. ರಾಮ ನವಮಿ ಈ ವರ್ಷ ಮಾರ್ಚ್ 30ಕ್ಕೆ ಬಂದಿದೆ. ಆದ್ದರಿಂದ ಈ ಹಬ್ಬದ ಸಮಯದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ.

1 / 6
ಅಕ್ಕಿ ಪಾಯಸ: ಈ ಖಾದ್ಯವನ್ನು ರಾಮ ನವಮಿ ದಿನ ಶ್ರೀರಾಮನಿಗೆ ನೈವೇದ್ಯವಾಗಿ ಇಡಲಾಗುತ್ತದೆ. 1 ಕಪ್ ಬಾಸ್ಮತಿ ಅಕ್ಕಿಯನ್ನು 30 ನಿಮಿಷಗಳ ಕಾಲ ತೊಳೆದು ನೆನೆಸಿಡಿ. ನಂತರ ಅಕ್ಕಿಯನ್ನು 2 ಕಪ್ ನೀರು ಮತ್ತು 1 ಕಪ್ ಹಾಲಿನೊಂದಿಗೆ ಸೇರಿಸಿ. 1/2 ಕಪ್ ಸಕ್ಕರೆ, ಒಂದು ಚಿಟಿಕೆ ಕೇಸರಿ, ಮತ್ತು 2-3 ಪುಡಿಮಾಡಿದ ಏಲಕ್ಕಿ ಬೀಜಗಳನ್ನು ಸೇರಿಸಿ. ಎಲ್ಲವನ್ನೂ ಕಡಿಮೆ ಉರಿಯಲ್ಲಿ ತಳ ಹಿಡಿಯದಂತೆ ಬೇಯಿಸಿ.

2 / 6
ತೆಂಗಿನಕಾಯಿ ಲಡ್ಡು : ತೆಂಗಿನಕಾಯಿ ತುರಿ, ಸಕ್ಕರೆ ಮತ್ತು ಹಾಲಿನೊಂದಿಗೆ ತಯಾರಿಸಲಾದ ಸರಳ ಮತ್ತು ರುಚಿಕರವಾದ ಪ್ರಸಾದವಾಗಿದೆ. ತೆಂಗಿನಕಾಯಿ ಲಡ್ಡು ಮಾಡಲು, 1 ಕಪ್ ತುರಿದ ತೆಂಗಿನಕಾಯಿ, 1/2 ಕಪ್ ಸಕ್ಕರೆ ಮತ್ತು 1/4 ಕಪ್ ಹಾಲನ್ನು ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ ಕುದಿಸಿ. ಮಿಶ್ರಣವು ದಪ್ಪವಾಗುವವರೆಗೆ ಮತ್ತು ಪ್ಯಾನ್‌ನ ಬದಿಗಳನ್ನು ಬಿಡಲು ಪ್ರಾರಂಭಿಸುವವರೆಗೆ ನಿರಂತರವಾಗಿ ಮಧ್ಯಮ ಉರಿಯಲ್ಲಿ ಬೇಯಿಸಿ.ನಂತರ ಉರಿಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ, ಸಣ್ಣ ಉಂಡೆಗಳನ್ನು ಮಾಡಿ ಮತ್ತು ಗೋಡಂಬಿ, ದ್ರಾಕ್ಷಿಗಳಿಂದ ಅಲಂಕರಿಸಿ.

3 / 6
ಬೆಸನ್ ಲಡ್ಡು: ಬೆಸನ್​​ ಲಡ್ಡು ಮಾಡಲು ಬೇಳೆ ಹಿಟ್ಟು, ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಗೂ ಡ್ರೈ ಫ್ರೂಟ್ಸ್​​​​ಗಳನ್ನು ತುಪ್ಪದಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಈ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ.

4 / 6
ಸಿಹಿ ಅವಲಕ್ಕಿ ಪ್ರಸಾದ: ಅವಲಕ್ಕಿಯನ್ನು ಬೆಲ್ಲ, ತುರಿದ ತೆಂಗಿನಕಾಯಿ ಮತ್ತು ಹುರಿದ ಕಡಲೆಕಾಯಿಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಜೊತೆಗೆ ಬಾಳೆಹಣ್ಣು ಅಥವಾ ಮಾವಿನ ಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ ಮತ್ತು ಅಲಂಕರಿಸಿ.

5 / 6
ಪಂಜಿರಿ: ಪಂಜಿರಿ ತಯಾರಿಸಲು, ಗೋಧಿ ಹಿಟ್ಟನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ತುಪ್ಪದಲ್ಲಿ ಹುರಿಯಿರಿ. ಸ್ವಲ್ಪ ಸಕ್ಕರೆ, ಕೆಲವು ಡ್ರೈ ಫ್ರೂಟ್ಸ್​​​ಗಳನ್ನು ಮತ್ತು ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ತಣ್ಣಗಾಗಲು ಬಿಡಿ. ಈ ಸಿಹಿಯಲ್ಲಿ ಪೌಷ್ಠಿಕಾಂಶ ಹೇರಳವಾಗಿದ್ದು, ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

6 / 6

Published On - 3:55 pm, Wed, 29 March 23

Follow us
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!

ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು

ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್

ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ

ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ

ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!

ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್

ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!

ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?

ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?