Ram Navami 2023: ಭಾರತದ ಪ್ರಸಿದ್ಧ ಶ್ರೀರಾಮನ ದೇವಾಲಯಗಳು ಎಲ್ಲೆಲ್ಲಿವೆ ಗೊತ್ತಾ?

ಭಾರತದಾದ್ಯಂತ ಶ್ರೀರಾಮ ಹುಟ್ಟಿದ ದಿನದಂದು ರಾಮನವಮಿ ಆಚರಿಸಲಾಗುತ್ತದೆ. ಇದು ಹಿಂದೂಗಳ ಪ್ರಮುಖ ಹಬ್ಬವೂ ಹೌದು. ಮಾರ್ಚ್‌ 30 ರಂದು ರಾಮನವಮಿಯನ್ನು ಆಚರಿಸಲಾಗುತ್ತದೆ. ರಾಮನವಮಿಯಂದೆ ಎಲ್ಲಡೆ ರಾಮನ ಸ್ಮರಣೆ ನಡೆಯುತ್ತದೆ. ಅಲ್ಲದೇ ಶ್ರೀರಾಮನ ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರಗಳು, ಹಾಡು ಭಜನೆಗಳು ನಡೆಯುತ್ತವೆ. ರಾಮಾಯಣದಲ್ಲಿರುವ ಬರುವ ಪ್ರಮುಖ ವ್ಯಕ್ತಿ. ಮನುಕುಲಕ್ಕೆ ಜೀವನದ ಪಾಠ, ಧರ್ಮ-ಕರ್ಮಗಳ ನಿರ್ವಹಣೆ ಹಾಗೂ ಸತ್ಯ ಸಂಗತಿಯ ಮೂಲಕ ತಿಳಿಸಿದ ಮಹಾಪ್ರಭು. ಶ್ರೀರಾಮ. ಪುರುಷೋತ್ತಮ, ಜಾನಕೀವಲ್ಲಭ, ತ್ರಿವಿಕ್ರಮಯ ಹೀಗೆ ಹಲವು ಹೆಸರಿನಿಂದ ಕರೆಯಲ್ಪಡುವ ರಾಮನಿಗೆ ದೇಶದ ಹಲವೆಡೆ ಹಲವು ಪ್ರಸಿದ್ಧ ದೇವಾಲಯಗಳಿವೆ. ಅವು ಈ ಕೆಳಗಿನಂತಿವೆ ನೋಡಿ.

ರಮೇಶ್ ಬಿ. ಜವಳಗೇರಾ
|

Updated on:Mar 29, 2023 | 3:45 PM

ಜಮ್ಮು ಕಾಶ್ಮೀರದ ರಘುನಾಥ ದೇಗುಲ: ಜಮ್ಮು ನಗರದ ಪಶ್ಚಿಮ ಭಾಗದಲ್ಲಿರುವ ಸುಯಿ ಎಂಬಲ್ಲಿರುವ ರಘುನಾಥ ದೇವಾಲಯ ಉತ್ತರಭಾರತದಲ್ಲೇ ಪ್ರಸಿದ್ಧಿ ಹೊಂದಿದೆ. 1822-1860ರ ಅವಧಿಯಲ್ಲಿ ಜಮ್ಮುಕಾಶ್ಮೀರದಲ್ಲಿರುವ ಈ ರಘುನಾಥ ಮಂದಿರ ನಿರ್ಮಾಣವಾಗಿದೆ. ಮಹಾರಾಜ ಗುಲಾಬ್‌ ಸಿಂಗ್‌ ಈ ದೇವಾಲಯ ನಿರ್ಮಾಣ ಆರಂಭಿಸಿದರು. ತಂದೆಯ ಕಾಲಾನಂತರ ಅವರ ಮಗ ಮಹಾರಾಜ ರಣಬೀರ್‌ ಸಿಂಗ್‌ ಈ ದೇವಾಲಯ ನಿರ್ಮಾಣ ಕಾರ್ಯವನ್ನು ಮುಕ್ತಾಯಗೊಳಿಸಿದರು. 1835ರಲ್ಲಿ ಶುರುವಾದ ನವೀಕರಣ ಕಾಮಗಾರಿ 1860 ರಲ್ಲಿ ಪೂರ್ಣಗೊಂಡ ಬಗ್ಗೆ ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಜಮ್ಮುಕಾಶ್ಮೀರ ನಗರದ ಹೃದಯಭಾಗದಲ್ಲಿರುವ ರಘುನಾಥ ಮಂದಿರ ಭವ್ಯ ದೇವಾಲಯವಾಗಿದೆ. ದೇವಾಲಯದ ಶಿಲ್ಪಗಳು, ಆಕರ್ಷಣೆಯಿಂದ ಕೂಡಿದ್ದು, ನೋಡುಗರನ್ನು ಸೆಳೆಯುತ್ತವೆ.  ದೊಂದು 7 ಮಂದಿರಗಳಿರುವ ಬೃಹತ್‌ ಮಂದಿರ ಸಮುಚ್ಛಯ. ಅನೇಕ ದೇವಾನುದೇವತೆಗಳಿದ್ದರೂ ರಾಮನೇ ಅಧಿದೈವ. ದ್ವಾರ ಗೋಪುರ ಸಿಖ್‌ಶೈಲಿಯಲ್ಲಿದ್ದರೆ ಉಳಿದವು ಮೊಗಲ್‌ ವಾಸ್ತು ಶೈಲಿಯನ್ನು ಹೊಂದಿವೆ. ಇಲ್ಲಿರುವ 7 ಮಂದಿರಗಳಲ್ಲಿ ರಾಮಾಯಣದ ದೇವ, ದೇವತೆಗಳ ಮೂರ್ತಿಗಳಿವೆ.

1 / 10
ತಮಿಳುನಾಡಿನ ರಾಮಸ್ವಾಮಿ ದೇವಾಲಯ:  ದಕ್ಷಿಣಭಾರತದಲ್ಲಿರುವ ಸುಂದರ ಮತ್ತು ಪ್ರಸಿದ್ಧ ರಾಮನ ದೇವಸ್ಥಾನಗಳಲ್ಲಿ ತಮಿಳುನಾಡಿನ ರಾಮಸ್ವಾಮಿ ದೇವಾಲಯ ಸಹ ಒಂದಾಗಿದೆ. ಕುಂಭಕೋಣಂನಲ್ಲಿರುವ ಈ ದೇವಸ್ಥಾನದಲ್ಲಿ ರಾಮನನ್ನು ಮಾತ್ರವಲ್ಲ ರಾಮನ ಸಹೋದರರಾದ ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ರಾಮಭಂಟ ಹನುಮನನ್ನೂ ಕೂಡಾ ಇಲ್ಲಿ ಪೂಜಿಸಲಾಗುತ್ತದೆ. ರಾಮನವಮಿಯನ್ನು ಬಲು ಸಡಗರದಿಂದ ಇಲ್ಲಿ ಆಚರಿಸಲಾಗುತ್ತದೆ.

2 / 10
ಕೋದಂಡರಾಮಸ್ವಾಮಿ ದೇವಸ್ಥಾನ, ಚಿಕ್ಕಮಗಳೂರು: ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕೊಂಡಂಡ ರಾಮಸ್ವಾಮಿ ದೇವಾಲಯವು ಭಾರತದ ಪ್ರಸಿದ್ಧ ರಾಮ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಹೊಯ್ಸಳ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪ ಒಳಗೊಂಡಿದೆ. ಹಿರೇಮಗಳೂರಿನಲ್ಲಿ, ಪರಶುರಾಮನು ತನ್ನ ಮದುವೆಯ ದೃಶ್ಯಗಳನ್ನು ತೋರಿಸುವ ವಿಗ್ರಹಗಳ ಇವೆ

3 / 10
ಶ್ರೀ ರಾಮತೀರ್ಥ ದೇವಸ್ಥಾನ, ಅಮೃತಸರ​:  ಲಂಕೆಯಿಂದ ಬಂದ ನಂತರ ರಾಮನು ಸೀತೆಯನ್ನು ಕೆಲವು ಕಾಲ ತ್ಯಜಿಸುತ್ತಾನೆ. ವಾಲ್ಮೀಕಿ ಋಷಿಗಳ ಆಶ್ರಮದಲ್ಲಿ ಆಕೆ ಆಶ್ರಯ ಪಡೆದ ಸ್ಥಳವೇ ಶ್ರೀರಾಮತೀರ್ಥ. ಅದೇ ಸ್ಥಳದಲ್ಲಿ ಅವಳು ಲವ ಮತ್ತು ಕುಶರಿಗೆ ಜನ್ಮ ನೀಡುತ್ತಾಳೆ. ಶ್ರೀರಾಮ ತೀರ್ಥ ದೇವಸ್ಥಾನದಲ್ಲಿ ಲವ - ಕುಶರಿಗೂ ಮತ್ತು ಭಗವಾನ್ ರಾಮನ ಸೈನ್ಯದ ನಡುವೆ ಯುದ್ಧ ನಡೆದಿತ್ತು. ರಾಮಾಯಣದ ಸಂಪೂರ್ಣ ಮಹಾಕಾವ್ಯವನ್ನು ಈ ಆಶ್ರಮದಲ್ಲಿ ವಾಲ್ಮೀಕಿ ಮಹರ್ಷಿಗಳು ರಚಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಶ್ರೀರಾಮತೀರ್ಥ ದೇವಾಲಯವು ಭಾರತದ ಅತ್ಯಂತ ಪವಿತ್ರವಾದ ರಾಮಮಂದಿರಗಳಲ್ಲಿ ಒಂದಾಗಿದೆ.

4 / 10
ಅಯೋಧ್ಯೆಯು ಭಗವಾನ್ ರಾಮನ ಜನ್ಮಸ್ಥಳವಾಗಿದೆ. ಕನಕ ಭವನ ದೇವಾಲಯವು ಅಯೋಧ್ಯೆಯ ಅತ್ಯುತ್ತಮ ರಾಮಮಂದಿರಗಳಲ್ಲಿ ಒಂದಾಗಿದೆ.  ಈ ದೇವಾಲಯವನ್ನು ಮೂಲತಃ ರಾಮನ ಮಲತಾಯಿ ಕೈಕೇಯಿ ಅವರ ಮದುವೆಯ ಉಡುಗೊರೆಯಾಗಿ ನಿರ್ಮಿಸಿದರು. ನಂತರ, ಅದನ್ನು ಮರುನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ.

5 / 10
ಮಧ್ಯಪ್ರದೇಶದಲ್ಲಿರುವ ರಾಮ್ ರಾಜಾ ಮಂದಿರ ರಾಮನನ್ನು ಪೂಜಿಸುವ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವನ್ನು ಓರ್ಚಾ ದೇವಸ್ಥಾನ ಎಂದು ಸಹ ಕರೆಯುತ್ತಾರೆ. ಇಲ್ಲಿರುವ ಚತುರ್ಭುಜ ದೇವಾಲಯದಲ್ಲಿಯೂ ರಾಮನನ್ನು ಪೂಜಿಸಲಾಗುತ್ತದೆ.

6 / 10
ತೆಲಂಗಾಣದಲ್ಲಿರುವ ಈ ಭದ್ರಾಚಲಂ ದೇವಸ್ಥಾನ, ಶ್ರೀರಾಮ ಕ್ಷೇತ್ರಗಳಲ್ಲಿ ಪ್ರಸಿದ್ಧವಾದುದು. ಗೋದಾವರಿ ನದಿ ದಂಡೆಯಲ್ಲಿ 17ನೇ ಶತಮಾನದಲ್ಲಿ ನಿರ್ಮಾಣವಾದ ಈ ಸೀತಾರಾಮರ ದೇಗುಲವಿದ್ದು, ಇಲ್ಲಿದ್ದ ಪರಮಭಕ್ತ ಭದ್ರನ ದೆಸೆಯಿಂದಾಗಿಯೇ ಈ ನೆಲವು ಭದ್ರಾಚಲ ಎಂಬ ಹೆಸರು ಪಡೆಯಿತು. ಪೌರಾಣಿಕ ಹಿನ್ನಲೆಯ ಪ್ರಕಾರ, ತಂದೆ ದಶರಥ ಮಾತಿನಂತೆ ಕಾಡಿಗೆ ಹೋದ ಶ್ರೀರಾಮನು ಭದ್ರಾಚಲಂ ಇರುವ ದಂಡಕಾರಣ್ಯದಲ್ಲಿ ಹೆಚ್ಚು ಕಾಲ ನೆಲೆಸಿದ್ದನು. ಈ ಕಾಡಿನಲ್ಲಿಯೇ ಒಂದು ಗುಡಿಸಲು ಕಟ್ಟಿಕೊಂಡು ಸಹೋದರ ಲಕ್ಷ್ಮಣ ಮತ್ತು ಸೀತೆಯೊಂದಿಗೆ ವಾಸಿಸಿದ್ದನು ಎಂದು ಹೇಳಲಾಗುತ್ತದೆ. ಇಲ್ಲಿ ವಾಸಿಸುವಾಗಲೇ ಮಾರೀಚನು ಬಂಗಾರದ ಜಿಂಕೆಯಾಗಿ ಸೀತೆಯ ಮನಸ್ಸನ್ನು ಸೆಳೆದ, ರಾವಣನು ಸೀತೆಯನ್ನು ಅಪಹರಣ ಮಾಡಿದ ಎನ್ನುವ ಕತೆಗಳೂ ಇವೆ.

7 / 10
ನಾಸಿಕ್‌ ನ ಕಲಾರಾಮ ಮಂದಿರವು ಮಹಾರಾಷ್ಟ್ರದ ನಾಸಿಕ್‌ನ ಪಂಚವಟಿ ಪ್ರದೇಶದಲ್ಲಿರುವ ಭಾರತದ ಒಂದು ಪ್ರಸಿದ್ಧ ರಾಮಮಂದಿರವಾಗಿದೆ. ಕಲಾರಾಮ ಎಂದರೆ 'ಕಪ್ಪು ರಾಮ' ಎಂದರ್ಥ ಮತ್ತು ರಾಮನ 2 ಅಡಿ ಎತ್ತರದ ಕಪ್ಪು ಪ್ರತಿಮೆಯಿಂದಾಗಿ ಈ ದೇವಾಲಯಕ್ಕೆ ಈ ಹೆಸರು ಬಂದಿದೆ. ಸೀತಾದೇವಿ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ. ರಾಮನನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಿದಾಗ, ಹತ್ತನೇ ವರ್ಷದ ನಂತರ, ಅವನು ಸೀತೆ ಮತ್ತು ಲಕ್ಷ್ಮಣನೊಂದಿಗೆ ಪಂಚವಟಿಯಲ್ಲಿ ಗೋದಾವರಿ ನದಿಯ ಪಕ್ಕದಲ್ಲಿ ವಾಸಿಸಲು ಬಂದಿದ್ದನು ಎಂದು ನಂಬಲಾಗಿದೆ. ಒಮ್ಮೆ ಕನಸಿನಲ್ಲಿ ಸರ್ದಾರ್‌ ರಂಗರೂ ಓಧೇಕರ್‌ ಗೋದಾವರಿ ನದಿಯಲ್ಲಿ ಕಪ್ಪು ಕಲ್ಲಿನ ದೃಶ್ಯವನ್ನು ನೋಡುತ್ತಾರೆ. ಮರುದಿನ ನದಿಯಿಂದ ಆ ಕಪ್ಪು ಕಲ್ಲನ್ನು ತೆಗೆದು ಕಲಾರಾಮ ರಾಮ ಮಂದಿರಲ್ಲಿ ನಿರ್ಮಿಸಿದ್ದಾರೆ.

8 / 10
ರಾಮಮಂದಿರವಿದೆ. ಉತ್ತರಪ್ರದೇಶದ ಸರಯೂ ನದಿ ತೀರದಲ್ಲಿ ಈ ಮಂದಿರವಿದ್ದು, ಹಿಂದೂಗಳ ಪವಿತ್ರ ತೀರ್ಥಯಾತ್ರಾ ಸ್ಥಳವೆಂದು ಗುರುತಿಸಿಕೊಂಡಿದೆ.  ಪ್ರತಿ ವರ್ಷ ರಾಮನವಮಿಯಂದು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

9 / 10
ಕರ್ನಾಟಕದ ಹಂಪಿಯಲ್ಲಿರುವ ಪ್ರಸಿದ್ಧ ದೇವಸ್ಥಾನದಲ್ಲಿ ಹಂಪಿಯ ಕೋದಂಡರಾಮ ದೇವಸ್ಥಾನ ಸಹ ಒಂದಾಗಿದೆ. ಈ ದೇವಸ್ಥಾನದಲ್ಲಿ ರಾಮ, ಲಕ್ಷ್ಮಣ, ಸೀತೆಯನ್ನು ಪೂಜಿಸಲಾಗುತ್ತದೆ. ತುಂಗಭದ್ರಾ ನದಿ ತಟದಲ್ಲಿ ಸುಂದರವಾದ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಉತ್ತರಾಭಿಮುಖವಾಗಿ ಈ ದೇಗುಲವಿದ್ದು, ಎತ್ತರದ ಕೋದಂಡ (ಬಿಲ್ಲನ್ನು)ವನ್ನು ಹಿಡಿದು ಶ್ರೀರಾಮ ತನ್ನ ಪರಿವಾರದೊಂದಿಗೆ ನಿಂತಿರುವುದರಿಂದ ದೇವಾಲಯವನ್ನು ಕೋದಂಡರಾಮ ದೇವಸ್ಥಾನ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

10 / 10

Published On - 3:38 pm, Wed, 29 March 23

Follow us
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?

ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ